For the best experience, open
https://m.newskannada.com
on your mobile browser.
Advertisement

ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ವಿಶ್ವ ದಾದಿಯರ ದಿನ ಆಚರಣೆ

ಮಂಗಳೂರಿನ ಅತ್ತಾವರದಲ್ಲಿರುವ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆಯನ್ನು  ಮೇ 14ರಂದು ಆಸ್ಪತ್ರೆಯ ಎಮ್‍ಕಾಡ್ಸ್ ಸಭಾಂಗಣದಲ್ಲಿ ಆಚರಿಸಲಾಯಿತು.
04:18 PM May 15, 2024 IST | Ashitha S
ಕೆ ಎಂ ಸಿ  ಆಸ್ಪತ್ರೆ ಅತ್ತಾವರದಲ್ಲಿ ವಿಶ್ವ ದಾದಿಯರ ದಿನ ಆಚರಣೆ

ಮಂಗಳೂರು: ಮಂಗಳೂರಿನ ಅತ್ತಾವರದಲ್ಲಿರುವ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆಯನ್ನು  ಮೇ 14ರಂದು ಆಸ್ಪತ್ರೆಯ ಎಮ್‍ಕಾಡ್ಸ್ ಸಭಾಂಗಣದಲ್ಲಿ ಆಚರಿಸಲಾಯಿತು.

Advertisement

ಮುಖ್ಯ ಅತಿಥಿಗಳಾಗಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ. ಟಿ.ಎಂ.ಎ. ಪೈ ಆಸ್ಪತ್ರೆ ಉಡುಪಿ ಮತ್ತು ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ ಈ ಮೂರೂ ಆಸ್ಪತ್ರೆಗಳ ನರ್ಸಿಂಗ್ ವಿಭಾಗದ ಮುಖ್ಯಸ್ಥೆಯಾದ ಡಾ. ಸುಭ ಸೂರಿಯ ಪಿ ಯವರು ಭಾಗವಹಿಸಿದ್ದರು.

ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭಗೊಂಡ ಬಳಿಕ ಅತಿಥಿಗಳು ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ತದನಂತರ ತನ್ನ ಸೇವೆಯಲ್ಲಿ ದೇವರನ್ನು ಕಂಡ ಹಾಗೂ ಮಾನವ ಕುಲಕ್ಕೆ ಸೇವೆಯನ್ನು ಸಲ್ಲಿಸುತ್ತಿರುವ ಅನೇಕ ಮಾನವೀಯ ದಾದಿಯರ ಪ್ರತಿನಿಧಿಯಾದ ಫ್ಲಾರೆನ್ಸ್ ನೈಟಿಂಗೇಲ್ ಅವರ ಭಾವಚಿತ್ರಕ್ಕೆ ಹೂಗಳನ್ನು ಅರ್ಪಿಸುವುದರ ಮೂಲಕ ಗೌರವವನ್ನು ಸಲ್ಲಿಸಲಾಯಿತು.

ನರ್ಸಿಂಗ್ ಸಿಬ್ಬಂದಿಯವರು ಹಾಗೂ ಅತಿಥಿಗಳು ಕೇಕನ್ನು ಕತ್ತರಿಸುವುದರ ಮೂಲಕ ದಿನವನ್ನು ಸಂಭ್ರಮಿಸಲಾಯಿತು.

