ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇರಾನ್'ನಲ್ಲಿನ 'ಅವಳಿ ಬಾಂಬ್ ಸ್ಫೋಟ'ದ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್

ಇರಾನ್‌ನಲ್ಲಿ ಅವಳಿ ಬಾಂಬ್‌ ಸ್ಫೋಟಗೊಂಡು 103 ಮಂದಿ ಸಾವನ್ನಪ್ಪಿ, 141 ಮಂದಿ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.
10:43 PM Jan 04, 2024 IST | Ashitha S

ಟೆಹ್ರಾನ್‌: ಇರಾನ್‌ನಲ್ಲಿ ಅವಳಿ ಬಾಂಬ್‌ ಸ್ಫೋಟಗೊಂಡು 103 ಮಂದಿ ಸಾವನ್ನಪ್ಪಿ, 141 ಮಂದಿ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.

Advertisement

ಇರಾನ್‌ನ ದಕ್ಷಿಣ ನಗರಿ ಕೆರ್ಮಾನ್‌ನಲ್ಲಿ ಕಮಾಂಡರ್‌ ಕಾಸ್ಸೇಮ್‌ ಸೋಲೈಮನಿ ಅವರ ಸ್ಮರಣೆಯ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ದುರ್ಘಟನೆ ನಡೆದಿದ್ದು, ಭಾರೀ ಆತಂಕವನ್ನೂ ಸೃಷ್ಟಿ ಮಾಡಿದೆ.

ಇನ್ನು ಸುಮಾರು 103 ಜನರ ಸಾವಿಗೆ ಕಾರಣವಾದ ಮತ್ತು ಅನೇಕರು ಗಾಯಗೊಂಡ ಎರಡು ಸ್ಫೋಟಗಳ ಜವಾಬ್ದಾರಿಯನ್ನ ಇಸ್ಲಾಮಿಕ್ ಸ್ಟೇಟ್ ಗುರುವಾರ ವಹಿಸಿಕೊಂಡಿದೆ. ಗುಂಪು ತನ್ನ ಸಂಯೋಜಿತ ಟೆಲಿಗ್ರಾಮ್ ಚಾನೆಲ್ಗಳಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ.

Advertisement

2020ರಲ್ಲಿ ಅಮೆರಿಕಾವು ಬಾಗ್ದಾದ್‌ದ ವಿಮಾನ ನಿಲ್ದಾಣದ ಮೇಲೆ ಡ್ರೋಣ್‌ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಕಮಾಂಡರ್‌ ಕಾಸ್ಸೇಮ್‌ ಸೋಲೈಮನಿ ಹತರಾಗಿದ್ದರು. ಇವರ ಸ್ಮರಣಾರ್ಥ ಕಾರ್ಯಕ್ರಮವನ್ನು ಪ್ರತಿ ವರ್ಷ ಇರಾನ್‌ನಲ್ಲಿ ಆಯೋಜಿಸಲಾಗುತ್ತಿದೆ. ಕೆರ್ಮಾನ್‌ನಲ್ಲಿರುವ ಕಾಸ್ಸೇಮ್‌ ಸೋಲೈಮನಿ ಅವರ ಸ್ಮಾರಕದ ಬಳಿಯೇ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ.

ಈ ವರ್ಷದ ಕಾರ್ಯಕ್ರಮವನ್ನು ಬುಧವಾರ ಆಯೋಜನೆ ಮಾಡಲಾಗಿದ್ದು, ಇದೇ ಸಂದರ್ಭ ಅವಳಿ ಬಾಂಬ್‌ ಸ್ಫೋಟ ನಡೆದಿದೆ. ಘಟನೆಯ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದರು. ಈ ವೇಳೆ ಮೊದಲು ಅನಿಲ ತುಂಬಿದ ಡಬ್ಬಿಯನ್ನು ಎಸೆಯಲಾಯಿತು. ಇದು ಸಿಡಿಯುತಲೇ ಇನ್ನಷ್ಟು ಡಬ್ಬಗಳನ್ನು ನಿರಂತರವಾಗಿ ಎಸೆಯಲಾಯಿತು. ಆಗ ಭಯಾನಕ ಸ್ಪೋಟಗಳು ಸಂಭವಿಸಿದವು ಎಂದು ಇರಾನ್‌ನ ಮಾಧ್ಯಮಗಳು ವರದಿ ಮಾಡಿವೆ.

 

Advertisement
Tags :
crimedeathGOVERNMENTindiaLatestNewsNewsKannadaಅವಳಿ ಬಾಂಬ್ಇರಾನ್ಇಸ್ಲಾಮಿಕ್ ಸ್ಟೇಟ್‌ನವದೆಹಲಿ
Advertisement
Next Article