ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕೇರಳದ ಅಜ್ಜನೊಂದಿಗೆ ಇಸ್ರೇಲ್‌ ಮಹಿಳೆ ಲಿವಿಂಗ್‌ ಟುಗೆದರ್‌ ದುರಂತ ಅಂತ್ಯ

ತಿರುವನಂತಪುರಂ: ಇತ್ತೀಚೆಗೆ ಲಿವಿಂಗ್‌ ಟುಗೆದರ್‌ ಸಂಬಂಧಗಳು ಹೆಚ್ಚುತ್ತಿದ್ದು, ಹಲವು ಅನಾಹುತಗಳಿಗೆ ಕಾರಣವಾಗುತ್ತಿದೆ. ಅದೇ ರೀತಿ ಕೇರಳದ ಮುಘತಲಾದಲ್ಲಿ 75 ವರ್ಷದ ವ್ಯಕ್ತಿಯೊಬ್ಬ ತನ್ನ 36 ವರ್ಷದ ಇಸ್ರೇಲ್ ಮೂಲದ ಲಿವ್ ಇನ್ ಸಂಗಾತಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಗುರುವಾರ ಸಂಜೆ ನಡೆದಿದೆ. ಮಹಿಳೆ ಕತ್ತು ಸೀಳಿ ಬರ್ಬವಾಗಿ ಕೊಲೆ ಮಾಡಿದ್ದಾನೆ.
04:32 PM Dec 03, 2023 IST | Umesha HS

ತಿರುವನಂತಪುರಂ: ಇತ್ತೀಚೆಗೆ ಲಿವಿಂಗ್‌ ಟುಗೆದರ್‌ ಸಂಬಂಧಗಳು ಹೆಚ್ಚುತ್ತಿದ್ದು, ಹಲವು ಅನಾಹುತಗಳಿಗೆ ಕಾರಣವಾಗುತ್ತಿದೆ. ಅದೇ ರೀತಿ ಕೇರಳದ ಮುಘತಲಾದಲ್ಲಿ 75 ವರ್ಷದ ವ್ಯಕ್ತಿಯೊಬ್ಬ ತನ್ನ 36 ವರ್ಷದ ಇಸ್ರೇಲ್ ಮೂಲದ ಲಿವ್ ಇನ್ ಸಂಗಾತಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಗುರುವಾರ ಸಂಜೆ ನಡೆದಿದೆ. ಮಹಿಳೆ ಕತ್ತು ಸೀಳಿ ಬರ್ಬವಾಗಿ ಕೊಲೆ ಮಾಡಿದ್ದಾನೆ.

Advertisement

ಹತ್ಯೆ ಬಳಿಕ ಆತ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಯೋ ಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಆರೋಪಿ ಕೃಷ್ಣಪ್ರಸಾದ್, ತಾನು ಬಹಳ ದುರ್ಬಲನಾಗಿರುವುದರಿಂದ ನೀವು ಇಸ್ರೇಲ್‌ಗೆ ವಾಪಸ್ ಹೋಗು ಎಂದು ಮಹಿಳೆಗೆ ಸೂಚಿಸಿದ್ದ. ಆದರೆ ಆಕೆ ಹಠ ಹಿಡಿದಿದ್ದಳು. ಕೃಷ್ಣಪ್ರಸಾದ್ ಸಾವಿನ ಬಳಿಕ ಯಾರಾದರೂ ತನ್ನ ಮೇಲೆ ದಾಳಿ ನಡೆಸಬಹುದು ಎಂಬ ಭಯ ಇಬ್ಬರಲ್ಲಿಯೂ ಇತ್ತು. ಈ ಕಾರಣದಿಂದ ಇಬ್ಬರೂ ತಮ್ಮ ಜೀವ ಅಂತ್ಯಗೊಳಿಸಲು ನಿರ್ಧರಿಸಿದ್ದರು. ಕೃಷ್ಣಪ್ರಸಾದ್, ಆಕೆಯ ಕತ್ತು ಸೀಳಿ, ಚಾಕುವಿನಿಂದ ಇರಿದು ಸಾಯಿಸಿದ್ದ

ವೆಟ್ಟಿಲಾಥಳಮ್‌ನ ಕೊಡಾಲಿಮುಕ್ಕು ಸಮೀಪದ ಅಪಾರ್ಟ್‌ಮೆಂಟ್ ಒಂದರಲ್ಲಿ ಕೃಷ್ಣ ಪ್ರಸಾದ್ ಜತೆ ಇಸ್ರೇಲ್ ಮೂಲದ ಸತ್ವಾ ಅಲಿಯಾಸ್ ರಾಧಾ ಲಿವ್ ಇನ್ ಟುಗೆದರ್‌ನಲ್ಲಿದ್ದಳು. ಕೃಷ್ಣ ಪ್ರಸಾದ್ ಯೋಗ ಶಿಕ್ಷಕನಾಗಿದ್ದು, ಉತ್ತರಾಖಂಡದಲ್ಲಿ ಕೆಲಸ ಮಾಡುವಾಗ ಇಸ್ರೇಲಿ ಮಹಿಳೆಯ ಪರಿಚಯವಾಗಿತ್ತು. ಅವರಿಬ್ಬರ ಗೆಳೆತನ ಅಫೇರ್‌ಗೆ ಬದಲಾಗಿತ್ತು. ಅವರಿಬ್ಬರೂ ಕೂಡಿ ಬಾಳಲು ನಿರ್ಧರಿಸಿದ್ದರು. ಇಬ್ಬರೂ ಸುಮಾರು 15 ವರ್ಷಗಳ ಹಿಂದೆ ಕೃಷ್ಣಪ್ರಸಾದ್‌ನ ಹುಟ್ಟೂರು ಕೊಲ್ಲಂಗೆ ಹೋಗಿ ನೆಲೆಸಿದ್ದರು. ಇದೀಗ ಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಕೃಷ್ಣ ಪ್ರಸಾದ್‌ಗೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

Advertisement
Tags :
kerrlaMURDERwomenಕೇರಳಮಹಿಳೆಲಿವಿಂಗ್‌ ಟುಗೆದರ್‌
Advertisement
Next Article