ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ವಿಮಾನ ಪ್ರಯಾಣಿಕರಿಗೆ ಇಂಡಿಗೋದಿಂದ ಶುಭ ಸುದ್ದಿ

ಅಗ್ಗದ ದರದಲ್ಲಿ ವಿಮಾನ ಸೇವೆ ಒದಗಿಸುವ ಇಂಡಿಗೋ ಏರ್ಲೈನ್ಸ್​ನ ಪ್ರಯಾಣ ದರ ಇನ್ನಷ್ಟು ಕಡಿಮೆ ಆಗಲಿದೆ. ಇಂಡಿಗೋ ಸಂಸ್ಥೆ ತನ್ನ ಇಂಧನ ಶುಲ್ಕವನ್ನು ಹಿಂಪಡೆದುಕೊಂಡಿದೆ.
10:17 PM Jan 04, 2024 IST | Ashitha S

ನವದೆಹಲಿ: ಅಗ್ಗದ ದರದಲ್ಲಿ ವಿಮಾನ ಸೇವೆ ಒದಗಿಸುವ ಇಂಡಿಗೋ ಏರ್ಲೈನ್ಸ್​ನ ಪ್ರಯಾಣ ದರ ಇನ್ನಷ್ಟು ಕಡಿಮೆ ಆಗಲಿದೆ. ಇಂಡಿಗೋ ಸಂಸ್ಥೆ ತನ್ನ ಇಂಧನ ಶುಲ್ಕವನ್ನು ಹಿಂಪಡೆದುಕೊಂಡಿದೆ.

Advertisement

ಇದರೊಂದಿಗೆ ಅದರ ಟಿಕೆಟ್ ದರಗಳೂ ಕಡಿಮೆ ಆಗುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ, ಇಂಡಿಗೋ ಏರ್ಲೈನ್ಸ್ ಒಂದು ಟಿಕೆಟ್​ಗೆ ಒಂದು ಸಾವಿರ ರೂವರೆಗೂ ಫುಯಲ್ ಚಾರ್ಜ್ ಎಂದು ಹೆಚ್ಚುವರಿ ಹಣ ವಿಧಿಸುತ್ತಿತ್ತು. ವಿಮಾನದ ಇಂಧನವಾದ ಎಟಿಎಫ್ ಅಥವಾ ಜೆಟ್ ಇಂಧನದ ಬೆಲೆ ಹೆಚ್ಚಿದ್ದ ಕಾರಣ ಅಕ್ಟೋಬರ್ 5ರಿಂದ ಫುಯೆಲ್ ಚಾರ್ಜ್ ಹಾಕಿತ್ತು. ಇತ್ತೀಚೆಗೆ ಇಂಧನ ಬೆಲೆ ಕಡಿಮೆಗೊಂಡ ಕಾರಣಕ್ಕೆ ಮೂರು ತಿಂಗಳ ಬಳಿಕ ಈಗ ಶುಲ್ಕವನ್ನು ಹಿಂಪಡೆದುಕೊಂಡಿದೆ.

‘ಎಟಿಎಫ್ ಬೆಲೆಗಳಲ್ಲಿ ಇತ್ತೀಚೆಗೆ ಇಳಿಮುಖ ಅಗಿರುವುದರಿಂದ ಇಂಡಿಗೋ ಫುಯಲ್ ಚಾರ್ಜ್ ಅನ್ನು ಹಿಂಪಡೆಯುತ್ತಿದೆ. ಬೆಲೆ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಇಚ್ಛಿಸುತ್ತೇವೆ’ ಎಂದು ವಿಮಾನ ಸಂಸ್ಥೆಯೇ ಖುದ್ದಾಗಿ ಮಾಹಿತಿ ನೀಡಿದೆ. ಇಂಡಿಗೋದ ದೇಶೀಯ ಮತ್ತು ಅಂತರ ದೇಶೀಯ ವಿಮಾನ ಹಾರಾಟ ಎಲ್ಲಕ್ಕೂ ಈ ಹೊಸ ಕ್ರಮ ಅನ್ವಯ ಆಗುತ್ತದೆ.

Advertisement

 

 

Advertisement
Tags :
GOVERNMENTindiaLatestNewsNewsKannadaಇಂಡಿಗೋ ಏರ್ಲೈನ್ಸ್ನವದೆಹಲಿಪ್ರಧಾನಿ ನರೇಂದ್ರ ಮೋದಿವಿಮಾನ
Advertisement
Next Article