For the best experience, open
https://m.newskannada.com
on your mobile browser.
Advertisement

ಅಮೆರಿಕದಲ್ಲಿ ಭಾರತ ಮೂಲದ ವಿದ್ಯಾರ್ಥಿ ಸಾವು

ಇಲ್ಲಿನ ಓಹಿಯೋ ರಾಜ್ಯದ ಸಿನ್ಸಿನಾಟಿಯಲ್ಲಿ ಗುರುವಾರ(ಫೆ.01) ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದಾನೆ. ವಿದ್ಯಾರ್ಥಿಯನ್ನು ಶ್ರೇಯಸ್ ರೆಡ್ಡಿ ಬೆನಿಗೇರಿ ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ಭಾರತ ಮೂಲದ ವಿದ್ಯಾರ್ಥಿಯ ಸಾವಿನ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಹೇಳಿದ್ದಾರೆ.
09:13 AM Feb 02, 2024 IST | Ashitha S
ಅಮೆರಿಕದಲ್ಲಿ ಭಾರತ ಮೂಲದ ವಿದ್ಯಾರ್ಥಿ ಸಾವು

ಅಮೆರಿಕ: ಇಲ್ಲಿನ ಓಹಿಯೋ ರಾಜ್ಯದ ಸಿನ್ಸಿನಾಟಿಯಲ್ಲಿ ಗುರುವಾರ(ಫೆ.01) ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದಾನೆ. ವಿದ್ಯಾರ್ಥಿಯನ್ನು ಶ್ರೇಯಸ್ ರೆಡ್ಡಿ ಬೆನಿಗೇರಿ ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ಭಾರತ ಮೂಲದ ವಿದ್ಯಾರ್ಥಿಯ ಸಾವಿನ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಹೇಳಿದ್ದಾರೆ.

Advertisement

ರಾಯಭಾರ ಕಚೇರಿಯು ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಮತ್ತು ಅವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುತ್ತಿದೆ. ಭಾರತೀಯ ಮೂಲದ ವಿದ್ಯಾರ್ಥಿಯನ್ನು ಶ್ರೇಯಸ್ ರೆಡ್ಡಿ ಬೆನಿಗೇರಿ ಎಂದು ಗುರುತಿಸಲಾಗಿದೆ. ಓಹಿಯೋದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಶ್ರೇಯಸ್ ರೆಡ್ಡಿ ಬೆನಿಗೇರಿ ಅವರ ದುರದೃಷ್ಟಕರ ನಿಧನದಿಂದ ತೀವ್ರ ದುಃಖವಾಗಿದೆ ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ‘X’ ನಲ್ಲಿ ಬರೆದಿದ್ದಾರೆ.

ಬೆನ್ನಿಗೇರಿಯ ಸಾವಿಗೆ ಕಾರಣ ತಿಳಿದಿಲ್ಲ ಆದರೆ ಒಂದು ವಾರದೊಳಗೆ ನಡೆದ ನಾಲ್ಕನೇ ಸಾವು ಇದಾಗಿದ್ದು, ಅಮೆರಿಕದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಕಳವಳಗೊಳಿಸಿದೆ.

Advertisement

Advertisement
Tags :
Advertisement