ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

4 ಗಂಟೆಗಳ ಕಾಲ ಅವರಿಬ್ಬರು ವಿಮಾನದೊಳಗೆ ಹೀಗೆ ಇದ್ರು: ಫೋಟೊ ನೋಡಿ

ವಿಮಾನದೊಳಗೆ ಆರಾಮದಾಯಕ, ಸುಖಕರ ಪ್ರಯಾಣ ಮಾಡಲೆಂದು ಬಯಸುವವರ ಸಂಖ್ಯೆಯೇ ಹೆಚ್ಚು. ಎಲ್ಲದಕ್ಕಿಂತ ಮುಖ್ಯವಾಗಿ ತಾವು ಪ್ರಯಾಣಿಸುವಾಗ ತಮ್ಮ ಸಹ ಪ್ರಯಾಣಿಕರು ತೊಂದರೆ ಮಾಡದಿದ್ದರೆ ಸಾಕಪ್ಪ ಎಂದು ಯೋಚಿಸುವವರಿಗೆ ಈ ಘಟನೆ ತೀರ ವಿಚಿತ್ರ ಎನಿಸಬಹುದು.
12:09 PM Apr 12, 2024 IST | Ashitha S

ದೆಹಲಿ: ವಿಮಾನದೊಳಗೆ ಆರಾಮದಾಯಕ, ಸುಖಕರ ಪ್ರಯಾಣ ಮಾಡಲೆಂದು ಬಯಸುವವರ ಸಂಖ್ಯೆಯೇ ಹೆಚ್ಚು. ಎಲ್ಲದಕ್ಕಿಂತ ಮುಖ್ಯವಾಗಿ ತಾವು ಪ್ರಯಾಣಿಸುವಾಗ ತಮ್ಮ ಸಹ ಪ್ರಯಾಣಿಕರು ತೊಂದರೆ ಮಾಡದಿದ್ದರೆ ಸಾಕಪ್ಪ ಎಂದು ಯೋಚಿಸುವವರಿಗೆ ಈ ಘಟನೆ ತೀರ ವಿಚಿತ್ರ ಎನಿಸಬಹುದು.

Advertisement

ಹೌದು. . ಇಲ್ಲಿನ ವಿಮಾನದಲ್ಲಿ ಪ್ರೇಮಿಗಳಿಬ್ಬರು ತಮಗೆ ನೀಡಿದಂತ ಆಸನದಲ್ಲಿ ಎಲ್ಲರಂತೆ ಕುಳಿತುಕೊಳ್ಳದೆ, ಮಲಗಿಕೊಂಡು ಲವ್ವಿಡವ್ವಿ ನಡೆಸಿರೋದು ಸಹ ಪ್ರಯಾಣಿಕನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಮಾನದಲ್ಲಿ ಪ್ರಯಾಣಿಸುವಾಗ ತಮ್ಮ ಖಾಸಗಿ ಕ್ಷಣವನ್ನು ಸಾರ್ವಜನಿಕ ಸ್ಥಳದಲ್ಲಿ ಆನಂದಿಸುತ್ತಿರುವ ದಂಪತಿಗಳ ದೃಶ್ಯವನ್ನು ಸಹ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್​ನಲ್ಲಿ ಸರೆಹಿಡಿದು ಅದನ್ನು ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಕ್ಷಣಮಾತ್ರದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಜೋಡಿಗಳಿಗೆ ಹಿಗ್ಗಾಮುಗ್ಗಾ ಕ್ಲಾಸ್​ ತೆಗೆದುಕೊಂಡಿದ್ದಾರೆ.

Advertisement

ನಾಲ್ಕು ಗಂಟೆಗಳ ಕಾಲ ಇವರಿಬ್ಬರ ಲವ್ವಿಡವ್ವಿ ಹೀಗೆ ನಡೆಯಿತು. ಅದನ್ನು ನೋಡಿ ನಮಗೆ ತೀವ್ರ ಮುಜುಗರ ಉಂಟಾಯಿತು ಎಂದು ಹೇಳಿದ್ದಾರೆ. ದೃಶ್ಯದಲ್ಲಿ ಜೋಡಿಯ ಸೀಟಿನ ಹಿಂಬದಿ ಸೀಟಿನಲ್ಲಿ ಕುಳಿತ ಮಹಿಳೆಯೊಬ್ಬರು ಕಿಟಕಿಗೆ ತನ್ನ ತಲೆ ಒರಗಿಸಿ, ಆಯಾಗಿ ನಿದ್ರಿಸುತ್ತಿರುವುದು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. ಸದ್ಯ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸಕತ್‌ ಸದ್ದು ಮಾಡುತ್ತಿದೆ.

Advertisement
Tags :
CouplesFilghtindiaLatestNewsloveNewsKarnatakaPhoto viralSocialMedia
Advertisement
Next Article