For the best experience, open
https://m.newskannada.com
on your mobile browser.
Advertisement

ಹಾಗಲಕಾಯಿ ಕೃಷಿ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

ಕಾಕರ ಅಥವಾ ಕರೆಲಾ ಎಂದು ಕರೆಯಲ್ಪಡುವ ಹಾಗಲಕಾಯಿಯು ಆರೋಗ್ಯಕರ ತರಕಾರಿಗಳಲ್ಲಿ ಒಂದಾಗಿದೆ. ಭಾರತದಲ್ಲಿ ಅತ್ಯಂತ ಜನಪ್ರಿಯ ತರಕಾರಿಯಾಗಿದ್ದು ವ್ಯಾಪಕವಾಗಿ ಬೆಳೆಸಲಾಗುತ್ತದೆ. ಇದು ಉತ್ತಮವಾದ ಔಷಧಿ ಗುಣವನ್ನು ಹೊಂದಿದೆ.
11:00 AM Mar 21, 2024 IST | Ashika S
ಹಾಗಲಕಾಯಿ ಕೃಷಿ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

ಕಾಕರ ಅಥವಾ ಕರೆಲಾ ಎಂದು ಕರೆಯಲ್ಪಡುವ ಹಾಗಲಕಾಯಿಯು ಆರೋಗ್ಯಕರ ತರಕಾರಿಗಳಲ್ಲಿ ಒಂದಾಗಿದೆ. ಭಾರತದಲ್ಲಿ ಅತ್ಯಂತ ಜನಪ್ರಿಯ ತರಕಾರಿಯಾಗಿದ್ದು ವ್ಯಾಪಕವಾಗಿ ಬೆಳೆಸಲಾಗುತ್ತದೆ. ಇದು ಉತ್ತಮವಾದ ಔಷಧಿ ಗುಣವನ್ನು ಹೊಂದಿದೆ.

Advertisement

ಇದು ದಕ್ಷಿಣ ಏಷ್ಯಾದುದ್ದಕ್ಕೂ ಬಹಳ ಜನಪ್ರಿಯವಾದ ತರಕಾರಿಯಾಗಿದೆ. ಉತ್ತರ ಭಾರತದಲ್ಲಿ ಇದನ್ನು ಸಾಮಾನ್ಯವಾಗಿ ಆಲೂಗೆಡ್ಡೆಯೊಂದಿಗೆ ತಯಾರಿಸಲಾಗುತ್ತದೆ. ಹಾಗೂ ಕಹಿಯನ್ನು ತಡೆಗಟ್ಟಲು ಮೊಸರಿನೊಂದಿಗೂ ಸೇವಿಸಲಾಗುತ್ತದೆ. ಹೆಚ್ಚಾಗಿ ಇದನ್ನು ಆಹಾರ ತಯಾರಿಸಲು ಬಳಸಲಾಗುತ್ತದೆ .

ಸೌತೆಕಾಯಿ ಅಂತ ಆಕಾರವನ್ನು ಹೊಂದಿರುವ ಹಾಗಲಕಾಯಿ ಕ್ಯುಕರ್ಬಿಟೇಸಿಯೆ ಕುಟುಂಬಕ್ಕೆ ಸೇರಿದೆ. ಇದು ಉಷ್ಣವಲಯ ಹಾಗೂ ಉಪೋಷ್ಟನ ವಲಯದ ಬಳ್ಳಿಯಾಗಿದ್ದು ಇದನ್ನು ಏಷ್ಯಾ ಆಫ್ರಿಕಾ ಹಾಗೂ ಕೆರೆಬಿಯನ್ ವೆಸ್ಟ್ ಇಂಡೀಸ್ ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳೆಸಲಾಗುತ್ತದೆ.

Advertisement

ಹಾಗಲಕಾಯಿ ಗಿಡ ಔಷಧೀಯ ಮೂಲವಾಗಿದ್ದು, ಹಣ್ಣಿನ ಹೊರಭಾಗವು ಗಂಟುಗಳುಳ್ಳ ತಾಯಿ ಆಗಿರುತ್ತದೆ ಅಲ್ಲದೆ ಇಷ್ಟವಾಗಿ ಆಯತಾಕಾರ ಹೊಂದಿರುತ್ತದೆ. ಈ ಹಣ್ಣು ಪಕ್ವವಾಗುತ್ತಿದ್ದಂತೆ ತಿರುಳು ದಪ್ಪವಾಗಿ ಹೆಚ್ಚು ಕಹಿಯಾಗುತ್ತದೆ ಹಾಗೂ ತಿನ್ನಲು ಬಹಳ ಆರೋಗ್ಯಕರವಾಗಿರುತ್ತದೆ.

