For the best experience, open
https://m.newskannada.com
on your mobile browser.
Advertisement

ರೈಲು ನಿಲ್ದಾಣಗಳಲ್ಲಿ ಪ್ರೀ ಆರ್ಡರ್ಡ್ ಫುಡ್ ಡೆಲಿವರಿ: ಐಆರ್​ಸಿಟಿಸಿ ಷೇರು ಏರಿಕೆ

ಐಆರ್​ಸಿಟಿಸಿ ಸ್ವಿಗ್ಗಿ ಜೊತೆ ಕೈಜೋಡಿಸಿದ್ದು, ಪೋರ್ಟಲ್ ಮೂಲಕ ರೈಲು ಪ್ರಯಾಣಿಕರು ಮುಂಗಡವಾಗಿ ಬುಕ್ ಮಾಡಲಾದ ಆಹಾರವನ್ನು ತಲುಪಿಸುವುದು ಇದರ ಉದ್ದೇಶವಾಗಿದೆ. ಈ ಬಗ್ಗೆ ಐಆರ್​ಸಿಟಿಸಿ ತನ್ನ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ಫೈಲಿಂಗ್​ನಲ್ಲಿ ಮಾಹಿತಿ ನೀಡಿದೆ.
07:54 PM Feb 23, 2024 IST | Maithri S
ರೈಲು ನಿಲ್ದಾಣಗಳಲ್ಲಿ ಪ್ರೀ ಆರ್ಡರ್ಡ್ ಫುಡ್ ಡೆಲಿವರಿ  ಐಆರ್​ಸಿಟಿಸಿ ಷೇರು ಏರಿಕೆ

ಬೆಂಗಳೂರು: ಐಆರ್​ಸಿಟಿಸಿ ಸ್ವಿಗ್ಗಿ ಜೊತೆ ಕೈಜೋಡಿಸಿದ್ದು, ಪೋರ್ಟಲ್ ಮೂಲಕ ರೈಲು ಪ್ರಯಾಣಿಕರು ಮುಂಗಡವಾಗಿ ಬುಕ್ ಮಾಡಲಾದ ಆಹಾರವನ್ನು ತಲುಪಿಸುವುದು ಇದರ ಉದ್ದೇಶವಾಗಿದೆ. ಪ್ರೀ ಆರ್ಡರ್ಡ್ ಫುಡ್  ಡೆಲಿವರಿಗೆ ಸ್ವಿಗ್ಗಿ ಜೊತೆ ಕೈ ಜೋಡಿಸಿರುವ  ಐಆರ್​ಸಿಟಿಸಿ ತನ್ನ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ಫೈಲಿಂಗ್​ನಲ್ಲಿ ಮಾಹಿತಿ ನೀಡಿದೆ.

Advertisement

ಬೆಂಗಳೂರು, ವಿಜಯವಾಡ, ವಿಶಾಖಪಟ್ಟಣ, ಭುಬನೇಶ್ವರದ ರೈಲ್ವೇ ನಿಲ್ದಾಣಗಳಲ್ಲಿ ಐಆರ್​ಸಿಟಿಸಿ ಇ-ಕೆಟರಿಂಗ್ ಪೋರ್ಟಲ್ ಮೂಲಕ ಮುಂಗಡವಾಗಿ ಬುಕ್ ಮಾಡಲಾದ ಆಹಾರದ ಪೂರೈಕೆ ಮತ್ತು ಡೆಲಿವರಿ ಮಾಡಲು ಸ್ವಿಗ್ಗಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಸೇವೆ ಕಾರ್ಯರೂಪಕ್ಕೆ ಬರುವ ದಿನದ ಬಗ್ಗಿ ನಿರ್ದಿಷ್ಟ ಮಾಹಿತಿಯಿಲ್ಲ.

ಈ ಮಾಹಿತಿ ಹೊರಬಿದ್ದ ಬೆನ್ನಲ್ಲೇ ಐಆರ್​ಸಿಟಿಸಿ ಷೇರುಗಳಿಗೆ ಉತ್ತಮ ಬೇಡಿಕೆ ಕಂಡುಬಂದಿದ್ದು, ಒಂದೇ ದಿನ ಶೇ. 2.92ರಷ್ಟು ಏರಿಕೆ ಕಂಡಿದೆ.

Advertisement

Advertisement
Tags :
Advertisement