For the best experience, open
https://m.newskannada.com
on your mobile browser.
Advertisement

ಇಂದು ವಿಶ್ವ ಕಾರ್ಮಿಕರ ದಿನ: ಈ ದಿನದ ಮಹತ್ವವೇನು?

'ಒಬ್ಬ ಕಾರ್ಮಿಕ ಪ್ರತಿ ರಾಷ್ಟ್ರಕ್ಕೂ ದೊಡ್ಡ ಆಸ್ತಿ ಮತ್ತು ಅದ್ಭುತಗಳ ನಿರ್ಮಾತೃ' ಎಂಬ ಮಾತಿದೆ.  ಕಾರ್ಮಿಕ ವರ್ಗದ ಸಾಧನೆಗಳನ್ನು ಆಚರಿಸಲು ಪ್ರತಿ ವರ್ಷ ಮೇ 1 ರಂದು ಕಾರ್ಮಿಕರ ದಿನ ಅಥವಾ ಅಂತರರಾಷ್ಟ್ರೀಯ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ. ‘ಮೇ ದಿನ’ ಎಂದೂ ಕರೆಯಲ್ಪಡುವ ದಿನವನ್ನು ಅನೇಕ ದೇಶಗಳಲ್ಲಿ ಸಾರ್ವಜನಿಕ ರಜಾದಿನವಾಗಿಯೂ ಘೋಷಿಸಲಾಗಿದೆ.
10:16 AM May 01, 2024 IST | Ashitha S
ಇಂದು ವಿಶ್ವ ಕಾರ್ಮಿಕರ ದಿನ  ಈ ದಿನದ ಮಹತ್ವವೇನು

"ಒಬ್ಬ ಕಾರ್ಮಿಕ ಪ್ರತಿ ರಾಷ್ಟ್ರಕ್ಕೂ ದೊಡ್ಡ ಆಸ್ತಿ ಮತ್ತು ಅದ್ಭುತಗಳ ನಿರ್ಮಾತೃ" ಎಂಬ ಮಾತಿದೆ.  ಕಾರ್ಮಿಕ ವರ್ಗದ ಸಾಧನೆಗಳನ್ನು ಆಚರಿಸಲು ಪ್ರತಿ ವರ್ಷ ಮೇ 1 ರಂದು ಕಾರ್ಮಿಕರ ದಿನ ಅಥವಾ ಅಂತರರಾಷ್ಟ್ರೀಯ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ. ‘ಮೇ ದಿನ’ ಎಂದೂ ಕರೆಯಲ್ಪಡುವ ದಿನವನ್ನು ಅನೇಕ ದೇಶಗಳಲ್ಲಿ ಸಾರ್ವಜನಿಕ ರಜಾದಿನವಾಗಿಯೂ ಘೋಷಿಸಲಾಗಿದೆ.

Advertisement

ಕಷ್ಟ ಪಟ್ಟು ದುಡಿದರೆ ಏನು ಬೇಕಾದರೂ ಸಾಧಿಸಲು ಸಾಧ್ಯ. ಕಾರ್ಮಿಕರೆಂದರೆ ದುಡಿಯುವ ವರ್ಗದವರು. ಬಿಸಿಲು, ಮಳೆ ಎಂದು ಲೆಕ್ಕಿಸದೆ ಹೊಟ್ಟೆಪಾಡಿಗಾಗಿ ದುಡಿಯುವ ಈ ಕಾರ್ಮಿಕರನ್ನು ಗುಲಾಮರಂತೆ ದುಡಿಸಿಕೊಳ್ಳುವ ವರ್ಗವು ಒಂದು ಕಾಲದಲ್ಲಿತ್ತು. ಆದರೆ ಇದೀಗ ಕಾಲ ಬದಲಾಗಿದ್ದು ಕಾರ್ಮಿಕರಿಗೂ ಇಂತಿಷ್ಟು ಸಮಯಕ್ಕೆ ಇಂತಿಷ್ಟು ವೇತನ ಎನ್ನುವುದು ನಿಗದಿಯಾಗಿದೆ.

ಕಾರ್ಮಿಕರ ದಿನಾಚರಣೆ ಹುಟ್ಟುಕೊಂಡಿದ್ದು ಹೇಗೆ?
ಅಮೇರಿಕಾದಲ್ಲಿ ಕೈಗಾರಿಕಾ ಕ್ರಾಂತಿಯ ನಂತರ ಕಾರ್ಮಿಕರನ್ನು ವಿಪರೀತ ದುಡಿಸಿಕೊಳ್ಳಲಾಗುತ್ತಿತ್ತು. ಇದನ್ನು ವಿರೋಧಿಸಲು 1886ರಲ್ಲಿ ಕಾರ್ಮಿಕರ ಒಕ್ಕೂಟವು ಒಂದು ದಿನಕ್ಕೆ 16 ಗಂಟೆಗಳ ಕೆಲಸದ ಬದಲಿಗೆ 8 ಗಂಟೆಗಳ ಕೆಲಸಕ್ಕಾಗಿ ಮುಷ್ಕರವನ್ನು ಘೋಷಿಸಿತು. ಜನಸಂದಣಿಯನ್ನು ನಿಯಂತ್ರಿಸಲು, ಪೊಲೀಸರು ಶೆಲ್ ದಾಳಿಯನ್ನು ನಡೆಸಿದರು. ಅನೇಕ ಕಾರ್ಮಿಕರು ಸಾವನ್ನಪ್ಪಿದರು ಮತ್ತು ಕೆಲವರು ಗಾಯಗೊಂಡರು.