ಹಾಗಲಕಾಯಿ ಬೇಸಿಗೆ ಉತ್ತಮವಾದ ಮಣ್ಣು: ಹಾಗಲಕಾಯಿ ಕೃಷಿಗೆ ಫಲವತ್ತಾದ ಚೆನ್ನಾಗಿ ಬರಿದು ಹೋಗುವ ಹಾಗೂ ಸಾವಯವ ಕಾಂಪೋಸ್ಟ್ ಅಥವಾ ಒಣಗಿದ ಗೊಬ್ಬರದಂತಹ ಪದಾರ್ಥಗಳಿಂದ ಸಮೃದ್ಧವಾಗಿದ್ದರೆ ಉತ್ತಮ. ನಾಟಿ ಮಾಡುವ ಮೊದಲು ಸಾವಯವ ಪದಾರ್ಥಗಳನ್ನು ಸೇರಿಸುವ ಮೂಲಕ ಮಣ್ಣನ್ನು ಚೆನ್ನಾಗಿ ತಯಾರಿಸಬೇಕು ಇಲ್ಲವಾದಲ್ಲಿ ಹಾಗಲಕಾಯಿ ಬೆಳವಣಿಗೆ ಕುಂಠಿತಗೊಳ್ಳುವ ಸಾಧ್ಯತೆಗಳಿವೆ.

ಹಾಗಲಕಾಯಿ ಬೆಳವಣಿಗೆ ನೀರಾವರಿಯ ಅಗತ್ಯತೆ: ಹಾಗಲಕಾಯಿ ಬೀಜಗಳು ಮೊಳಕೆ ಹಿಡಿಯುವ ಮೊದಲು ಮತ್ತು ನಂತರ ವಾರಕ್ಕೊಮ್ಮೆ ನೀರಾವರಿ ಮಾಡಿ. ಹನಿ ನೀರಾವರಿಯ ಮೂಲಕ ನೀರನ್ನು ಗಿಡಗಳಿಗೆ ಹಾಕಬಹುದು.

ಹಾಗಲಕಾಯಿ ಔಷಧೀಯ ಗುಣಗಳು: ಬಹಳ ಹಿಂದಿನಿಂದಲೂ ಹಾಗಲಕಾಯಿಯನ್ನು ಹಲವಾರು ಏಷ್ಯನ್ ಹಾಗೂಆಫ್ರಿಕಾನ್ ಜನರು ಸಾಂಪ್ರದಾಯಿಕ ಔಷಧಿ ಪದ್ಧತಿಗಳಲ್ಲಿ ಬಳಸುತ್ತಿದ್ದಾರೆ.

ಹಾಗಲಕಾಯಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜಠರದಲ್ಲಿ ಲಾಡಿ ಹುಳುಗಳನ್ನು ತಡೆಗಟ್ಟುತದೆ.

ಮಲೇರಿಯಾ ನಿರೋಧಕವಾಗಿ ಕೆಲಸ ಮಾಡುತ್ತದೆ

ಮಧುಮೇಹವನ್ನು ನಿಯಂತ್ರಣದಲ್ಲಿಡಲು ಹಾಗಲಕಾಯಿ ಸಾಂಪ್ರದಾಯಿಕ ಔಷಧಿ ಪದ್ಧತಿಯಲ್ಲಿ ಬಳಸಲಾಗುತ್ತದೆ

ಹಾಗಲಕಾಯಿ ಕ್ಯಾನ್ಸರ್ ಪ್ರತಿರೋಧಕವಾಗಿದೆ.

ಅಷ್ಟೇ ಎಲ್ಲಿದೆ ಹಾಗಲಕಾಯಿಯನ್ನ ಭೇದಿ ಉದರ ಶೂಲೆ, ಜ್ವರ ಸುಟ್ಟ ಗಾಯ ನೋವಿನಿಂದ ಕೂಡಿದ ರಜಸ್ರಾವ ಚರ್ಮದ ಇತರ ಸಮಸ್ಯೆಗಳಿಗೂ ಹಾಗಲಕಾಯಿಯನ್ನು ಸಾಂಪ್ರದಾಯಿಕ ಔಷಧಿ ಪದ್ಧತಿಯಲ್ಲಿ ಬಳಸಲಾಗುತ್ತದೆ. ಹಾಗೂ ಆ ಮೂಲವ್ಯಾಧಿ ಹಾಗೂ ಫೀರಾಟದ ತೊಂದರೆಗಳನ್ನು ಸಹ ನಿಯಂತ್ರಿಸಬಲ್ಲವೂ

ಹಾಗಲಕಾಯಿ ಕೇವಲ ಅಡುಗೆ ಪದಾರ್ಥಗಳಲ್ಲಿ ಮಾತ್ರವಲ್ಲದೆ ಇದು ಉತ್ತಮವಾದ ಔಷಧಿಯ ಗುಣಗಳನ್ನು ಹೊಂದಿದ್ದು ಮನುಷ್ಯನ ಆರೋಗ್ಯವನ್ನು ತುಂಬಾ ದೊಡ್ಡ ಮಟ್ಟದಲ್ಲಿ ಸುಧಾರಿಸುವ ಕಾರ್ಯವನ್ನು ಈ ಹಾಗಲಕಾಯಿ ಮಾಡುತ್ತದೆ.

Advertisement
Tags :
Advertisement