ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

"ಜೈ ಶ್ರೀರಾಮ್​": ಧಾರ್ಮಿಕ ಸಾಮರಸ್ಯ ಸಾರಿ ಭಾರತೀಯರ ಮನಗೆದ್ದ ಶಮಿ

2023ರ ಏಕದಿನ ವಿಶ್ವಕಪ್​​ನಲ್ಲಿ ಟೀಮ್​ ಇಂಡಿಯಾ ಫೈನಲ್​ಗೆ ಹೋಗಲು ಪ್ರಮುಖ ಕಾರಣ ಸ್ಟಾರ್​ ವೇಗಿ ಮೊಹಮ್ಮದ್​ ಶಮಿ. ಇತ್ತೀಚೆಗೆ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮೊಹಮ್ಮದ್​ ಶಮಿ ಅಯೋಧ್ಯೆ ರಾಮ ಮಂದಿರದ ಕುರಿತು ಮಾತಾಡಿದ್ದಾರೆ.
07:57 PM Feb 09, 2024 IST | Gayathri SG

ಮುಂಬೈ: 2023ರ ಏಕದಿನ ವಿಶ್ವಕಪ್​​ನಲ್ಲಿ ಟೀಮ್​ ಇಂಡಿಯಾ ಫೈನಲ್​ಗೆ ಹೋಗಲು ಪ್ರಮುಖ ಕಾರಣ ಸ್ಟಾರ್​ ವೇಗಿ ಮೊಹಮ್ಮದ್​ ಶಮಿ. ಇತ್ತೀಚೆಗೆ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮೊಹಮ್ಮದ್​ ಶಮಿ ಅಯೋಧ್ಯೆ ರಾಮ ಮಂದಿರದ ಕುರಿತು ಮಾತಾಡಿದ್ದಾರೆ.

Advertisement

ವಿಶ್ವಕಪ್​​ ಪಂದ್ಯವೊಂದರಲ್ಲಿ ಶಮಿ ಪೆವಿಲಿಯನ್​ಗೆ ತೆರಳುವಾಗ ಅಭಿಮಾನಿಗಳು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಮಿ, ಜೈ ಶ್ರೀರಾಮ್​​ ಎಂದಿದ್ದರಲ್ಲಿ ತಪ್ಪೇನಿದೆ? ಎಂದಿದ್ದಾರೆ. ಈ ಹೇಳಿಕೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಕಳೆದ ವರ್ಷ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರಜಿತ್​ನನ್ನು ಔಟ್ ಮಾಡಿದ ಬಳಿಕ ಮೊಣಕಾಲೂರಿ ಕುಳಿತಿದ್ದೆ. ಇದಕ್ಕೆ ನಾನು ನಮಾಜ್​ ಮಾಡಿದ್ದ ಎಂದು ಟೀಕೆ ಮಾಡಲಾಯ್ತು. ನನ್ನ ಬೌಲಿಂಗ್ ಬಗ್ಗೆ ಮಾತಾಡೋದು ಬಿಟ್ಟು ನಮಾಜ್​ ವಿವಾದವನ್ನೇ ಹೈಲೆಟ್​ ಮಾಡಲಾಗುತ್ತಿದೆ. ನಾನು ಸತತ ಐದು ಓವರ್‌ ಬೌಲ್ ಮಾಡಿ ಸುಸ್ತಾಗಿದ್ದೆ. ಹೀಗಾಗಿ ಮೊಣಕಾಲೂರಿ ಕುಳಿತೆ ಅಷ್ಟೆ. ನಾನು ಯಾವತ್ತೂ ಮೈದಾನದಲ್ಲಿ ನಮಾಜ್​ ಮಾಡಲ್ಲ ಎಂದರು.

Advertisement

ನಾನು ಮುಸ್ಲಿಂ. ನಾನು ಭಾರತೀಯ. ನನ್ನ ದೇಶ ನನ್ನ ಮೊದಲ ಆದ್ಯತೆ. ಪ್ರತಿ ಧರ್ಮದಲ್ಲೂ ಬೇರೆ ಧರ್ಮವನ್ನು ಇಷ್ಟಪಡದ ಐದಾರು ಜನ ಇರುತ್ತಾರೆ. ಅದಕ್ಕೆ ನನ್ನ ಅಭ್ಯಂತರವಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿರುವಾಗ ಜೈ ಶ್ರೀರಾಮ್ ಹೇಳುವುದರಲ್ಲಿ ತಪ್ಪೇನು? ಸಾವಿರ ಸಲ ಹೇಳಲಿ. ನಾನು ಅಲ್ಲಾಹು ಅಕ್ಬರ್​ ಎಂದರೆ ತಪ್ಪೇನು? ಒಬ್ಬ ಮುಸ್ಲಿಂ ಅದರಲ್ಲೂ ಒಬ್ಬ ಭಾರತೀಯನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದರು. ಈ ಮಾತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Advertisement
Tags :
cricketMUMBAIಜೈ ಶ್ರೀರಾಮ್ಮುಂಬೈ
Advertisement
Next Article