ಕೆಎಂಸಿ ಆಸ್ಪತ್ರೆ ಅತ್ತಾವರದ ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ದೀಪಕ್ ಮಡಿ ಈ ಸಂದರ್ಭದಲ್ಲಿ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ ದಾದಿಯರು ಆಸ್ಪತ್ರೆಯ ಆಧಾರ ಸ್ಥಂಭಗಳು. ಆಸ್ಪತ್ರೆಯಲ್ಲಿ ದಾದಿಯರು ಇಲ್ಲದೆ ಕೇವಲ ವೈದ್ಯರು ಮಾತ್ರ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುವುದು ಅಸಾಧ್ಯ. ದಿನವಿಡೀ ರೋಗಿಗಳ ಜೊತೆ ಇದ್ದು ಅವರಿಗೆ ಬೇಕಾದಂತಹ ಆರೈಕೆ, ಸಾಂತ್ವನ, ಧೈರ್ಯವನ್ನು ನೀಡುವವರು ದಾದಿಯರು. ಇಂತಹ ಒಂದು ಪವಿತ್ರವಾದ ವೃತ್ತಿಯನ್ನು ಆರಿಸಿಕೊಂಡು ಸೇವೆ ಸಲ್ಲಿಸುತ್ತಿರುವ ಎಲ್ಲಾ ದಾದಿಯರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಡಾ. ಸುಬಾ ಸೂರಿಯಾ ಪಿ. ಅವರು ಮಾತನಾಡಿ “ಶುಶ್ರೂಷೆ ಯ ನಿರಂತರವಾಗಿ ಬದಲಾಗುತ್ತಿರುವ ಮತ್ತು ಬೇಡಿಕೆಯ ಸ್ವರೂಪವನ್ನು ಒತ್ತಿ ಹೇಳಿದರು. ಈ ವರ್ಷದ ವಿಶ್ವ ದಾದಿಯರ ದಿನದ ವಿಷಯವಾದ "ನಮ್ಮ ದಾದಿಯರು, ನಮ್ಮ ಭವಿಷ್ಯ’ ಬಗ್ಗೆ ವಿವರಿಸುತ್ತಾ ಈ ವಿಷಯವು ನರ್ಸಿಂಗ್ ಶಿಕ್ಷಣ ಮತ್ತು ತರಬೇತಿಯಲ್ಲಿ ಹೂಡಿಕೆಯ ಮಹತ್ವವನ್ನು ಒತ್ತಿಹೇಳುತ್ತದೆ. ಹೀಗೆ ಹೂಡಿಕೆ ಮಾಡುವುದರಿಂದ, ಹೊಸ ನರ್ಸಿಂಗ್ ಪದವೀಧರರು ಇಂದಿನ ಪ್ರಸಕ್ತ ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆಯುವಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಹೊಸ ನರ್ಸಿಂಗ್ ಪದವೀಧರರು ತಮ್ಮ ಕ್ಷೇತ್ರದಲ್ಲಿ ಪರಿಣಿತಿಯನ್ನು ಹೊಂದಲು ಕಲಿಕೆಯಲ್ಲಿ ಆಸಕ್ತಿ ಮತ್ತು ತಮ್ಮ ತಂಡಗಳೊಂದಿಗೆ ಪರಿಣಾಮಕಾರಿಯಾಗಿ ಸಹಕರಿಸುವ ಇಚ್ಛೆಯನ್ನು ಹೊಂದುವ ಮಹತ್ವವನ್ನು ಹೇಳಿದರು. ಬಲವಾದ ಜ್ಞಾನ, ಪ್ರಾಯೋಗಿಕ ಕೌಶಲ್ಯ ಮತ್ತು ಆತ್ಮವಿಶ್ವಾಸ ಹೊಂದಿರುವ ದಾದಿಯರು ನಿಜವಾಗಿಯೂ ಸಶಕ್ತ ದಾದಿಯರು ಎಂದು ಅವರು ಹೇಳಿದರು. ಮುಂದಿನ ಪೀಳಿಗೆಯ ಆರೈಕೆದಾರರೊಂದಿಗೆ ತಮ್ಮ ಬುದ್ಧಿವಂತಿಕೆ ಮತ್ತು ಪರಿಣತಿಯನ್ನು ಹಂಚಿಕೊಳ್ಳಲು ಅನುಭವಿ ದಾದಿಯರಿಗೆ ಕರೆ ನೀಡಿದರು”.

Advertisement

ವೇದಿಕೆಯಲ್ಲಿ ಕೆ.ಎಂ.ಸಿ. ಅಸ್ಪತ್ರೆ ಅತ್ತಾವರದ ನರ್ಸಿಂಗ್ ಅಧೀಕ್ಷಕಿ ಶ್ರೀಮತಿ ಗ್ರೇಸಿ ಲೋಬೋ ಉಪಸ್ಥಿತರಿದ್ದು ಆಸ್ಪತ್ರೆಯ ಎಲ್ಲಾ ನರ್ಸಿಂಗ್ ಸಿಬ್ಬಂದಿಗಳಿಗೆ ಶುಭ ಹಾರೈಸಿದರು.. ವಿಶ್ವ ದಾದಿಯರ ದಿನಾಚರಣೆಯ ಅಂಗವಾಗಿ ಅನೇಕ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು ವಿಜೇತರಾದ ದಾದಿಯರಿಗೆ ಅತಿಥಿಗಳು ಬಹುಮಾನಗಳನ್ನು ನೀಡಿ ಅಭಿನಂದಿಸಿದರು.

ಕಾರ್ಯಕ್ರಮವನ್ನು ಫಾರ್ಮಸಿ ವಿಭಾಗದ ಕುಮಾರಿ ಶಾಹಿದಾ ನಡೆಸಿಕೊಟ್ಟರು. ಉಪ ನರ್ಸಿಂಗ್ ಅಧೀಕ್ಷಕಿ ಸೋಫಿಯಾ ಪಿಂಟೋ ಧನ್ಯವಾದವನ್ನಿತ್ತರು. ಆಸ್ಪತ್ರೆಯ ಸಿಬ್ಬಂದಿ ಕುಮಾರಿ ಕಾವ್ಯ ಪ್ರಾರ್ಥನೆಯನ್ನು ನೆರವೇರಿಸಿದರು. ವೇದಿಕೆಯಲ್ಲಿ ಮಾಹೆ ಮಣಿಪಾಲದ ಚೀಫ್ ಅಪರೇಟಿಂಗ್ ಆಫೀಸರ್ ಡಾ. ಆನಂದ್ ವೆಣುಗೋಪಾಲ್, ಕಟೀಲಿನ ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಶಿವಾನಂದ ಪ್ರಭು ಉಪಸ್ಥಿತರಿದ್ದರು.

Advertisement
Tags :
Advertisement