ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಧೋನಿ ಅಭಿಮಾನಿಗಳಿಗೆ ಚಮಕ್ ಕೊಟ್ಟ ರವಿಂದ್ರ ಜಡೇಜಾ; ವಿಡಿಯೋ ವೈರಲ್

ಕಳೆದ ದಿನ ಚೆನ್ನೈನಲ್ಲಿ ಕೋಲ್ಕತ್ತ ನೈಟ್​ ರೈಡರ್ಸ್​ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ಮುಖಾಮುಖಿ ಆಗಿದ್ದವು. ಈ ವೇಳೆ ಸಿಎಸ್​ಕೆ ತಂಡದ ಎಂಎಸ್​ ಧೋನಿ ಅಭಿಮಾನಿಗಳಿಗೆ ರವೀಂದ್ರ ಜಡೇಜಾ ಚಮಕ್ ಕೊಟ್ಟ ಪ್ರಸಂಗ ನಡೆಯಿತು.
11:30 AM Apr 09, 2024 IST | Ashitha S

ಚೆನ್ನೈ: ಕಳೆದ ದಿನ ಚೆನ್ನೈನಲ್ಲಿ ಕೋಲ್ಕತ್ತ ನೈಟ್​ ರೈಡರ್ಸ್​ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ಮುಖಾಮುಖಿ ಆಗಿದ್ದವು. ಈ ವೇಳೆ ಸಿಎಸ್​ಕೆ ತಂಡದ ಎಂಎಸ್​ ಧೋನಿ ಅಭಿಮಾನಿಗಳಿಗೆ ರವೀಂದ್ರ ಜಡೇಜಾ ಚಮಕ್ ಕೊಟ್ಟ ಪ್ರಸಂಗ ನಡೆಯಿತು.

Advertisement

ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡ್ತಿದ್ದ ಸಿಎಸ್​ಕೆ ತಂಡವು 16.5ನೇ ಓವರ್​ನಲ್ಲಿ ಶಿವಂ ದುಬೆ ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಮೂರು ವಿಕೆಟ್ ಕಳೆದುಕೊಂಡು 135 ರನ್​ಗಳಿಸಿತ್ತು. ಸಿಎಸ್​ಕೆಗೆ ಗೆಲ್ಲಲು ಕೇವಲ ಮೂರು ರನ್​​ಗಳ ಅಗತ್ಯ ಇತ್ತು. ದುಬೆ ವಿಕೆಟ್​ ಬಿದ್ದ ಬಳಿಕ ಕ್ರೀಸ್​​ಗೆ ಯಾರು ಬರುತ್ತಾರೆ ಎಂಬ ನಿರೀಕ್ಷೆ ಹೆಚ್ಚಾಗಿತ್ತು.

ಈ ವೇಳೆ ರವಿಂದ್ರ ಜಡೇಜಾ, ಡ್ರೆಸ್ಸಿಂಗ್​ ರೂಮ್​ನಿಂದ ಬ್ಯಾಟಿಂಗ್​ ಬಂದಂತೆ ಮೈದಾನದತ್ತ ಬರುತ್ತಾರೆ. ಆಗ ಧೋನಿ ಅಭಿಮಾನಿಗಳು, ತಲಾ, ಧೋನಿ ಎಂದು ಜೋರಾಗಿ ಕೂಗುತ್ತಾರೆ. ನಂತರ ಜಡೇಜಾ, ನಗಾಡುತ್ತ ವಾಪಸ್​​ ಡ್ರೆಸ್ಸಿಂಗ್ ರೂಮ್​​ಗೆ ಹೋಗುತ್ತಾರೆ. ಆಗ ಧೋನಿ ಮೈದಾನಕ್ಕೆ ಬರುತ್ತಾರೆ. ಅಭಿಮಾನಿಗಳ ಝೈಂಕಾರ ಜೋರಾಗಿತ್ತು. ಜಡೇಜಾ, ಚಪಾಕ್​​ನಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಚಮಕ್ ನೀಡಿರೋದು ಇದೀಗ ವೈರಲ್​ ಆಗಿದೆ. ಇನ್ನು ಧೋನಿ ವಿನ್ನಿಂಗ್ ರನ್ ಬಾರಿಸಿದರು. ಇದನ್ನು ನೋಡಿ ಫ್ಯಾನ್ಸ್  ಸಕತ್‌ ಖುಷಿಪಟ್ಟಿದ್ದಾರೆ.

Advertisement

Advertisement
Tags :
DhoniIPLLatestNewsNewsKarnatakaRavindrajadeja
Advertisement
Next Article