For the best experience, open
https://m.newskannada.com
on your mobile browser.
Advertisement

8 ವರ್ಷದ ಬಳಿಕ ಪತ್ನಿ ಮುಖ ಕಾಣುವ ಫೋಟೋ ಹಂಚಿಕೊಂಡ ಪಠಾಣ್

ಭಾರತದ ಮಾಜಿ ವೇಗಿ ಇರ್ಫಾನ್‌ ಪಠಾಣ್‌ ಕ್ರಿಕೆಟ್‌ ನಿಂದ ದೂರವಾದರೂ, ಕ್ರಿಕೆಟ್‌ ಅವರಿಂದ ದೂರವಾಗಿಲ್ಲ. ಕಾಮೆಂಟ್ರಿ ಮಾಡುತ್ತಾ  ಕ್ರಿಕೆಟ್‌ ಆತ್ಮೀಯತೆಯನ್ನು ಬಿಟ್ಟುಕೊಟ್ಟಿಲ್ಲ.
01:31 PM Feb 04, 2024 IST | Ashitha S
8 ವರ್ಷದ ಬಳಿಕ ಪತ್ನಿ ಮುಖ ಕಾಣುವ ಫೋಟೋ ಹಂಚಿಕೊಂಡ ಪಠಾಣ್

ಮುಂಬೈ: ಭಾರತದ ಮಾಜಿ ವೇಗಿ ಇರ್ಫಾನ್‌ ಪಠಾಣ್‌ ಕ್ರಿಕೆಟ್‌ ನಿಂದ ದೂರವಾದರೂ, ಕ್ರಿಕೆಟ್‌ ಅವರಿಂದ ದೂರವಾಗಿಲ್ಲ. ಕಾಮೆಂಟ್ರಿ ಮಾಡುತ್ತಾ  ಕ್ರಿಕೆಟ್‌ ಆತ್ಮೀಯತೆಯನ್ನು ಬಿಟ್ಟುಕೊಟ್ಟಿಲ್ಲ.

Advertisement

ಇನ್ನು ಅವರ ವೈಯಲ್ತಿಕ ವಿಚಾರಕ್ಕರ ಬರುವುದಾದರೇ  ಇರ್ಫಾನ್‌ ಪಠಾಣ್‌ ತಮ್ಮ 8ನೇ ವಿವಾಹ ವಾರ್ಷಿಕೋತ್ಸವ ದಿನವನ್ನು ತನ್ನ ಪತ್ನಿ ಸೈಫ್‌ ಬೇಗ್‌ ಅವರೊಂದಿಗೆ ಸರಳಾಗಿ ಆಚರಿಸಿಕೊಂಡಿದ್ದಾರೆ. ವಿಶೇಷವೆಂದರೆ ಇದೇ ಸಂಭ್ರಮದಲ್ಲಿ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಪತ್ನಿಯ ಮುಖವನ್ನು ಅವರು ಬಹಿರಂಗಪಡಿಸಿದ್ದಾರೆ.

"ಈಕೆ ನನ್ನ ಮೂಡ್ ಬೂಸ್ಟರ್, ಹಾಸ್ಯನಟಿ, ತೊಂದರೆ ಕೊಡುವವಳು, ಒಡನಾಡಿ, ನನ್ನ ಮಕ್ಕಳ ತಾಯಿ ಸ್ನೇಹಿತೆ, ನನ್ನ ಪ್ರೀತಿಯ ಹೆಂಡತಿ 8ನೇ ವಿವಾಹ ವಾರ್ಷಿಕದ ಶುಭಾಶಯ" ಎಂದು ಪಠಾಣ್‌ ಬರೆದುಕೊಂಡಿದ್ದಾರೆ. ಈ ಹಿಂದೆ ಪಠಾಣ್‌ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳುತ್ತಿದ್ದರು. ಆದರೆ ಮುಖವನ್ನು ಬಹಿರಂಗಪಡಿಸದ್ದಕ್ಕೆ ಹಲವರು ಟೀಕಿಸಿದ್ದರು. 2014 ರಲ್ಲಿ ಭೇಟಿಯಾದ ಸೈಫ್‌ ಹಾಗೂ ಪಠಾಣ್‌, 2016 ರಲ್ಲಿ ವಿವಾಹವಾದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

Advertisement

Advertisement
Tags :
Advertisement