For the best experience, open
https://m.newskannada.com
on your mobile browser.
Advertisement

ಹಮಾಸ್ ಒತ್ತೆಯಾಳುಗಳಾಗಿದ್ದ ಐವರ ಶವ ಪತ್ತೆ ಮಾಡಿ ಇಸ್ರೇಲ್​​ ಸೇನೆ

ಹಮಾಸ್​​​ – ಇಸ್ರೇಲ್​​​​​ ನಡುವಿನ ಸಂಘರ್ಷಕ್ಕೆ ಕೊನೆ ಇಲ್ಲದಂತಾಗಿದೆ. ಕದನ ವಿರಾಮದ ನಂತರವು ಸಣ್ಣ ಪುಟ್ಟ ಘರ್ಷಣೆಗಳು ನಡೆಯುತ್ತಾಳೆ ಇದೆ. ಇದೀಗ ಇಸ್ರೇಲ್ ಹಮಾಸ್ ಸೆರೆಯಲ್ಲಿದ್ದಾಗ ಐವರು ಒತ್ತೆಯಾಳುಗಳ ಶವ ಪತ್ತೆ ಮಾಡಿದೆ ಎಂದು ಇಸ್ರೇಲ್​​ ಮಿಲಿಟರಿ ಹೇಳಿದೆ. ಇಸ್ರೇಲಿ ರಕ್ಷಣಾ ಪಡೆ (ಐಡಿಎಫ್) ಎರಡು ವಾರಗಳ ಹಿಂದೆ ಹಮಾಸ್​​​​ ಒತ್ತೆಯಾಳುಗಳಾಗಿದ್ದ ಇಬ್ಬರ ಶವವನ್ನು ಪತ್ತೆ ಮಾಡಲಾಗಿತ್ತು. ಇದೀಗ ಮತ್ತೆ ಮೂವರ ಶವ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
04:13 PM Dec 25, 2023 IST | Ashitha S
ಹಮಾಸ್ ಒತ್ತೆಯಾಳುಗಳಾಗಿದ್ದ ಐವರ ಶವ ಪತ್ತೆ ಮಾಡಿ ಇಸ್ರೇಲ್​​ ಸೇನೆ

ಇಸ್ರೇಲ್: ಹಮಾಸ್​​​ – ಇಸ್ರೇಲ್​​​​​ ನಡುವಿನ ಸಂಘರ್ಷಕ್ಕೆ ಕೊನೆ ಇಲ್ಲದಂತಾಗಿದೆ. ಕದನ ವಿರಾಮದ ನಂತರವು ಸಣ್ಣ ಪುಟ್ಟ ಘರ್ಷಣೆಗಳು ನಡೆಯುತ್ತಾಳೆ ಇದೆ. ಇದೀಗ ಇಸ್ರೇಲ್ ಹಮಾಸ್ ಸೆರೆಯಲ್ಲಿದ್ದಾಗ ಐವರು ಒತ್ತೆಯಾಳುಗಳ ಶವ ಪತ್ತೆ ಮಾಡಿದೆ ಎಂದು ಇಸ್ರೇಲ್​​ ಮಿಲಿಟರಿ ಹೇಳಿದೆ. ಇಸ್ರೇಲಿ ರಕ್ಷಣಾ ಪಡೆ (ಐಡಿಎಫ್) ಎರಡು ವಾರಗಳ ಹಿಂದೆ ಹಮಾಸ್​​​​ ಒತ್ತೆಯಾಳುಗಳಾಗಿದ್ದ ಇಬ್ಬರ ಶವವನ್ನು ಪತ್ತೆ ಮಾಡಲಾಗಿತ್ತು. ಇದೀಗ ಮತ್ತೆ ಮೂವರ ಶವ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

ಇನ್ನು ಶವ ಪತ್ತೆಗೆ ಸಂಬಂಧಿಸಿದಂತೆ ಇಸ್ರೇಲ್​​​ ಮಿಲಿಟರಿ ತನ್ನ ಅಧಿಕೃತ ಎಕ್ಸ್​​ ಖಾತೆಯಲ್ಲಿ ಒಂದು ಸುರಂಗದ ಒಂದು ವಿಡಿಯೋವನ್ನು ಹಂಚಿಕೊಂಡಿದೆ. ಅಕ್ಟೋಬರ್​​​ 7ರಂದು ಇಸ್ರೇಲ್​​ ಮೇಲೆ ಹಮಾಸ್​​ ದಾಳಿ ಮಾಡಿದ ಸಂದರ್ಭದಲ್ಲಿ ಅಪಹರಣವಾಗಿದ್ದ 5 ಜನರು ಇದೀಗ ಶವವಾಗಿ ಪತ್ತೆಯಾಗಿದ್ದಾರೆ.

ಈ ಶವವನ್ನು ಪತ್ತೆ ಮಾಡಿದ್ದು, ದಕ್ಷಿಣ ಇಸ್ರೇಲ್‌ನಲ್ಲಿ ನಡೆದ ಸಂಗೀತ ಉತ್ಸವದಲ್ಲಿ ಭಾಗವಹಿಸಿದ್ದ 36 ವರ್ಷದ ಇಸ್ರೇಲಿ ಸೈನಿಕ ಝಿವ್ ದಾಡೋ ಮತ್ತು 27 ವರ್ಷದ ಈಡನ್ ಜಕಾರಿಯಾ ಅವರ ದೇಹ ಎಂದು ಹೇಳಲಾಗಿದೆ. ಉಳಿದ ಮೂರು ದೇಹವನ್ನು ಸಾರ್ಜೆಂಟ್ ರಾನ್ ಶೆರ್ಮನ್, ಸಿಪಿಎಲ್ ನಿಕ್ ಬೀಜರ್ ಮತ್ತು ಎಲಿಯಾ ಟೊಲೆಡಾನೊ ಎಂದು ಗುರುತಿಸಲಾಗಿದೆ,. ಇವರ ಶವ ಭಾನುವಾರ ಪತ್ತೆಯಾಗಿದೆ ಏಂದು ತಿಳಿದು ಬಂದಿದೆ.

Advertisement

Advertisement
Tags :
Advertisement