ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ಹುಟ್ಟುಹಾಕಿದ ಜಾಹಿರಾತು

ಇಲ್ಲಿನ ಬಸ್ ಒಂದರ ಹಿಂದೆ ಅಂಟಿಸಲಾಗಿದ್ದ ಇಂದಿರಾ ರಸಂ ಜಾಹಿರಾತಿನ ಚಿತ್ರವನ್ನು ಸಾಮಾಜಿಕ ಜಾಲತಾಣ ಎಕ್ಸ್‌ ಬಳಕೆದಾದರೊಬ್ಬರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದು, ವೀಕ್ಷಕರಿಂದ ನಾನಾರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
07:33 PM Jan 06, 2024 IST | Maithri S

ಬೆಂಗಳೂರು: ಇಲ್ಲಿನ ಬಸ್ ಒಂದರ ಹಿಂದೆ ಅಂಟಿಸಲಾಗಿದ್ದ ಇಂದಿರಾ ರಸಂ ಜಾಹಿರಾತಿನ ಚಿತ್ರವನ್ನು ಸಾಮಾಜಿಕ ಜಾಲತಾಣ ಎಕ್ಸ್‌ ಬಳಕೆದಾದರೊಬ್ಬರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದು, ವೀಕ್ಷಕರಿಂದ ನಾನಾರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

Advertisement

ಜಾಹಿರಾತಿನಲ್ಲಿ ʼWife North Indianaaa?́ ಎಂದು ಬರೆದಿದ್ದು, ಗೊಂದಲದ ಮುಖಭಾವದ ವ್ಯಕ್ತಿಯ ಬಿತ್ರವನ್ನು ಕಾಣಬಹುದಾಗಿದ್ದು, ರಸಂ ಅನ್ನು ಯಾರಾದರೂ ಸುಲಭವಾಗಿ ಮಾಡಬಹುದು ಎಂಬುದನ್ನು ಸೂಚಿಸಿವಂತಿದೆ.

ಚಿತ್ರವನ್ನು ಹಂಚಿಕೊಂಡ‌ ತೇಜಸ್ ದಿನಕರ್‌ ಈ ಬಗ್ಗೆ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದು, ಉತ್ತರ ಹಾಗು ದಕ್ಷಿಣ ಭಾರತೀಯರನ್ನು ಅವಮಾನಿಸುವಂತಿದೆ ಎಂದು ಬರೆದುಕೊಂಡಿದ್ದಾರೆ.

Advertisement

ಇದರ ಪರವಾಗಿ ಪ್ರತಿಕ್ರಿಯಿಸಿದವರು ಜನರನ್ನು ಪ್ರಾಂತೀಯವಾಗಿ ವಿಭಜಿಸುವಂತಿದೆ ಎಂದಿದ್ದಾರೆ. ಕೆಲವರ ನಿಲುವು ಇದಕ್ಕಿಂತ ಭಿನ್ನವಾಗಿದ್ದು, ಈ ಜಾಹಿರಾತು ಸೃಜನಶೀಲವಾಗಿರುವುದಷ್ಟೇ ಅಲ್ಲದೆ ಅಂತರ್‌ ಪ್ರಾಂತೀಯ ವಿವಾಹವನ್ನು ಪ್ರೋತ್ಸಾಹಿಸುತ್ತದೆ ಎಂದಿದ್ದಾರೆ.

Advertisement
Tags :
advertismentindiaIndira rasamKARNATAKALatestNewsNewsKannadaಬೆಂಗಳೂರು
Advertisement
Next Article