For the best experience, open
https://m.newskannada.com
on your mobile browser.
Advertisement

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿನಿ ನಾಪತ್ತೆ : ಪತ್ತೆಗೆ ಎಫ್‌ಬಿಐ ಘೋಷಿಸಿದ ಮೊತ್ತ ಎಷ್ಟು ಗೊತ್ತಾ?

ಅಮೆರಿಕದಂತಹ ದೇಶದಲ್ಲಿ ವಿದ್ಯಾಭ್ಯಾಸ ಮಾಡಬೇಕು ಎಂಬುದು ಪ್ರತಿ ವಿದ್ಯಾರ್ಥಿಗಳ ಕನಸು.
04:02 PM Dec 22, 2023 IST | Ramya Bolantoor
ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿನಿ ನಾಪತ್ತೆ   ಪತ್ತೆಗೆ ಎಫ್‌ಬಿಐ ಘೋಷಿಸಿದ ಮೊತ್ತ ಎಷ್ಟು ಗೊತ್ತಾ

ವಾಷಿಂಗ್ಟನ್‌: ಅಮೆರಿಕದಂತಹ ದೇಶದಲ್ಲಿ ವಿದ್ಯಾಭ್ಯಾಸ ಮಾಡಬೇಕು ಎಂಬುದು ಪ್ರತಿ ವಿದ್ಯಾರ್ಥಿಗಳ ಕನಸು. ಈ ನಿಟ್ಟಿನಲ್ಲಿ ಪ್ರತಿ ವಿದ್ಯಾರ್ಥಿಗಳ ಹೆತ್ತವರು ತಮ್ಮ ಮಕ್ಕಳನ್ನು ವಿದೇಶದಲ್ಲಿಯೇ ಕಲಿಕೆ ಮಾಡಬೇಕು ಎಂದು ಶ್ರಮವಹಿಸುತ್ತಾರೆ. ಆದರೆ ಎಲ್ಲ ವಿದ್ಯಾರ್ಥಿಗಳ ಕನಸೂ ನನಸಾಗುವುದಿಲ್ಲ. ಅಂತಹುದೇ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ.

Advertisement

ಭಾರತದ 29 ವರ್ಷದ ವಿದ್ಯಾರ್ಥಿನಿ ಮಯೂಷಿ ಭಗತ್ ಅಮೆರಿಕದಲ್ಲಿ ಕಳೆದ ನಾಲ್ಕೂವರೆ ವರ್ಷಗಳಿಂದ ಕಾಣೆಯಾಗಿದ್ದಾಳೆ. ಆಕೆಯನ್ನು ಪತ್ತೆ ಮಾಡಲು ಅಮೆರಿಕ ಪೊಲೀಸರು, ಎಫ್‌ಬಿಐಗೆ ಸಹ ಇನ್ನೂ ಸಾಧ್ಯವಾಗಿಲ್ಲ. ಈಗ, ಆಕೆಯ ಬಗ್ಗೆ ಸುಳಿವು ನೀಡಿದವರಿಗೆ ಅಥವಾ ಹುಡುಕಿಕೊಟ್ಟರೆ ಬಹುಮಾನ ನೀಡೋದಾಗಿ ಎಫ್‌ಬಿಐ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದೆ.

ಅಕೆ 4 ವರ್ಷಕ್ಕೂ ಹೆಚ್ಚು ಸಮಯದಿಂದ ಕಣ್ಮರೆಯಾಗಿರೋದ್ರಿಂದ ಎಫ್‌ಬಿಐ ನೆವಾರ್ಕ್ ಫೀಲ್ಡ್ ಆಫೀಸ್ ಮತ್ತು ಜರ್ಸಿ ಸಿಟಿ ಪೊಲೀಸ್ ಇಲಾಖೆಗಳು ಸಾರ್ವಜನಿಕರ ಸಹಾಯ ಪಡೆಯಲು ಮುಂದಾಗಿವೆ. ಮಯೂಷಿ ಭಗತ್‌ನ ಸ್ಥಳ ಅಥವಾ ಪತ್ತೆಯ ಸುಳಿವಿಗೆ ಕಾರಣವಾಗುವ ಯಾವುದೇ ಮಾಹಿತಿ ನೀಡಿದ್ರೆ, ಬರೋಬ್ಬರಿ 10,000 ಡಾಲರ್‌ ಬಹುಮಾನ ನೀಡೋದಾಗಿ ಹೇಳಿದೆ. ಈ ಮೂಲಕ ಆಕೆಯನ್ನು ಹುಡುಕುವ ಪ್ರಯತ್ನಗಳನ್ನು ತೀವ್ರಗೊಳಿಸಿದೆ.

Advertisement

ಕಳೆದ ಜುಲೈನಲ್ಲಿ, FBI ತನ್ನ "ಕಾಣೆಯಾದ ವ್ಯಕ್ತಿಗಳು" ಪಟ್ಟಿಗೆ ಮಾಯುಷಿ ಭಗತ್ ಅನ್ನು ಸೇರಿಸಿದ್ದು, ಆಕೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಲು ಸಾರ್ವಜನಿಕರಿಗೆ ಮನವಿ ಮಾಡಿತ್ತು. ಜುಲೈ 1994 ರಲ್ಲಿ ಭಾರತದಲ್ಲಿ ಜನಿಸಿದ ಮಯೂಷಿ ಭಗತ್ ವಿದ್ಯಾರ್ಥಿ ವೀಸಾದಡಿ ನ್ಯೂಯಾರ್ಕ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದುತ್ತಿದ್ದರು. ಆಕೆ ಇರುವ ಸ್ಥಳ ಅಥವಾ ಪತ್ತೆಗೆ ಕಾರಣವಾಗುವ ಮಾಹಿತಿಗಾಗಿ ಸಾರ್ವಜನಿಕರು 10,000 ಡಾಲರ್‌ವರೆಗೆ ಬಹುಮಾನ ಪಡೆಯಬಹುದು ಎಂದೂ ಕಳೆದ ವಾರ ಹೊರಡಿಸಿದ ಹೇಳಿಕೆಯಲ್ಲಿ ಎಫ್‌ಬಿಐ ವಿವರಿಸಿದೆ.

Advertisement
Tags :
Advertisement