Advertisement

ಈ ಘಟನೆಯ ನಂತರ ಕಾರ್ಮಿಕರ ಹಕ್ಕುಗಳಿಗಾಗಿ ಸಾಗರೋತ್ತರ ಚಳುವಳಿ ಪ್ರಾರಂಭವಾಯಿತು. ಕೊನೆಗೆ 1916ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನವು 8 ದಿನಗಳ ಕೆಲಸದ ಅವಧಿಯನ್ನು ಘೋಷಿಸಿತು. ಕಾರ್ಮಿಕರ ಹಕ್ಕುಗಳ ಹೋರಾಟಕ್ಕೆ ಹಾಗೂ ಕಾರ್ಮಿಕರ ಪ್ರಭುತ್ವದ ನೆನಪೊಗೆ 1889ರಲ್ಲಿ ಮೊದಲ ಬಾರಿಗೆ ಮೇ 1 ರಂದು ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು ಎಂದು ಹೇಳಲಾಗುತ್ತದೆ. ಅಂದಿನಿಂದ ಪ್ರತಿ ವರ್ಷ ಮೇ 1 ರಂದು ಕಾರ್ಮಿಕರ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.

ಭಾರತದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರುಗಳಲ್ಲಿ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಉದಾಹರಣೆಗೆ ಹಿಂದಿಯಲ್ಲಿ 'ಅಂತಾರಾಷ್ಟ್ರೀಯ ಶ್ರಮಿಕ್ ದಿವಸ್', ಕಾರ್ಮಿಕ ದಿನಚರಣೆ (ಕನ್ನಡ), ಕಾರ್ಮಿಕ ದಿನೋತ್ಸವಮ್ (ತೆಲುಗು), ಕಮ್‌ಗರ್ ದಿವಸ್ (ಮರಾಠಿ), ಉಜೈಪಾಲರ್ ದೀನಂ (ತಮಿಳು), ತೊಝಿಲಾಲಿ ದಿನಂ (ಮಲಯಾಳಂ), ಮತ್ತು ಶ್ರೋಮಿಕ್ ದಿಬೋಶ್ (ಬಂಗಾಳಿ) ಎಂದು ಕರೆಯುತ್ತಾರೆ.

ಕಾರ್ಮಿಕರ ದಿನಾಚರಣೆಯ ಮಹತ್ವ:
ಕಾರ್ಮಿಕರ ದಿನಾಚರಣೆ ಅಥವಾ ಮೇ ದಿನವು ಕಾರ್ಮಿಕರ ಕೊಡುಗೆಗಳು, ಕಾರ್ಮಿಕರಿಗಿರುವ ಕಾನೂನುಗಳು, ಕಾರ್ಮಿಕರ ಹಕ್ಕುಗಳ ಉಲ್ಲಂಘನೆ, ಕೆಲಸದ ಅವಧಿ ಹೀಗೆ ಹತ್ತು ಹಲವು ವಿಚಾರದ ಬಗ್ಗೆ ಅರಿವು ಮೂಡಿಸುವ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಕಾರ್ಮಿಕರು ತಮ್ಮ ಶ್ರಮ ದಾನದ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಬಹುಮುಖ್ಯ ಕೊಡುಗೆ ನೀಡುತ್ತಾರೆ. ನೀವು ಕೆಲವು ರಾಷ್ಟ್ರಗಳ ನೋಡಬಹುದು. ಅಲ್ಲಿ ಕೆಲಸ ಮಾಡಲು ಕಾರ್ಮಿಕರ ಕೊರತೆ ಇದೆ. ಹೀಗಾಗಿ ಆ ದೇಶಕ್ಕೆ ವಲಸೆ ಹೋಗುವವರು, ಹಾಗೂ ನುರಿತ ಕಾರ್ಮಿಕರ ಕೊರತೆಯ ಹಿನ್ನೆಲೆ ಆ ದೇಶದ ಅಭಿವೃದ್ಧಿ ಕುಂಠಿತವಾಗುವುದನ್ನು ಸಹ ನಾವು ನೋಡಬಹುದು.

ಈ ಕಾರ್ಮಿಕರ ದಿನವು ಕಾರ್ಮಿಕರ ಶ್ರಮವನ್ನು ಗುರುತಿಸುವುದು ಮಾತ್ರವಲ್ಲದೆ ಅವರ ಹಕ್ಕುಗಳ ಬಗ್ಗೆ ಶಿಕ್ಷಣ ಮತ್ತು ಶೋಷಣೆಗೆ ಒಳಗಾಗದಂತೆ ಅವರನ್ನು ರಕ್ಷಿಸುವ ಗುರಿಯನ್ನು ಸಹ ಹೊಂದಿದೆ. ಇದರ ಜೊತೆಗೆ ಕಾರ್ಮಿಕರು ತಮ್ಮ ಕೆಲಸ ಸ್ಥಳದಲ್ಲಿ ಯಾವ ರೀತಿಯ ಹಕ್ಕುಗಳ ಹೊಂದಿರುತ್ತಾರೆ. ಅವರ ದುಡಿಮೆಗೆ ತಕ್ಕ ಫಲವೇನು? ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡುವ ಯತ್ನ ನಡೆಯುತ್ತಿದೆ.

Advertisement
Tags :
Advertisement