ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಐಫೋನ್​ ಮತ್ತು ಐಪ್ಯಾಡ್​​ ಬಳಕೆದಾರರೇ ಎಚ್ಚರ!

ಐಫೋನ್​ ಮತ್ತು ಐಪ್ಯಾಡ್​​ ಬಳಕೆದಾರರು ಓದಲೇಬೇಕಾದ ಸುದ್ದಿ ಇದು. CERT-In ಅಥವಾ ಇಂಡಿಯನ್​ ಕಂಪ್ಯೂಟರ್​ ಎಮರ್ಜೆನ್ಸಿ ರೆಸ್ಪಾನ್ಸ್​ ಟೀಮ್​ ಭಾರತೀಯ ಆ್ಯಪಲ್​ ಉತ್ಪನ್ನ ಬಳಕೆದಾರರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಮಾರ್ಚ್​ 15ರಂದು CERT-In ವೆಬ್​ಸೈಟ್ನಲ್ಲಿ ಮಾಹಿತಿ ಹಂಚಿಕೊಂಡಿದೆ.
03:31 PM Mar 19, 2024 IST | Ashitha S

ದೆಹಲಿ: ಐಫೋನ್​ ಮತ್ತು ಐಪ್ಯಾಡ್​​ ಬಳಕೆದಾರರು ಓದಲೇಬೇಕಾದ ಸುದ್ದಿ ಇದು. CERT-In ಅಥವಾ ಇಂಡಿಯನ್​ ಕಂಪ್ಯೂಟರ್​ ಎಮರ್ಜೆನ್ಸಿ ರೆಸ್ಪಾನ್ಸ್​ ಟೀಮ್​ ಭಾರತೀಯ ಆ್ಯಪಲ್​ ಉತ್ಪನ್ನ ಬಳಕೆದಾರರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಮಾರ್ಚ್​ 15ರಂದು CERT-In(Computer Emergency Response Team) ವೆಬ್​ಸೈಟ್ನಲ್ಲಿ ಮಾಹಿತಿ ಹಂಚಿಕೊಂಡಿದೆ.

Advertisement

ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಆ್ಯಪಲ್​ ಐಒಎಸ್​ ಮತ್ತು ಐಪ್ಯಾಡ್ಒಎಸ್​​ನಲ್ಲಿ ದುರ್ಬಲತೆಯನ್ನು ಕಂಡುಹಿಡಿದಿದೆ. ಇದರಿಂದ ಡೇಟಾ ಖದೀಮರಿಗೆ ಅಥವಾ ಹ್ಯಾಕರ್ಸ್​ಗಳು ಸಿಸ್ಟಂ ನಿಯಂತ್ರಣವನ್ನು ಸಾಧಿಸಲು ಸಾಧ್ಯವಾಗುವ ಚಾನ್ಸ್​ ಇದೆ ಎಂದು ಹೇಳಿದೆ.

ಮಾತ್ರವಲ್ಲದೆ, ಸದ್ಯ ಕಂಡು ಬಂದಿರುವ ನ್ಯೂನತೆಯಿಂದ​ ಕಾರ್ಯನಿರ್ವಹಿಸದೇ ಇರಬಹುದು, ಅಥವಾ ಯಾವುದೋ ಕೋಡ್​ ಬಳಸಿ ಖಾಸಗಿ ಡೇಟಾವನ್ನು ಕದಿಯಬಹುದು ಎಂದು ಹೇಳಿದೆ.

Advertisement

ಮುಖ್ಯವಾಗಿ ಈ ದೋಷವು iOS ಮತ್ತು Ipads ವರ್ಷನ್​ 16.7.6 ಡಿವೈಸ್​ಗಳಾದ iPhone 8, iPhone8 plus, iPhone X, iPad 5th ಜನರೇಷನ್​, iPad Pro 9.7 ಇಂಚು ಮತ್ತು iPad Pro 12.9 ಇಂಚಿನ ಮೊದಲ ಜನರೇಷನ್​ಗಳಿಗೆ ಪರಿಣಾಮ ಬೀರಲಿದೆ.

ಹೀಗಾಗಿ ಐಫೋನ್​ ಬಳಕೆದಾರರು ಜಾಗರೂಕರಾಗಿರಿ ಎಂದು ಇಂಡಿಯನ್​ ಕಂಪ್ಯೂಟರ್​ ಎಮರ್ಜೆನ್ಸಿ ರೆಸ್ಪಾನ್ಸ್​ ಟೀಮ್​ ತನ್ನ ವೆಟ್​​ಸೈಟ್​ನಲ್ಲಿ ಮಾಹಿತಿ ಹಂಚಿಕೊಂಡಿದೆ.

 

Advertisement
Tags :
CERTHackeriPadiPhone
Advertisement
Next Article