ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಐಪಿಎಲ್: ಮುಂಬೈನ ಅಬ್ಬರದ ಆಟಕ್ಕೆ ನೆಲಕಚ್ಚಿದ ಆರ್ ಸಿಬಿ

ಆರ್​ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್​ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಕಳಪೆ ಬೌಲಿಂಗ್‌ಗೆ, ಕಳಪೆ ಫೀಲ್ಡಿಂಗ್‌ಗೆ ಮತ್ತೆ ಆರ್‌ಸಿಬಿ ಬೆಲೆ ತೆತ್ತಿದೆ.  ಆರ್​ಸಿಬಿ ನೀಡಿದ 196 ರನ್​ ಸವಾಲನ್ನು ಸುಲಭವಾಗಿ ಸ್ವೀಕರಿಸುವ ಮೂಲಕ ಮುಂಬೈ ಇಂಡಿಯನ್ಸ್ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ.
07:17 AM Apr 12, 2024 IST | Ashika S

ಮುಂಬೈ: ಆರ್​ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್​ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಕಳಪೆ ಬೌಲಿಂಗ್‌ಗೆ, ಕಳಪೆ ಫೀಲ್ಡಿಂಗ್‌ಗೆ ಮತ್ತೆ ಆರ್‌ಸಿಬಿ ಬೆಲೆ ತೆತ್ತಿದೆ.  ಆರ್​ಸಿಬಿ ನೀಡಿದ 196 ರನ್​ ಸವಾಲನ್ನು ಸುಲಭವಾಗಿ ಸ್ವೀಕರಿಸುವ ಮೂಲಕ ಮುಂಬೈ ಇಂಡಿಯನ್ಸ್ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

Advertisement

ಓಪನಿಂಗ್​ ಬ್ಯಾಟ್ಸ್​ಮನ್​ ಆಗಿ ಮೈದಾನಕ್ಕಿಳಿದ ಇಶನ್‌ ಕಿಶನ್‌,  34 ಎಸೆತದಲ್ಲಿ 7 ಬೌಂಡರಿ ಮತ್ತು 5 ಸಿಕ್ಸ್​ ಬಾರಿಸಿ 69 ರನ್​ ಬಾರಿಸಿದ್ದಾರೆ. ಆ ಮೂಲಕ ಅವರ ಸ್ಟ್ರೈಕ್​ ರೇಟ್​​ 202.94ಕ್ಕೇರಿದೆ.

ನಂತರ ಸೂರ್ಯಕುಮಾರ್‌ ಯಾದವ್‌ 19 ಎಸೆತಕ್ಕೆ 5 ಬೌಂಡರಿ ಮತ್ತು 4 ಸಿಕ್ಸ್​ ಹೊಡೆಯುವ ಮೂಲಕ 52 ರನ್​ ಬಾರಿಸಿದ್ದಾರೆ. ಅವರ ಸ್ಫೋಟಕ ಅರ್ಧಶತಕದ ಆಟ ಅಭಿಮಾನಿಗಳ ಸಂಸತಕ್ಕೆ ಕಾರಣರಾಗಿದ್ದಾರೆ.

Advertisement

ಟಾಸ್‌ ಸೋತು ಬ್ಯಾಟಿಂಗ್‌ ಇಳಿದ ಆರ್‌ಸಿಬಿ ಪರ ಮೂವರು ಆಟಗಾರರು ಮಾತ್ರ ಎರಡಂಕಿ ದಾಟಿದ್ದರು. ನಾಯಕ ಫಾ ಡುಪ್ಲೆಸಿಸ್‌ 61 ರನ್‌(40 ಎಸೆತ, 4 ಬೌಂಡರಿ, 3 ಸಿಕ್ಸರ್‌), ರಜತ್‌ ಪಟೀದಾರ್‌ 50 ರನ್‌ (26 ಎಸೆತ, 3 ಬೌಂಡರಿ, 4 ಸಿಕ್ಸರ್‌), ಕೊನೆಯಲ್ಲಿ ದಿನೇಶ್‌ ಕಾರ್ತಿಕ್‌  ಸ್ಫೋಟಕ 53 ರನ್‌(23 ಎಸೆತ, 5 ಬೌಂಡರಿ, 4 ಸಿಕ್ಸರ್‌) ಆಟದಿಂದ 8 ವಿಕೆಟ್‌ ನಷ್ಟಕ್ಕೆ 196 ರನ್‌ ಹೊಡೆಯಿತು.

ಜಸ್‌ಪ್ರೀತ್‌ ಬುಮ್ರಾ 21 ರನ್‌ ನೀಡಿ 5 ವಿಕೆಟ್‌ ಕೀಳುವ ಮೂಲಕ ಆರ್‌ಸಿಬಿ ಬೆನ್ನೆಲುಬನ್ನು ಮುರಿದರು. 4 ಎಸೆತ ಎದುರಿಸಿದ ಮ್ಯಾಕ್ಸ್‌ ವೆಲ್‌ ಶೂನ್ಯ ಸುತ್ತಿ ಮತ್ತೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

ಗೆಲ್ಲಲು 197 ರನ್‌ಗಳ ಗುರಿಯನ್ನು ಪಡೆದ ಮುಂಬೈ 15.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 199 ರನ್‌ ಹೊಡೆಯಿತು. ಈ ಮೂಲಕ ಮೂರು ಸೋಲಿನಿಂದ ಕಂಗೆಟ್ಟಿದ್ದ ಮುಂಬೈ ಎರಡನೇ ಜಯ ಸಾಧಿಸಿತು.

Advertisement
Tags :
cricketIPL 2024LatetsNewsMI vs RCBnewskaranataka
Advertisement
Next Article