For the best experience, open
https://m.newskannada.com
on your mobile browser.
Advertisement

ಭಾರತದಲ್ಲಿಂದು ಐಕ್ಯೂ 12 5G ಸ್ಮಾರ್ಟ್​ಫೋನ್ ಅನಾವರಣ

ಐಕ್ಯೂ ಕಂಪನಿಯ ಬಹುನಿರೀಕ್ಷಿತ 12 5ಜಿ (iQOO 12 5G) ಸ್ಮಾರ್ಟ್​ಫೋನ್ ಇಂದು (ಡಿ.12) ಭಾರತದಲ್ಲಿ ಅನಾವರಣಗೊಳ್ಳಲಿ.
09:48 AM Dec 12, 2023 IST | Ramya Bolantoor
ಭಾರತದಲ್ಲಿಂದು  ಐಕ್ಯೂ 12 5g ಸ್ಮಾರ್ಟ್​ಫೋನ್  ಅನಾವರಣ

ಐಕ್ಯೂ ಕಂಪನಿಯ ಬಹುನಿರೀಕ್ಷಿತ 12 5ಜಿ (iQOO 12 5G) ಸ್ಮಾರ್ಟ್​ಫೋನ್ ಇಂದು (ಡಿ.12) ಭಾರತದಲ್ಲಿ ಅನಾವರಣಗೊಳ್ಳಲಿ. ಅಮೆಜಾನ್​ನಲ್ಲಿ ಈ ಸ್ಮಾರ್ಟ್​ಫೋನ್ ಮಾರಾಟ ಕಾಣಲಿದೆ.

Advertisement

ಬಿಡುಗಡೆಗು ಮೊದಲು ಐಕ್ಯೂ ಕಂಪನಿ ಐಕ್ಯೂ 12 ಅನ್ನು ಪ್ರಿ-ಬುಕಿಂಗ್ ಆರ್ಡರ್‌ ಪ್ರಾರಂಭಿಸಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೇಳಿಬಂದಿದೆ. ಕಳೆದ ತಿಂಗಳು ಚೀನಾದಲ್ಲಿ ಐಕ್ಯೂ 12 ಪ್ರೊ ಜೊತೆಗೆ ಐಕ್ಯೂ 12 ಅನ್ನು ಪರಿಚಯಿಸಲಾಗಿತ್ತು. ಅಲ್ಲಿ ಯಶಸ್ಸಾದ ಬಳಿಕ ಇಂದು ಭಾರತದಲ್ಲಿ ಐಕ್ಯೂ 12 5G ಬಿಡುಗಡೆಗೊಳ್ಳಲಿದೆ.

ಐಕ್ಯೂ 12 5G ಸ್ಮಾರ್ಟ್​ಫೋನ್ 6.78-ಇಂಚಿನ 1.5K LTPO OLED ಡಿಸ್ ಪ್ಲೇಯೊಂದಿಗೆ ಬರುತ್ತದೆ, ಇದು ಹೆಚ್ಚಿನ 144Hz ರಿಫ್ರೆಶ್ ದರ ಮತ್ತು 3000 nits ನ ಗರಿಷ್ಠ ಬ್ರೈಟ್​ನೆಸ್ ಹೊಂದಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 3 SoC ನಿಂದ ಚಾಲಿತವಾಗಿದೆ.

Advertisement

ಕ್ಯಾಮೆರಾ ವಿಭಾಗದಲ್ಲಿ, ಐಕ್ಯೂ 12 5G OIS ಜೊತೆಗೆ 50MP ಪ್ರಾಥಮಿಕ ಕ್ಯಾಮೆರಾ, 50MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 64MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾವನ್ನು 3x ಆಪ್ಟಿಕಲ್ ಜೂಮ್ ಮತ್ತು 100x ಡಿಜಿಟಲ್ ಜೂಮ್ ಹೊಂದಿದೆ. ಸೆಲ್ಫಿಗಾಗಿ, ಐಕ್ಯೂ 12 5G 16MP ಮುಂಭಾಗದಲ್ಲಿ ಕ್ಯಾಮೆರಾ ಇದೆ.

ಐಕ್ಯೂ 12 5G ಸ್ಮಾರ್ಟ್​ಫೋನ್​ನ ನಿಖರವಾದ ಬೆಲೆ ತಿಳಿದಿಲ್ಲ. ಈ ಫೋನ್ 16GB RAM ಮತ್ತು 1TB ಸಂಗ್ರಹಣೆಯೊಂದಿಗೆ ಸಾಕಷ್ಟು ಶೇಖರಣಾ ಆಯ್ಕೆಗಳನ್ನು ನೀಡುತ್ತದೆ. ಇದು ಕಸ್ಟಮೈಸ್ ಮಾಡಿದ OriginOS 4.0 ಸ್ಕಿನ್‌ನೊಂದಿಗೆ ಆಂಡ್ರಾಯ್ಡ್ 14 ನಲ್ಲಿ ರನ್ ಆಗುತ್ತದೆ. ಐಕ್ಯೂ 12 5G 120W ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ.

Advertisement
Tags :
Advertisement