ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆ: ಅಮೆರಿಕದಲ್ಲಿ ಬೃಹತ್ ಕಾರು ರ್‍ಯಾಲಿಯಲ್ಲಿ ʼಜೈ ಶ್ರೀರಾಮ್' ಘೋಷಣೆ

ಅಯೋಧ್ಯೆಯಲ್ಲಿ ನಡೆಯಲಿರುವ 00 ಕಾರ್ಯಕ್ರಮ ಜ.22ರಂದು ನಡೆಯಲಿದೆ. ಈ ಹಿನ್ನಲೆಯಲ್ಲಿ ಅಮೆರಿಕದ ಹಿಂದೂ ಸಮುದಾಯದ ಸದಸ್ಯರು ಭಾನುವಾರ(ಜ.7) ಹೂಸ್ಟನ್‌ನಾದ್ಯಂತ ಬೃಹತ್ ಕಾರು ರ್‍ಯಾಲಿ ನಡೆಸಿದ್ದಾರೆ.
12:36 PM Jan 09, 2024 IST | Ramya Bolantoor

ಹೂಸ್ಟನ್: ಅಯೋಧ್ಯೆಯಲ್ಲಿ ನಡೆಯಲಿರುವ 00 ಕಾರ್ಯಕ್ರಮ ಜ.22ರಂದು ನಡೆಯಲಿದೆ. ಈ ಹಿನ್ನಲೆಯಲ್ಲಿ ಅಮೆರಿಕದ ಹಿಂದೂ ಸಮುದಾಯದ ಸದಸ್ಯರು ಭಾನುವಾರ(ಜ.7) ಹೂಸ್ಟನ್‌ನಾದ್ಯಂತ ಬೃಹತ್ ಕಾರು ರ್‍ಯಾಲಿ ನಡೆಸಿದ್ದಾರೆ. ರ್‍ಯಾಲಿಯಲ್ಲಿ ದಾರಿಯುದ್ದಕ್ಕೂ ರಾಮನ ಕುರಿತ ಭಜನೆ ಹಾಗೂ 'ಜೈ ಶ್ರೀರಾಮ್' ಘೋಷಣೆಗಳು ಮೊಳಗಿದವು.

Advertisement

ಈ ಬೃಹತ್‌ ರ್‍ಯಾಲಿಯನ್ನು ಸ್ವಯಂಸೇವಕರಾದ ಅಚಲೇಶ್ ಅಮರ್, ಉಮಂಗ್ ಮೆಹ್ತಾ ಮತ್ತು ಅರುಣ್ ಮುಂದ್ರಾ ಎಂಬುವವರು ಆಯೋಜಿಸಿದ್ದರು. ಸುಮಾರು ಐದು ಕಿ.ಮೀ ರ್‍ಯಾಲಿ ನಡೆದಿದೆ. ಹೂಸ್ಟನ್‌ನ ಮೀನಾಕ್ಷಿ ದೇವಾಲಯದಿಂದ ಪ್ರಾರಂಭವಾದ ರ್‍ಯಾಲಿ ರಿಚ್ಮಂಡ್‌ನ ಶಾರದ್ ಅಂಬಾ ದೇವಸ್ಥಾನದಲ್ಲಿ ಮಧ್ಯಾಹ್ನ ಮುಕ್ತಾವಾಗಿದೆ.

ರ್‍ಯಾಲಿಯಲ್ಲಿ 500ಕ್ಕೂ ಹೆಚ್ಚು ಉತ್ಸಾಹಿ ಸವಾರರು ರಾಮ ಮಂದಿರ, ಭಾರತ ಹಾಗೂ ಅಮೆರಿಕ ಧ್ವಜದ ಚಿತ್ರವಿರುವ ಕೇಸರಿ ಬ್ಯಾನರ್‌ಗಳನ್ನು ಹಿಡಿದು 216 ಕಾರುಗಳ ಮೂಲಕ ರ್‍ಯಾಲಿ ನಡೆಯಿತು. ಸುಮಾರು 2 ಸಾವಿರ ಭಕ್ತರು ವಿವಿಧ ದೇವಾಲಯಗಳಲ್ಲಿ ಭಜನೆಯೊಂದಿಗೆ ರ್‍ಯಾಲಿಯನ್ನು ಸ್ವಾಗತಿಸಿದರು.

Advertisement

 

Advertisement
Tags :
LatestNewsNewsKannadaಅಮೆರಿಕ
Advertisement
Next Article