ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಮೆರಿಕ ಸೈನಿಕರಿಗೆ 'ಜೈ ಶ್ರೀರಾಮ್‌' ಘೋಷಣೆ ಹೇಳಿಕೊಟ್ಟ ಭಾರತದ ಸೈನಿಕರು

ಸಾಂಸ್ಕೃತಿಕ ಏಕತೆ ಹಾಗೂ ಮಿಲಿಟರಿ ಸೌಹಾರ್ದತೆಯ ವಿಚಾರ ಬಂದಾಗ ವಿಶ್ವದ ಎಲ್ಲಾ ದೇಶಗಳು ಭಾರತೀಯ ಸೇನೆಯತ್ತ ನೋಡುತ್ತಾರೆ. ಅಂಥದ್ದೊಂದು ಆತ್ಮೀಯ ಸಾಮರಸ್ಯ ಭಾರತದ ಸೇನೆಯಲ್ಲಿದೆ. ಭಾರತೀಯ ಸೇನೆಯ ಹೆಮ್ಮೆಯ ಸೈನಿಕರು ಅಮೆರಿಕದ ಸೈನಿಕರಿಗೆ 'ಜೈ ಶ್ರೀ ರಾಮ್' ಮತ್ತು 'ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ' ಘೋಷಣೆಯನ್ನು ಹೇಳುವುದು ಹೇಗೆ ಎಂದು ತಿಳಿಸಿರುವ ವಿಡಿಯೋ ಭಾರೀ ವೈರಲ್‌ ಆಗಿದೆ.
05:10 PM Jan 04, 2024 IST | Ashitha S

ದೆಹಲಿ: ಸಾಂಸ್ಕೃತಿಕ ಏಕತೆ ಹಾಗೂ ಮಿಲಿಟರಿ ಸೌಹಾರ್ದತೆಯ ವಿಚಾರ ಬಂದಾಗ ವಿಶ್ವದ ಎಲ್ಲಾ ದೇಶಗಳು ಭಾರತೀಯ ಸೇನೆಯತ್ತ ನೋಡುತ್ತಾರೆ. ಅಂಥದ್ದೊಂದು ಆತ್ಮೀಯ ಸಾಮರಸ್ಯ ಭಾರತದ ಸೇನೆಯಲ್ಲಿದೆ. ಭಾರತೀಯ ಸೇನೆಯ ಹೆಮ್ಮೆಯ ಸೈನಿಕರು ಅಮೆರಿಕದ ಸೈನಿಕರಿಗೆ 'ಜೈ ಶ್ರೀ ರಾಮ್' ಮತ್ತು 'ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ' ಘೋಷಣೆಯನ್ನು ಹೇಳುವುದು ಹೇಗೆ ಎಂದು ತಿಳಿಸಿರುವ ವಿಡಿಯೋ ಭಾರೀ ವೈರಲ್‌ ಆಗಿದೆ.

Advertisement

ಇದು ಎರಡೂ ದೇಶದ ಸೈನಿಕರ ಗಮನಸೆಳೆದಿದೆ. ಭಾರತೀಯ ಸೇನೆಯ ಮದ್ರಾಸ್‌ ಲೈಟ್‌ ಇನ್‌ಫ್ಯಾಂಟ್ರಿ ಪಡೆಯ ಯೋಧರು ಅಮೆರಿಕದ ಸೈನಿಕರಿಗೆ ತಮ್ಮ ವಿಜಯಘೋಷವನ್ನು ತಿಳಿಸಿಕೊಟ್ಟಿದ್ದಾರೆ. ಇದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಭಾರತೀಯ ಸೈನಿಕರು ತಮ್ಮ ಸ್ನೇಹಪರ ಅಮೆರಿಕದ ಸೈನಿಕರಿಗೆ ತಮ್ಮ ವಿಜಯಘೋಷವನ್ನು ಹೇಗೆ ಉಚ್ಚರಿಸಬೇಕು ಎನ್ನುವುದನ್ನು ಹೇಳಿದ್ದಾರೆ. ಅಮೇರಿಕನ್ ಸೈನಿಕರು ಸಹ ಪೂರ್ಣ ಉತ್ಸಾಹದಿಂದ 'ಜೈ ಶ್ರೀ ರಾಮ್' ಹಾಗು 'ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ' ಘೋಷಣೆ ಇದನ್ನು ಅಚ್ಚುಕಟ್ಟಾಗಿ ಹೇಳಲು ಪ್ರಯತ್ನಿಸಿದ್ದಾರೆ. ಬಳಿಕ ಹರ್ಷ ವ್ಯಕ್ತಪಡಿಸಿದ್ದಾರೆ

Advertisement

ಇದು ಭಾರತೀಯ ಸೈನಿಕರ ಉದಾರತೆ ಮತ್ತು ಅಮೆರಿಕದ ಸೈನಿಕರ ಕಲಿಕೆ, ಸದ್ಭಾವನೆ ಮತ್ತು ಸ್ನೇಹದ ಮನೋಭಾವವನ್ನು ಸಂಕೇತಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಭಾರತೀಯ ಯೋಧರನ್ನು ಕೊಂಡಾಡುತ್ತಿದ್ದಾರೆ.

 

Advertisement
Tags :
GOVERNMENTindiaNewsKannadaಜೈ ಶ್ರೀರಾಮ್ನವದೆಹಲಿಪ್ರಧಾನಿ ನರೇಂದ್ರ ಮೋದಿ
Advertisement
Next Article