ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿ: ಎಂಐ ಎಮಿರೇಟ್ಸ್ ತಂಡ ಚಾಂಪಿಯನ್ಸ್

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಎಂಐ ಎಮಿರೇಟ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ.
07:42 AM Feb 18, 2024 IST | Ashika S

ದುಬೈ:  ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಎಂಐ ಎಮಿರೇಟ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ.

Advertisement

ಪಂದ್ಯದಲ್ಲಿ ಟಾಸ್ ಗೆದ್ದ ದುಬೈ ಕ್ಯಾಪಿಟಲ್ಸ್ ತಂಡವು ಎಂಐ ಎಮಿರೇಟ್ಸ್​ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು.  ಇನಿಂಗ್ಸ್ ಆರಂಭಿಸಿದ ಎಂಐ ಎಮಿರೇಟ್ಸ್​ ತಂಡವು 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕಿತು.

ಎಂಐ ಎಮಿರೇಟ್ಸ್ ತಂಡದ ಮುಹಮ್ಮದ್ ವಸೀಮ್ (43) ಹಾಗೂ ಕುಸಾಲ್ ಪೆರೇರಾ (38) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಂಡ್ರೆ ಫ್ಲೆಚರ್ 37 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 3 ಫೋರ್​ನೊಂದಿಗೆ 57 ರನ್​ ಬಾರಿಸಿದರು.

Advertisement

ಹಾಗೆಯೇ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ನಿಕೋಲಸ್ ಪೂರನ್ 27 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ 2 ಫೋರ್​ಗಳೊಂದಿಗೆ ಅಜೇಯ 57 ರನ್​ ಚಚ್ಚಿದರು.

209 ರನ್​ಗಳ ಕಠಿಣ ಗುರಿ ಪಡೆದ ದುಬೈ ಕ್ಯಾಪಿಟಲ್ಸ್​ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಲ್ಯೂಸ್ ಡು ಪ್ಲೂಯ್ (0) ಶೂನ್ಯಕ್ಕೆ ಔಟಾದರೆ, ಆ ಬಳಿಕ ಬಂದ ಟಾಮ್ ಅಬೆಲ್ 14 ರನ್ ಬಾರಿಸಿ ಔಟಾದರು. ಮತ್ತೊಂದೆಡೆ ಟಾಮ್ ಬ್ಯಾಂಟನ್ 35 ರನ್​ಗಳ ಕೊಡುಗೆ ನೀಡಿದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಸ್ಯಾಮ್ ಬಿಲ್ಲಿಂಗ್ಸ್ 29 ಎಸೆತಗಳಲ್ಲಿ 40 ರನ್ ಬಾರಿಸಿದರು. ಆದರೆ ಸಿಕಂದರ್ ರಾಝ (10), ರೋವ್​ಮನ್ ಪೊವೆಲ್ (8) ವಿಫಲರಾಗುವುದರೊಂದಿಗೆ ತಂಡದ ರನ್​ ಗತಿ ಕುಸಿಯಿತು.

ಅಂತಿಮವಾಗಿ ದುಬೈ ಕ್ಯಾಪಿಟಲ್ಸ್​ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 163 ರನ್​ ಬಾರಿಸಲಷ್ಟೇ ಶಕ್ತರಾದರು.

ಇದರೊಂದಿಗೆ ಎಂಐ ಎಮಿರೇಟ್ಸ್ ತಂಡವು 45 ರನ್​ಗಳ ಭರ್ಜರಿ ಜಯ ಸಾಧಿಸಿ ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿತು.

Advertisement
Tags :
LatetsNewsNewsKannadaಇಂಟರ್​ನ್ಯಾಷನಲ್ ಲೀಗ್ಎಂಐ ಎಮಿರೇಟ್ಸ್ಕ್ರಿಕೆಟ್
Advertisement
Next Article