For the best experience, open
https://m.newskannada.com
on your mobile browser.
Advertisement

ಇಂದು ಸಿಎಸ್‌ಕೆ ಮತ್ತು ಗುಜರಾತ್ ಟೈಟನ್ಸ್ ಮುಖಾಮುಖಿ

ಈ ಬಾರಿಯ ಐಪಿಎಲ್ ಪಂದ್ಯಗಳು ಒಂದಕ್ಕಿಂತ ಒಂದು ರೋಚಕತೆಯಿಂದ ಸಾಗುತ್ತಿದ್ದು, ಕಳೆದ ದಿನ ಪಂದ್ಯದಲ್ಲಿ ಆರ್‌ಸಿಬಿ ತಂಡ ತನ್ನ ಓಂ ಗ್ರೌಂಡ್ ನಲ್ಲಿ ಪಂಜಾಬ್ ಕಿಂಗ್ಸ್ ಜೊತೆ ಭರ್ಜರಿ ಜಯ ಸಾಧಿಸಿದೆ. ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ಮುಖಾಮುಖಿಯಾಗಲಿವೆ.
03:32 PM Mar 26, 2024 IST | Ashitha S
ಇಂದು ಸಿಎಸ್‌ಕೆ ಮತ್ತು ಗುಜರಾತ್ ಟೈಟನ್ಸ್ ಮುಖಾಮುಖಿ

ಚೆನ್ನೈ: ಈ ಬಾರಿಯ ಐಪಿಎಲ್ ಪಂದ್ಯಗಳು ಒಂದಕ್ಕಿಂತ ಒಂದು ರೋಚಕತೆಯಿಂದ ಸಾಗುತ್ತಿದ್ದು, ಕಳೆದ ದಿನ ಪಂದ್ಯದಲ್ಲಿ ಆರ್‌ಸಿಬಿ ತಂಡ ತನ್ನ ಓಂ ಗ್ರೌಂಡ್ ನಲ್ಲಿ ಪಂಜಾಬ್ ಕಿಂಗ್ಸ್ ಜೊತೆ ಭರ್ಜರಿ ಜಯ ಸಾಧಿಸಿದೆ. ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ಮುಖಾಮುಖಿಯಾಗಲಿವೆ.

Advertisement

ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳೆದ ಐಪಿಎಲ್ ಫೈನಲ್ ನಲ್ಲಿ ಗುಜರಾತ್ ಟೈಟನ್ಸ್ ಎದುರು ಜಯಭೇರಿಯಾಗುವ ಮೂಲಕ ತನ್ನ ಐದನೇ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಇಂದು ಗುಜರಾತ್ ಟೈಟನ್ಸ್ ಕಳೆದ ಐಪಿಎಲ್ ಫೈನಲ್ ನ ಸೇಡನ್ನು ತೀರಿಸಿಕೊಳ್ಳಲಿದೆಯಾ ಕಾದು ನೋಡಬೇಕಾಗಿದೆ. ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಎಂ ಎಸ್ ಧೋನಿ ಅಭಿಮಾನಿಗಳು ಕಿಕ್ಕಿರಿದು ಸೇರಲಿದ್ದಾರೆ.

ಇನ್ನು ಯುವ ಆಟಗಾರರ ದಂಡನ್ನೇ ಹೊಂದಿರುವ ಗುಜರಾತ್ ಟೈಟನ್ಸ್‌ ಮತ್ತೊಂದು ಜಯದ ಕನಸಿನಲ್ಲಿದೆ. ನಾಯಕ ಶುಭಮನ್‌ ಗಿಲ್ ಹಾಗೂ ಅನುಭವಿ ವಿಕೆಟ್‌ ಕೀಪರ್ ಬ್ಯಾಟರ್‌ ವೃದ್ಧಿಮನ್ ಸಹಾ ಬಿಗ್ ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡಿದ್ದಾರೆ.

Advertisement

Advertisement
Tags :
Advertisement