ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇನ್ಮುಂದೆ ಸರ್ಕಾರಿ ಕಚೇರಿಯಲ್ಲಿ 'ಬಸವಣ್ಣ'ನ ಭಾವಚಿತ್ರ ಹಾಕುವುದು ಕಡ್ಡಾಯ

ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಹಾಕುವುದು ಕಡ್ಡಾಯ. ಜೊತೆಗೆ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂಬುದಾಗಿ ಅದರಲ್ಲಿ ಬರೆಸಿ ಹಾಕುವಂತೆ ಸಿಎಂ ಸಿದ್ಧರಾಮಯ್ಯ ಆದೇಶಿಸಿದ್ದಾರೆ.
03:02 PM Feb 12, 2024 IST | Ashitha S

ಬೆಂಗಳೂರು: ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಹಾಕುವುದು ಕಡ್ಡಾಯ. ಜೊತೆಗೆ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂಬುದಾಗಿ ಅದರಲ್ಲಿ ಬರೆಸಿ ಹಾಕುವಂತೆ ಸಿಎಂ ಸಿದ್ಧರಾಮಯ್ಯ ಆದೇಶಿಸಿದ್ದಾರೆ.

Advertisement

ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿರುವಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಅದರಲ್ಲಿ ಜಗಜ್ಯೋತಿ ಬಸವೇಶ್ವರ ಎಂದು ಪ್ರಖ್ಯಾತರಾಗಿರುವ ಬಸವಣ್ಣನವರು 12ನೇ ಶತಮಾನದ ವಚನ ಚಳುವಳಿಯ ಹಾಗೂ ಸಾಮಾಜಿಕ ನ್ಯಾಯದ ನಾಯಕತ್ವ ವಹಿಸಿದ್ದರು.

ಮನುಧರ್ಮಶಾಸ್ತ್ರವು ಶ್ರೇಣೀಕೃತ ಸಮಾಜವನ್ನು ನಿರ್ಮಾಣ ಮಾಡಿ ಅಸಮಾನತೆಯನ್ನು ಸೃಷ್ಟಿ ಮಾಡಿತ್ತು. ಹುಟ್ಟಿನ ಆಧಾರದ ಮೇಲೆ ಮೇಲು-ಕೀಳು ಎಂದು ಸಮುದಾಯಗಳನ್ನು ಶಾಶ್ವತವಾಗಿ ವಿಭಜಿಸಿ ಕತ್ತಲ ಕೂಪಕ್ಕೆ ತಳ್ಳಲಾಗಿತ್ತು. ದುಡಿಯುವ ವರ್ಗಗಳು ಕ್ರಿಯಾಶೀಲ ಸಮಾಜಗಳ ಸೃಜನಶೀಲ ಶಕ್ತಿಗಳಾಗಿರುತ್ತವೆ. ಆದರೆ ಜಾತಿಯ ಹೆಸರಿನಲ್ಲಿ ಈ ಸಮುದಾಯಗಳ ಚೈತನ್ಯವನ್ನ ಕಿತ್ತುಕೊಳ್ಳಲಾಗಿತ್ತು ಎಂದಿದ್ದಾರೆ.

Advertisement

ಇಂತಹ ಉಸಿರುಗಟ್ಟುವ ನಿಯಮಗಳ ವಿರುದ್ಧ ವಚನ ಚಳುವಳಿಯು ಅತ್ಯಂತ ಪ್ರಬುದ್ಧವಾದ ಹೋರಾಟವನ್ನು ರೂಪಿಸಿತ್ತು, 12ನೇ ಶತಮಾನದಲ್ಲಿ ದೇಶದ ಅನೇಕ ಭಾಗಗಳಿಂದ ಬಂದ ಚಿಂತಕರು, ಹೋರಾಟಗಾರರು ಒಟ್ಟುಗೂಡಿ ಸಮಾನತೆಯ ಚಳುವಳಿಯನ್ನು ಮುನ್ನಡೆಸಿದ್ದರ ಕುರಿತು ಇತಿಹಾಸಕಾರರು ಪ್ರಸ್ತಾಪಿಸಿದ್ದಾರೆ. ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ನಮ್ಮ ವ್ಯವಸ್ಥೆಯಂಥದೇ ಕಲ್ಪನೆಯನ್ನು ಬಸವಣ್ಣನವರಾದಿಯಾಗಿ ವಚನಕಾರರು ಮಂಡಿಸಿದ್ದಾರೆ ಎಂದು ತಿಳಿಸಿದ್ದಾರೆ.

Advertisement
Tags :
BasavannaGOVERNMENTindiaKARNATAKANewsKannadaಆದೇಶಸಿದ್ದರಾಮಯ್ಯ
Advertisement
Next Article