ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಮೆರಿಕಾದಲ್ಲಿ ಮತ್ತೋರ್ವ ಭಾರತೀಯನ ಬಲಿ ಪಡೆದ ದುಷ್ಕರ್ಮಿಗಳು

ಇತ್ತೀಚೆಗೆ ಅಮೆರಿಕಾದಲ್ಲಿ ಭಾರತೀಯರ ಸಾಲು ಸಾಲು ಸಾವಿನ ಸುದ್ಧಿ ಕೇಳಿಬರುತ್ತಲೆ ಇದೆ.ಅದೇ ರೀತಿ ಭಾರತೀಯ ಕೂಚಿಪುಡಿ ನೃತ್ಯಪಟುವಿನ ಗುಂಡಿಕ್ಕಿ ಬರ್ಬರ ಹತ್ಯೆ ಮಾಡಲಾಗಿದೆ.ಮಿಸ್ಸೌರಿಯ ಸೇಂಟ್ ಲೂಯಿಸ್ ಸಿಟಿಯಲ್ಲಿ ಡ್ಯಾನ್ಸರ್ ಅಮರನಾಥ್ ಘೋಷ್ ವಿದ್ಯಾರ್ಥಿಯಾಗಿದ್ದ ಇವರನ್ನು ಹತ್ಯೆ ಮಾಡಲಾಗಿದೆ.
05:17 PM Mar 02, 2024 IST | Nisarga K
ಅಮೆರಿಕಾದಲ್ಲಿ ಮತ್ತೋರ್ವ ಭಾರತೀಯನ ಬಲಿ ಪಡೆದ ದುಷ್ಕರ್ಮಿಗಳು

ನವದೆಹಲಿ:  ಇತ್ತೀಚೆಗೆ ಅಮೆರಿಕಾದಲ್ಲಿ ಭಾರತೀಯರ ಸಾಲು ಸಾಲು ಸಾವಿನ ಸುದ್ಧಿ ಕೇಳಿಬರುತ್ತಲೆ ಇದೆ. ಅದೇ ರೀತಿ ಭಾರತೀಯ ಕೂಚಿಪುಡಿ ನೃತ್ಯಪಟುವಿನ ಗುಂಡಿಕ್ಕಿ ಬರ್ಬರ ಹತ್ಯೆ ಮಾಡಲಾಗಿದೆ. ಮಿಸ್ಸೌರಿಯ ಸೇಂಟ್ ಲೂಯಿಸ್ ಸಿಟಿಯಲ್ಲಿ ಡ್ಯಾನ್ಸರ್ ಅಮರನಾಥ್ ಘೋಷ್ ವಿದ್ಯಾರ್ಥಿಯಾಗಿದ್ದ ಇವರನ್ನು ಹತ್ಯೆ ಮಾಡಲಾಗಿದೆ.

Advertisement

ಕಳೆದ ಫೆಬ್ರವರಿ 27 ರಂದು ಸೇಂಟ್ ಲೂಯಿಸ್ ಸಿಟಿಯಲ್ಲಿ ಸಂಜೆ ವೇಳೆ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದಾಗ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದಾರೆ. ಅಮರನಾಥ್ ಘೋಷ್ ಅವರನ್ನು ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಹತ್ಯೆಗೆ ಕಾರಣವೇನೆಂಬುದು ತಿಳಿದು ಬಂದಿಲ್ಲ

ಇವರು ಕೊಲ್ಕತ್ತಾ ಮೂಲದವರಾಗಿದ್ದು ಭರತನಾಟ್ಯ ನೃತ್ಯಪಟು ಆಗಿದ್ದರು ಜೊತೆಗೆ ಕೂಚಿಪುಡಿ ನೃತ್ಯದಲ್ಲೂ ಪರಿಣಿತಿ ಹೊಂದಿದ್ದರು. ಇವರಿಗೆ ಯಾವ ಕಟುಂಬಸ್ಥರಾಗಲಿ ಇರಲಿಲ್ಲ ಇವರ ಚಿಕ್ಕ ವಯಸ್ಸಿನಲ್ಲೆ ತಂದೆಯನ್ನು ಕಳೆದುಕೊಂಡಿದ್ದರು ಅಲ್ಲದೆ ಮೂರು ತಿಂಗಳ ಹಿಂದೆ ತಾಯಿ ಅವರನ್ನು ಅಗಲಿದ್ದರು ಈಗ ಅವರಪಾಲಿಗೆ ಸ್ನೇಹಿತರೆ ಎಲ್ಲಾ. ಹಾಗಾಗಿ ಸ್ನೇಹಿತರ ಮನವಿ ಮೇರೆಗೆ ಅಮರನಾಥ್ ಘೋಷ್ ಅವರ ಮೃತ ದೇಹವನ್ನು ಹಸ್ತಾಂತರಿಸಲಾಗುತ್ತಿದೆ.

Advertisement

ಅಮರನಾಥ್ ಘೋಷ್ ಸಾವಿನ ಸುದ್ಧಿ ಸ್ನೇಹಿತರನ್ನು ದಿಗ್ಭ್ರಾಂತಗೊಳಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಅಮರನಾಥ್ ಘೋಷ್‌ ಸಾವಿಗೆ ನ್ಯಾಯಕ್ಕಾಗಿ ಅಭಿಯಾನ ನಡೆಸುತ್ತಿದ್ದು,ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದಿರುವ ಅಮರನಾಥ್ ಸ್ನೇಹಿತರು, ಭಾರತ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಭಾರತೀಯ ರಾಯಭಾರಿ ಹಾಗೂ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್‌ ಅವರಿಗೆ ಮನವಿ ಮಾಡಲಾಗುತ್ತಿದೆ.

Advertisement
Tags :
AMERICAcrimecriminalsDancerINDIANkuchipudiLatestNewsNewsKannadaSHOOT
Advertisement
Next Article