For the best experience, open
https://m.newskannada.com
on your mobile browser.
Advertisement

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ರಕ್ತ ಬರುವಂತೆ ಹಲ್ಲೆ:ವಿಡಿಯೋ ವೈರಲ್

ಚಿಕಾಗೋದಲ್ಲಿ ದುಷ್ಕರ್ಮಿಗಳು ಭಾರತದ ಹೈದರಾಬಾದ್ ಮೂಲದ ವಿದ್ಯಾರ್ಥಿಯನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡಿರುವ ವಿದ್ಯಾರ್ಥಿ ರಕ್ತದ ಸುರಿಯುತ್ತಿದ್ದರು ದಯವಿಟ್ಟು ನನ್ನನ್ನು ಕಾಪಾಡಿ ಎಂದು ವಿಡಿಯೋದಲ್ಲಿ ಅಂಗಲಾಚಿದ್ದಾನೆ.
09:40 AM Feb 07, 2024 IST | Ashitha S
ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ರಕ್ತ ಬರುವಂತೆ ಹಲ್ಲೆ ವಿಡಿಯೋ ವೈರಲ್

ಅಮೆರಿಕ: ಚಿಕಾಗೋದಲ್ಲಿ ದುಷ್ಕರ್ಮಿಗಳು ಭಾರತದ ಹೈದರಾಬಾದ್ ಮೂಲದ ವಿದ್ಯಾರ್ಥಿಯನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡಿರುವ ವಿದ್ಯಾರ್ಥಿ ರಕ್ತದ ಸುರಿಯುತ್ತಿದ್ದರು ದಯವಿಟ್ಟು ನನ್ನನ್ನು ಕಾಪಾಡಿ ಎಂದು ವಿಡಿಯೋದಲ್ಲಿ ಅಂಗಲಾಚಿದ್ದಾನೆ.

Advertisement

ಚಿಕಾಗೋದ ಬೀದಿಯಲ್ಲಿ ಅವರ ಮೇಲೆ ಮೂವರು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೈಯದ್ ಮಜಾಹಿರ್ ಅಲಿ ದರೋಡೆಕೋರರಿಂದ ತೀವ್ರವಾಗಿ ಗಾಯೊಂಡಿರುವ ವಿದ್ಯಾರ್ಥಿ. ಸದ್ಯ ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹೈದರಾಬಾದ್‌ನಲ್ಲಿರುವ ಅವರ ಕುಟುಂಬ, ವಿದೇಶಾಂಗ ಸಚಿವ ಎಸ್​ ಜೈಶಂಕರ್​ ಅವರಿಗೆ ಪತ್ರ ಬರೆದಿದ್ದು ಯುಎಸ್‌ಗೆ ತೆರಳಲು ಅವಕಾಶ ನೀಡಿ ಎಂದು ಆತನ ಪತ್ನಿ ಸೈಯದಾ ರುಕುಲಿಯಾ ಫಾತಿಮಾ ರಿಜ್ವಿ ಒತ್ತಾಯಿಸಿದ್ದಾರೆ.

Advertisement

ಅಮೇರಿಕದ ಚಿಕಾಗೋದಲ್ಲಿರುವ ನನ್ನ ಗಂಡನ ಸುರಕ್ಷತೆ ಬಗ್ಗೆ ನನಗೆ ತುಂಬಾ ಭಯವಾಗುತ್ತಿದೆ. ಗಾಯಗೊಂಡಿರುವ ನನ್ನ ಗಂಡನಿಗೆ ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಹಾಯ ಮಾಡಿ. ಸಾಧ್ಯವಾದರೆ ನನ್ನ ಮಕ್ಕಳೊಂದಿಗೆ ಅಮೆರಿಕಕ್ಕೆ ತೆರಳಲು ಅವಕಾಶ ಮಾಡಿಕೊಡಿ ಎಂದು ಪತ್ನಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Advertisement
Tags :
Advertisement