For the best experience, open
https://m.newskannada.com
on your mobile browser.
Advertisement

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ‘ಹೃದಯ ಸ್ತಂಭನದ ಕುರಿತು ಮಾಹಿತಿ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ (ರಿ.)ಯ ಆಡಳಿತಕ್ಕೊಳಪಟ್ಟ ಸ್ಥಳೀಯ ಶಾಲೆ-ಕಾಲೇಜುಗಳ ಬೋಧಕ- ಬೋಧಕೇತರ ಸಿಬ್ಬಂದಿಗೆ ‘ಹೃದಯ ಸ್ತಂಭನ ಕುರಿತು ಮಾಹಿತಿ, ಪ್ರಥಮ ಚಿಕಿತ್ಸೆ (ಸಿಪಿಆರ್) ಪ್ರಾತ್ಯಕ್ಷಿಕೆ- ತರಬೇತಿ’ ಕಾರ್ಯಕ್ರಮವು ಉಜಿರೆಯ ಎಸ್.ಡಿ.ಎಂ. ಬಿ.ಎಡ್. ಹಾಲ್’ನಲ್ಲಿ ಜ.12 ರಂದು ನಡೆಯಿತು.
04:33 PM Jan 12, 2024 IST | Ashika S
ಎಸ್ ಡಿ ಎಂ  ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ‘ಹೃದಯ ಸ್ತಂಭನದ ಕುರಿತು ಮಾಹಿತಿ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ (ರಿ.)ಯ ಆಡಳಿತಕ್ಕೊಳಪಟ್ಟ ಸ್ಥಳೀಯ ಶಾಲೆ-ಕಾಲೇಜುಗಳ ಬೋಧಕ- ಬೋಧಕೇತರ ಸಿಬ್ಬಂದಿಗೆ ‘ಹೃದಯ ಸ್ತಂಭನ ಕುರಿತು ಮಾಹಿತಿ, ಪ್ರಥಮ ಚಿಕಿತ್ಸೆ (ಸಿಪಿಆರ್) ಪ್ರಾತ್ಯಕ್ಷಿಕೆ- ತರಬೇತಿ’ ಕಾರ್ಯಕ್ರಮವು ಉಜಿರೆಯ ಎಸ್.ಡಿ.ಎಂ. ಬಿ.ಎಡ್. ಹಾಲ್’ನಲ್ಲಿ ಜ.12 ರಂದು ನಡೆಯಿತು.

Advertisement

ಉಜಿರೆಯ ಎಸ್.ಡಿ.ಎಂ. ಕಾಲೇಜಿನ ರೋವರ್ಸ್ & ರೇಂಜರ್ಸ್ ಘಟಕ ಹಾಗೂ ಉಡುಪಿಯ ಎಸ್.ಡಿ.ಎಂ. ಕಾಲೇಜ್ ಆಫ್ ಆಯುರ್ವೇದ ಸಂಸ್ಥೆಯ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಎಸ್.ಡಿ.ಎಂ. ಕಾಲೇಜ್ ಆಫ್ ಆಯುರ್ವೇದ ಸಂಸ್ಥೆಯ ಶಲ್ಯತಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮತ್ತು ಎನ್.ಎ.ಬಿ.ಎಚ್. (ನ್ಯಾಷನಲ್ ಅಕ್ರೆಡಿಟೇಶನ್ ಬೋರ್ಡ್ ಫಾರ್ ಹಾಸ್ಪಿಟಲ್ಸ್ & ಹೆಲ್ತ್ ಕೇರ್ ಪ್ರೊವೈಡರ್ಸ್) ಸಂಯೋಜಕಿ ಡಾ. ಸಹನಾ ಕಾಮತ್ ಅವರು ಹೃದಯ ಸ್ತಂಭನ ಕುರಿತು ಮಾಹಿತಿ ನೀಡಿದರು. ಕಾರ್ಡಿಯೋಪಲ್ಪನರಿ ರಿಸಸಿಟೇಶನ್ (ಸಿಪಿಆರ್) ವಿಧಾನ ಬಳಸಿ ಪ್ರಥಮ ಚಿಕಿತ್ಸೆ ನೀಡುವ ಕುರಿತು ವಿವರಿಸಿದರು.

Advertisement

ಸಂಸ್ಥೆಯ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ. ಪ್ರೀತಿ ಹಾಗೂ ಡಾ. ಸುದರ್ಶನ್ ಅವರು ಸಿಪಿಆರ್ ಮ್ಯಾನಿಕಿನ್ ಸಲಕರಣೆ ಬಳಸಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟು ತರಬೇತಿ ನೀಡಿದರು.

ಎಸ್.ಡಿ.ಎಂ. ಬಿ.ಎಡ್. ಕಾಲೇಜು ಪ್ರಾಂಶುಪಾಲ ಸಂತೋಷ್ ಆಲ್ಬರ್ಟ್ ಸಲ್ಡಾನ ಉಪಸ್ಥಿತರಿದ್ದರು. ಉಜಿರೆಯ ಎಸ್.ಡಿ.ಎಂ. ಕಾಲೇಜಿನ ರೋವರ್ ಸ್ಕೌಟ್ ಲೀಡರ್ ಪ್ರಸಾದ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ರೇಂಜರ್ ಲೀಡರ್ ಗಾನವಿ ವಂದಿಸಿದರು.

Advertisement
Tags :
Advertisement