For the best experience, open
https://m.newskannada.com
on your mobile browser.
Advertisement

ಇಸ್ರೋ ಅಧ್ಯಕ್ಷ ಎಸ್​ ಸೋಮನಾಥ್​ಗೆ ಕ್ಯಾನ್ಸರ್​ !

ಆದಿತ್ಯ ಎಲ್​-1 ಉಡಾವಣೆ ದಿನವೇ ಇಸ್ರೋ ಅಧ್ಯಕ್ಷ ಎಸ್​ ಸೋಮನಾಥ್​ ಅವರಿಗೆ ಕ್ಯಾನ್ಸರ್​ ಇರುವುದು ಗೊತ್ತಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಭಾರತದ ಸೂರ್ಯ ಮಿಷನ್ ಆದಿತ್ಯ ಎಲ್​1 ಉಡಾವಣೆ ಸಮಯದಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಎಸ್​ ಸೋಮನಾಥ್​ ಕ್ಯಾನ್ಸರ್​ ವಿರುದ್ಧ ಹೋರಾಡುತ್ತಿದ್ದರು.
03:34 PM Mar 04, 2024 IST | Ashitha S
ಇಸ್ರೋ ಅಧ್ಯಕ್ಷ ಎಸ್​ ಸೋಮನಾಥ್​ಗೆ ಕ್ಯಾನ್ಸರ್​

ದೆಹಲಿ: ಆದಿತ್ಯ ಎಲ್​-1 ಉಡಾವಣೆ ದಿನವೇ ಇಸ್ರೋ ಅಧ್ಯಕ್ಷ ಎಸ್​ ಸೋಮನಾಥ್​ ಅವರಿಗೆ ಕ್ಯಾನ್ಸರ್​ ಇರುವುದು ಗೊತ್ತಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಭಾರತದ ಸೂರ್ಯ ಮಿಷನ್ ಆದಿತ್ಯ ಎಲ್​1 ಉಡಾವಣೆ ಸಮಯದಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಎಸ್​ ಸೋಮನಾಥ್​ ಕ್ಯಾನ್ಸರ್​ ವಿರುದ್ಧ ಹೋರಾಡುತ್ತಿದ್ದರು.

Advertisement

ಸೋಮನಾಥ್​ ಸಂದರ್ಶನದಲ್ಲಿ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಸ್ಕ್ಯಾನಿಂಗ್​ನಲ್ಲಿ ಕ್ಯಾನ್ಸರ್​ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಚಂದ್ರಯಾನ 3 ಮಿಷನ್ ಉಡಾವಣೆ ಸಮಯದಲ್ಲಿಯೂ ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳಿದ್ದವು, ಆದರೆ ಅಲ್ಲಿಯವರೆಗೆ ಏನೂ ಸ್ಪಷ್ಟವಾಗಿರಲಿಲ್ಲ, ಆದಿತ್ಯ ಮಿಷನ್ ದಿನದಂದು ಕಾಯಿಲೆ ಇರುವುದು ಪತ್ತೆಯಾಗಿತ್ತು. ಇದರಿಂದ ಅವರು ಮತ್ತವರ ಕುಟುಂಬದವರು ತುಂಬಾ ಬೇಸರಗೊಂಡಿದ್ದರು ಎಂದು ಹೇಳಿದರು.

Advertisement

Advertisement
Tags :
Advertisement