For the best experience, open
https://m.newskannada.com
on your mobile browser.
Advertisement

ಅಮೆರಿಕದಲ್ಲಿ ಭಾರತದ ಮತ್ತೊಬ್ಬ ವಿದ್ಯಾರ್ಥಿಯ ಹತ್ಯೆ !

ಇಂಡಿಯಾನಾದ ಪರ್ಡ್ಯೂ ವಿಶ್ವವಿದ್ಯಾನಿಲಯದಲ್ಲಿ 23 ವರ್ಷದ ಭಾರತೀಯ ಮೂಲದ ಡಾಕ್ಟರೇಟ್ ವಿದ್ಯಾರ್ಥಿ ಸೋಮವಾರ ಪ್ರಕೃತಿ ಸಂರಕ್ಷಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದು ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ವಿದ್ಯಾರ್ಥಿಯ 2ನೇ ಸಾವು ಮತ್ತು ಈ ವರ್ಷ ಯುನೈಟೆಡ್ ಸ್ಟೇಟ್ಸ್‌ನಲ್ಲಿ 4ನೇ ಪ್ರಕರಣವಾಗಿದೆ.
01:28 PM Feb 07, 2024 IST | Ashitha S
ಅಮೆರಿಕದಲ್ಲಿ ಭಾರತದ ಮತ್ತೊಬ್ಬ ವಿದ್ಯಾರ್ಥಿಯ ಹತ್ಯೆ

ನ್ಯೂಯಾರ್ಕ್: ಇಂಡಿಯಾನಾದ ಪರ್ಡ್ಯೂ ವಿಶ್ವವಿದ್ಯಾನಿಲಯದಲ್ಲಿ 23 ವರ್ಷದ ಭಾರತೀಯ ಮೂಲದ ಡಾಕ್ಟರೇಟ್ ವಿದ್ಯಾರ್ಥಿ ಸೋಮವಾರ ಪ್ರಕೃತಿ ಸಂರಕ್ಷಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದು ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ವಿದ್ಯಾರ್ಥಿಯ 2ನೇ ಸಾವು ಮತ್ತು ಈ ವರ್ಷ ಯುನೈಟೆಡ್ ಸ್ಟೇಟ್ಸ್‌ನಲ್ಲಿ 5ನೇ ಪ್ರಕರಣವಾಗಿದೆ.

Advertisement

ಇತ್ತೀಚೆಗೆ ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿಗಳು ಸಾಲು ಸಾಲಾಗಿ ಹತ್ಯೆಗೀಡಾಗುತ್ತಿದ್ದು, ಲಕ್ಷಾಂತರ ವಿದ್ಯಾರ್ಥಿಗಳು, ಪೋಷಕರು ಇದರಿಂದ ಆತಂಕಕ್ಕೀಡಾಗಿದ್ದಾರೆ.   ವಾರೆನ್ ಕೌಂಟಿಯ ಕರೋನರ್ ಜಸ್ಟಿನ್ ಬ್ರಮ್ಮೆಟ್ ಪ್ರಕಾರ, ಸಮೀರ್ ಕಾಮತ್ ಅವರ ದೇಹವು ಕ್ರೌಸ್ ಗ್ರೋವ್ ನೇಚರ್ ಪ್ರಿಸರ್ವ್ ನಲ್ಲಿ ಸಂಜೆ 5 ಗಂಟೆಗೆ ಪತ್ತೆಯಾಗಿದೆ.

ಆಗಸ್ಟ್ 2023 ರಲ್ಲಿ ಪರ್ಡ್ಯೂನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ಕಾಮತ್, ಅದೇ ವಿಭಾಗದಲ್ಲಿ ಹೆಚ್ಚಿನ ಅಧ್ಯಯನವನ್ನು ನಡೆಸುತ್ತಿದ್ದರು. ಕಾಮತ್ ಅವರು ಯುಎಸ್ ಪೌರತ್ವವನ್ನು ಹೊಂದಿದ್ದಾರೆ ಎಂದು ತನಿಖಾಧಿಕಾರಿಗಳ ಕಚೇರಿ ದೃಢಪಡಿಸಿದೆ.

Advertisement

ಕೆಲ ದಿನಗಳ ಹಿಂದಷ್ಟೇ ಅಮೆರಿಕದ ಓಹಿಯೋ ರಾಜ್ಯದಲ್ಲಿ ನೀಲ್‌ ಆಚಾರ್ಯ, ಜಾರ್ಜಿಯಾದಲ್ಲಿ ಎಂಬಿಎ ಓದುತ್ತಿದ್ದ ವಿವೇಕ್‌ ಸೈನಿ, 19 ವರ್ಷದ ಶ್ರೇಯಸ್‌ ರೆಡ್ಡಿ ಎಂಬುವರು ಸೇರಿ ಕಳೆದ ಮೂರು ವಾರಗಳಲ್ಲಿ ಐವರು ವಿದ್ಯಾರ್ಥಿಗಳು ಹತ್ಯೆಗೀಡಾಗಿದ್ದಾರೆ. ಇದು ಪೋಷಕರಲ್ಲಿ ಆತಂಕ ಮೂಡಿಸಿದ್ದು, ಅಮೆರಿಕಕ್ಕೆ ವ್ಯಾಸಂಗ ಮಾಡಲು ಮಕ್ಕಳನ್ನು ಕಳುಹಿಸಲು ಕೂಡ ಹೆದರುವಂತಾಗಿದೆ.

Advertisement
Tags :
Advertisement