For the best experience, open
https://m.newskannada.com
on your mobile browser.
Advertisement

ಮಾಸ್ಕೋ ಮೇಲಿನ ನರಮೇಧ ದಾಳಿ ಹೊಣೆ ಹೊತ್ತ ಭಯೋತ್ಪಾಕ ಸಂಘಟನೆ

ರಷ್ಯಾದ ಮಾಸ್ಕೋದ ಕ್ರೋಕಸ್ ಸಿಟಿ ಹಾಲ್​ನಲ್ಲಿ ಭಯೋತ್ಪಾದಕರು ಗನ್​ನಿಂದ ಮನಸೋ ಇಚ್ಛೆ ಫೈರಿಂಗ್ ಮಾಡಿದ್ದರಿಂದ 60 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, 145ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಭೀಕರ ದಾಳಿಯ ಹೊಣೆಯನ್ನು ನಾವೇ ಮಾಡಿದ್ದೇವೆ ಎಂದು ISIS ಭಯೋತ್ಪಾಕ ಸಂಘಟನೆ ಹೇಳಿದೆ.
08:22 AM Mar 23, 2024 IST | Ashitha S
ಮಾಸ್ಕೋ ಮೇಲಿನ ನರಮೇಧ ದಾಳಿ ಹೊಣೆ ಹೊತ್ತ ಭಯೋತ್ಪಾಕ ಸಂಘಟನೆ

ರಷ್ಯಾದ ಮಾಸ್ಕೋದ ಕ್ರೋಕಸ್ ಸಿಟಿ ಹಾಲ್​ನಲ್ಲಿ ಭಯೋತ್ಪಾದಕರು ಗನ್​ನಿಂದ ಮನಸೋ ಇಚ್ಛೆ ಫೈರಿಂಗ್ ಮಾಡಿದ್ದರಿಂದ 60 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, 145ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಭೀಕರ ದಾಳಿಯ ಹೊಣೆಯನ್ನು ನಾವೇ ಮಾಡಿದ್ದೇವೆ ಎಂದು ISIS ಭಯೋತ್ಪಾಕ ಸಂಘಟನೆ ಹೇಳಿದೆ.

Advertisement

ಕ್ರೋಕಸ್ ಸಿಟಿ ಹಾಲ್​ನಲ್ಲಿ ಪ್ರಸಿದ್ಧ ರಾಕ್ ಬ್ಯಾಂಡ್ ಪಿಕ್ನಿಕ್ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಇದನ್ನೇ ಟಾರ್ಗೆಟ್ ಮಾಡಿದ್ದ ಉಗ್ರರು ಏಕಕಾಲದಲ್ಲಿ ಸಂಗೀತ ನಡೆಯುವ ಹಾಲ್​ಗೆ ನುಗ್ಗಿ ಏಕಾಏಕಿ ಫೈರಿಂಗ್ ಮಾಡಿದ್ದಾರೆ. ಪರಿಣಾಮ 60 ಜನ ಸಾವನ್ನಪ್ಪಿದ್ದು 145ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಭಾಂಗಣಕ್ಕೆ ಭಯೋತ್ಪಾದಕರು ನುಗ್ಗಿ ಸ್ಫೋಟಕಗಳನ್ನು ಎಸೆದು ಬ್ಲಾಸ್ಟ್ ಮಾಡಿದ್ದಾರೆ. ಗನ್​​ಗಳಿಂದ ನಿರಂತರ ಫೈರಿಂಗ್ ಮಾಡಿದ್ದಾರೆ. ಕ್ಷಣಾರ್ಧದಲ್ಲೇ ಬೆಂಕಿ ಮಾಲ್​ಗೆ ವ್ಯಾಪಿಸಿಕೊಂಡು ಧಗಧಗಿಸಿದೆ. ಈ ಬೆಂಕಿಯಿಂದ ಕೆಲ ಜನ ಸಾವನ್ನಪ್ಪಿರಬಹುದು ಎಂದು ಹೇಳಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿರುವ ಭದ್ರತಾ ಪಡೆ, ಪೊಲೀಸರು ಹಾಗೂ ಆರೋಗ್ಯ ಇಲಾಖೆಯವರು ರಕ್ಷಣಾ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.

Advertisement

Advertisement
Tags :
Advertisement