ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಐಪಿಎಲ್‌ 2024: 20 ಕೋಟಿಗೆ ಹರಾಜಾದ ಕಮ್ಮಿನ್ಸ್‌

ಐಪಿಎಲ್ 2024 ಗಾಗಿ ಇಂದು ದುಬೈನಲ್ಲಿ ಆಟಗಾರರನ್ನು ಹರಾಜು ಮಾಡಲಾಗುತ್ತಿದೆ
03:32 PM Dec 19, 2023 IST | Ramya Bolantoor

ದುಬೈ: ಐಪಿಎಲ್ 2024 ಗಾಗಿ ಇಂದು ದುಬೈನಲ್ಲಿ ಆಟಗಾರರನ್ನು ಹರಾಜು ಮಾಡಲಾಗುತ್ತಿದೆ. ಈ ಮಿನಿ ಹರಾಜಿನಲ್ಲಿ 332 ಆಟಗಾರರ ಭವಿಷ್ಯವನ್ನು ನಿರ್ಧಾರವಾಗಲಿದೆ. ಅದರಲ್ಲಿ 216 ಭಾರತೀಯರು ಮತ್ತು 116 ವಿದೇಶಿ ಆಟಗಾರರಿದ್ದಾರೆ. ಈ 332 ಆಟಗಾರರನ್ನು 19 ಸೆಟ್‌ಗಳಾಗಿ ವಿಂಗಡಿಸಲಾಗಿದೆ.

Advertisement

ನಿರೀಕ್ಷೆಯಂತೆಯೇ 2024 ವಿಶ್ವಕಪ್‌ ಫೈನಲ್‌ ಹೀರೋ ಟ್ರಾವಿನ್‌ ಹೆಡ್‌ 6.8 ಕೋಟಿ ದೊಡ್ಡ ಮೊತ್ತದ ಐಪಿಎಲ್‌ ಒಪ್ಪಂದ ಪಡೆದುಕೊಂಡಿದ್ದಾರೆ. ಇನ್ನು ವಿಶ್ವಕಪ್‌ ವಿಜೇತ ಆಸೀಸ್‌ ತಂಡದ ನಾಯಕ ಪ್ಯಾಟ್ದ ಕಮ್ಮಿನ್ಸ್‌ ದಾಖಲೆಯ 20 ಕೋಟಿಗೆ ಸನ್‌ರೈಸರ್ಸ್‌ ಪಾಲಾಗಿದ್ದಾರೆ.

ಕಮ್ಮಿನ್ಸ್‌ರನ್ನು ಖರೀದಿ ಮಾಡುವ ನಿಟ್ಟಿನಲ್ಲಿ ಆರ್‌ಸಿಬಿ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ದೊಡ್ಡ ರೇಸ್‌ನಲ್ಲಿದ್ದವು. ಎರಡೂ ತಂಡಗಳು ಕಮ್ಮಿನ್ಸ್‌ರನ್ನು ಖರೀದಿ ಮಾಡುವ ನಿಟ್ಟಿನಲ್ಲಿ ಬಿಡ್‌ಅನ್ನು 10 ಕೋಟಿಗೂ ಮೇಲೆ ಏರಿಸಿದ್ದವು. ಅದಾದ ಕೆಲವೇ ಹೊತ್ತಿನಲ್ಲಿ ಕಮ್ಮಿನ್ಸ್‌ ಅವರ ಬೆಲೆ 20 ಕೋಟಿಯ ಗಡಿ ಮುಟ್ಟಿದಾಗ ಐಪಿಎಲ್‌ ಇತಿಹಾಸದಲ್ಲಿಯೇ ಗರಿಷ್ಠ ಮೊತ್ತಕ್ಕೆ ಮಾರಾಟವಾಗುವ ಆಟಗಾರ ಎನಿಸಿದರು. ಕೊನೆಗೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ದಾಖಲೆಯ 20.50 ಕೋಟಿ ರೂಪಾಯಿಗೆ ಅವರನ್ನು ತಂಡಕ್ಕೆ ಖರೀದಿ ಮಾಡಿತು.

Advertisement

1 ಕೋಟಿ ಮೂಲ ಬೆಲೆ ಹೊಂದಿದ್ದ ರೋವ್‌ಮನ್‌ ಪಾವೆಲ್‌ ಅವರನ್ನು ಖರೀದಿಸಲು ರಾಜಸ್ಥಾನ ರಾಯಲ್ಸ್‌ ಹಾಗೂ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡಗಳು ಕಾದಾಟ ನಡೆಸಿದವು. ಆದರೆ, ರೋವ್‌ಮನ್‌ ಪಾವೆಲ್‌ಗೆ ದೊಡ್ಡಮಟ್ಟದ ಬಿಡ್‌ ಮಾಡಿದ ರಾಜಸ್ಥಾನ ರಾಯಲ್ಸ್‌ ತಂಡ ಬರೋಬ್ಬರಿ 7.40 ಕೋಟಿ ರೂಪಾಯಿಗೆ ವೆಸ್ಟ್‌ ಇಂಡೀಸ್‌ ಆಟಗಾರರನ್ನು ಖರೀದಿಸಿತು.

Advertisement
Tags :
LatestNewsNewsKannadaಐಪಿಎಲ್ದುಬೈ
Advertisement
Next Article