ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಚಳ್ಳಕೆರೆಯಿಂದ ಇಸ್ರೋ ಸ್ವದೇಶಿ ಗಗನ ನೌಕೆ 'ಪುಷ್ಪಕ್' ಉಡಾವಣೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ (ಮಾರ್ಚ್ 22) ಚಿತ್ರದುರ್ಗ ಸಮೀಪದ ಚಳ್ಳಕೆರೆಯಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ (ಎಟಿಆರ್) ತನ್ನ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ (ಆರ್‌ಎಲ್‌ವಿ), ಪುಷ್ಪಕ್ ಅನ್ನು ಉಡಾವಣೆ ಮಾಡಿದೆ.
08:31 AM Mar 22, 2024 IST | Ashitha S

ಚಿತ್ರದುರ್ಗ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು (ಮಾರ್ಚ್ 22) ಚಿತ್ರದುರ್ಗ ಸಮೀಪದ ಚಳ್ಳಕೆರೆಯಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ (ಎಟಿಆರ್) ತನ್ನ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ (ಆರ್‌ಎಲ್‌ವಿ), ಪುಷ್ಪಕ್ ಅನ್ನು ಉಡಾವಣೆ ಮಾಡಿದೆ.

Advertisement

ಆರ್‌ಎಲ್‌ವಿಯನ್ನು ಇಂದು(ಮಾ.22) ಬೆಳಗ್ಗೆ 7 ಗಂಟೆಗೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಚಳ್ಳಕೆರೆ ರನ್ ವೇಯಿಂದ ಬೆಳಗ್ಗೆ 7 ಗಂಟೆ ಸುಮಾರಿಗೆ ರಾಕೆಟ್ ಉಡಾವಣೆಯಾಗಿದೆ. ಇದು ಆರ್‌ಎಲ್‌ವಿಯ ಮೂರನೇ ಲ್ಯಾಂಡಿಂಗ್ ಮಿಷನ್. ಬಾಹ್ಯಾಕಾಶ ಸಂಸ್ಥೆ ಹಿಂದಿನ ಕಾರ್ಯಾಚರಣೆಗಳನ್ನು 2016 ಮತ್ತು ಕಳೆದ ವರ್ಷ ಏಪ್ರಿಲ್‌ನಲ್ಲಿ ಯಶಸ್ವಿಯಾಗಿ ನಡೆಸಿತ್ತು. ರಾಮಾಯಣದಲ್ಲಿ ಹೆಸರಿಸಲಾದ ಪೌರಾಣಿಕ ಬಾಹ್ಯಾಕಾಶ ನೌಕೆ ಪುಷ್ಪಕ ವಿಮಾನದ ಹೆಸರನ್ನು ಇದಕ್ಕೆ ಇಡಾಲಾಗಿದೆ.

ಉಡಾವಣಾ ವಾಹನವನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಸುಮಾರು 4.5 ಕಿಮೀ ಎತ್ತರಕ್ಕೆ ಕೊಂಡೊಯ್ಯಲಾಯಿತು. ಬಳಿಕ ಪೂರ್ವನಿರ್ಧರಿತ ಪಿಲ್‌ಬಾಕ್ಸ್ ನಿಯತಾಂಕಗಳನ್ನು ಸರಿಯಾಗಿಸಿದ ನಂತರ ಉಡಾವಣೆ ಮಾಡಲಾಗಿದೆ.

Advertisement

Advertisement
Tags :
GOVERNMENTindiaKARNATAKALatestNewsNewsKannadaಗಗನ ನೌಕೆನವದೆಹಲಿಪುಷ್ಪಕ್ಬೆಂಗಳೂರು
Advertisement
Next Article