For the best experience, open
https://m.newskannada.com
on your mobile browser.
Advertisement

ಗಾಜಾಪಟ್ಟಿ ಮೇಲೆ ಅಣ್ವಸ್ತ್ರ ದಾಳಿ ನಡೆಸುವುದಾಗಿ ಹೇಳಿದ್ದ ಇಸ್ರೇಲ್‌ ಸಚಿವ ವಜಾ

ಗಾಜಾಪಟ್ಟಿಯಲ್ಲಿ ಸಾವಿರಾರು ಮಂದಿಯ ಮಾರಣಹೋಮ ನಡೆಯುತ್ತಿದೆ. ಈ ನಡುವೆ ಗಾಜಾದ ಮೇಲೆ ಅಣ್ವಸ್ತ್ರ ದಾಳಿ ಹೇಳಿಕೆ ಕೊಟ್ಟಿದ್ದ ಸಚಿವನನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮಾನತುಗೊಳಿಸಿದ್ದಾರೆ.
06:30 PM Nov 05, 2023 IST | Ashika S
ಗಾಜಾಪಟ್ಟಿ ಮೇಲೆ ಅಣ್ವಸ್ತ್ರ ದಾಳಿ ನಡೆಸುವುದಾಗಿ ಹೇಳಿದ್ದ ಇಸ್ರೇಲ್‌ ಸಚಿವ ವಜಾ

ಜರುಸಲೇಂ: ಗಾಜಾಪಟ್ಟಿಯಲ್ಲಿ ಸಾವಿರಾರು ಮಂದಿಯ ಮಾರಣಹೋಮ ನಡೆಯುತ್ತಿದೆ. ಈ ನಡುವೆ ಗಾಜಾದ ಮೇಲೆ ಅಣ್ವಸ್ತ್ರ ದಾಳಿ ಹೇಳಿಕೆ ಕೊಟ್ಟಿದ್ದ ಸಚಿವನನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮಾನತುಗೊಳಿಸಿದ್ದಾರೆ.

Advertisement

ಸಂದರ್ಶನವೊಂದರಲ್ಲಿ ಗಾಜಾ ಮೇಲೆ ಪರಮಾಣು ಬಾಂಬ್‌ ದಾಳಿ ಮಾಡುವಂತೆ ಸಲಹೆ ನೀಡಿದ್ದ ಇಸ್ರೇಲಿ ಸಚಿವರನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಲಾಗಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಚೇರಿ ತಿಳಿಸಿದೆ.

ಉಗ್ರಗಾಮಿ ದೃಷ್ಟಿಕೋನದಿಂದ ದೂರವಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಇಸ್ರೇಲ್ ಮತ್ತು ಇಸ್ರೇಲಿ ರಕ್ಷಣಾ ಪಡೆಗಳು (ಐಡಿಎಫ್) ಅಮಾಯಕ ಜನರಿಗೆ ಹಾನಿಯಾಗದಂತೆ ಅಂತಾರಾಷ್ಟ್ರೀಯ ಕಾನೂನಿನ ಅತ್ಯುನ್ನತ ಮಾನದಂಡಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.

Advertisement

Advertisement
Tags :
Advertisement