ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಭಾರತೀಯ ಮೂಲದ ಮಹಿಳೆಗೆ ಬಸ್‌ ನಿಲ್ದಾಣದಲ್ಲಿ ಚೂರಿ ಇರಿದು ಹತ್ಯೆ

ಭಾರತೀಯ ಮೂಲದ 66ವರ್ಷದ ಮಹಿಳೆಯನ್ನು ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ವಾಯುವ್ಯ ಲಂಡನ್‌ ನ ಬಸ್‌ ನಿಲ್ದಾಣದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
01:40 PM May 15, 2024 IST | Ashitha S

ವಾಷಿಂಗ್ಟನ್:‌ ಭಾರತೀಯ ಮೂಲದ 66ವರ್ಷದ ಮಹಿಳೆಯನ್ನು ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ವಾಯುವ್ಯ ಲಂಡನ್‌ ನ ಬಸ್‌ ನಿಲ್ದಾಣದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.

Advertisement

ಈ ಘಟನೆ ಮೇ 9ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 22 ವರ್ಷದ ಯುವಕನನ್ನು ಬಂಧಿಸಿ, ಕೊಲೆ ಆರೋಪ ದಾಖಲಿಸಿಕೊಳ್ಳಲಾಗಿದೆ ಎಂದು ವರದಿ ವಿವರಿಸಿದೆ.

ಮೃತ ಮಹಿಳೆಯನ್ನು ಅನಿತಾ ಮುಖೈ ಎಂದು ಗುರುತಿಸಲಾಗಿದೆ. ಈಕೆ ನ್ಯಾಷನಲ್‌ ಹೆಲ್ತ್‌ ಸರ್ವೀಸ್‌ ನಲ್ಲಿ ಮೆಡಿಕಲ್‌ ಸೆಕ್ರೆಟರಿಯಾಗಿ(ಪಾರ್ಟ್‌ ಟೈಮ್)‌ ಕಾರ್ಯನಿರ್ವಹಿಸುತ್ತಿದ್ದರು. ಲಂಡನ್‌ ನ ಎಡ್ಗೇರ್‌ ಪ್ರದೇಶದ ಬ್ರಂಟ್‌ ಓಕ್‌ ಬ್ರಾಡ್‌ ವೇ ಬಸ್‌ ನಿಲ್ದಾಣದಲ್ಲಿ ಬಸ್‌ ಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಯುವಕನೊಬ್ಬ ದಿಢೀರನೆ ಬಂದು ಚೂರಿಯಿಂದ ಇರಿದುಬಿಟ್ಟಿರುವುದಾಗಿ ವರದಿ ವಿವರಿಸಿದೆ.

Advertisement

 

Advertisement
Tags :
crimedeathindiaIndian-originLONDONMURDER
Advertisement
Next Article