For the best experience, open
https://m.newskannada.com
on your mobile browser.
Advertisement

ಇಂಡಿಯನ್​ ಪ್ರೀಮಿಯರ್​ ಲೀಗ್: ಸಿಎಸ್ ಕೆಗೆ 174 ರನ್​ಗಳ ಟಾರ್ಗೆಟ್ ನೀಡಿದ ಆರ್​ಸಿಬಿ

ಚೆನ್ನೈನ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮೊದಲ ಪಂದ್ಯದಲ್ಲಿ ನಡೆದ  ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಸಾಧಾರಣ ಮೊತ್ತದ ಟಾರ್ಗೆಟ್​ ಕೊಟ್ಟಿದೆ. 
10:08 PM Mar 22, 2024 IST | Ashika S
ಇಂಡಿಯನ್​ ಪ್ರೀಮಿಯರ್​ ಲೀಗ್  ಸಿಎಸ್ ಕೆಗೆ 174 ರನ್​ಗಳ ಟಾರ್ಗೆಟ್ ನೀಡಿದ ಆರ್​ಸಿಬಿ

ಚೆನ್ನೈ: ಚೆನ್ನೈನ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮೊದಲ ಪಂದ್ಯದಲ್ಲಿ ನಡೆದ  ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಸಾಧಾರಣ ಮೊತ್ತದ ಟಾರ್ಗೆಟ್​ ಕೊಟ್ಟಿದೆ.

Advertisement

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ತಂಡದ  ಪರ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ ಭರ್ಜರಿ ಬ್ಯಾಟಿಂಗ್ ಮಾಡಿದರು.

ಕೊಹ್ಲಿ 20 ಬಾಲ್​ನಲ್ಲಿ 1 ಸಿಕ್ಸರ್​ನೊಂದಿಗೆ 21 ರನ್​ ಗಳಿಸಿದ್ರು. ಈ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ರು. ಎಂದಿನಂತೆ ಈ ಬಾರಿ ದಿನೇಶ್​ ಕಾರ್ತಿಕ್​ ಮೋಡಿ ಮಾಡಿದ್ರು. ಕೇವಲ 25 ಬಾಲ್​ನಲ್ಲಿ 2 ಸಿಕ್ಸರ್​​, 3 ಫೋರ್​ ಸಮೇತ 38 ರನ್​ ಬಾರಿಸಿದ್ರು.

Advertisement

ಅನುಜ್ ರಾವೂತ್ ಹಾಗೂ ದಿನೇಶ್ ಕಾರ್ತಿಕ್​ ಅವರ ಅಮೋಘ ಜೊತೆಯಾಟದ ನೆರವಿನಿಂದಾಗಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿದೆ.

ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 174 ರನ್​ಗಳ ಟಾರ್ಗೆಟ್ ನೀಡಿದೆ.

Advertisement
Tags :
Advertisement