For the best experience, open
https://m.newskannada.com
on your mobile browser.
Advertisement

ವಿಧಾನಸಭೆಯಲ್ಲಿ ಬಿಜೆಪಿಯಿಂದ 'ಜೈ ಶ್ರೀರಾಮ್', ಕಾಂಗ್ರೆಸ್ ನಿಂದ 'ಜೈ ಭೀಮ್' ಘೋಷಣೆ

ವಿಧಾನಸಭೆ ಅಧಿವೇಶನದಲ್ಲಿ ಇಂದು ಬಿಜೆಪಿ ಜೈಶ್ರೀರಾಮ್ ಘೋಷಣೆ ಕೂಗಿದರೆ ಕಾಂಗ್ರೆಸ್ ನಿಂದ ಜೈ ಭೀಮ್ ಘೋಷಣೆ ಕೂಗಿದೆ. ಕೇಸರಿ ಶಾಲು ಧರಿಸಿ ಬಿಜೆಪಿ ನಾಯಕರು ಸದನದಲ್ಲಿ ಜೈ ಶ್ರೀ ರಾಮ್ ಘೋಷಣೆ ಕೂಗಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು ಜೈ ಭೀಮ್ ಘೋಷಣೆ ಕೂಗಿದ್ದಾರೆ.
03:18 PM Feb 12, 2024 IST | Ashitha S
ವಿಧಾನಸಭೆಯಲ್ಲಿ ಬಿಜೆಪಿಯಿಂದ  ಜೈ ಶ್ರೀರಾಮ್   ಕಾಂಗ್ರೆಸ್ ನಿಂದ  ಜೈ ಭೀಮ್  ಘೋಷಣೆ

ಬೆಂಗಳೂರು : ವಿಧಾನಸಭೆ ಅಧಿವೇಶನದಲ್ಲಿ ಇಂದು ಬಿಜೆಪಿ ಜೈಶ್ರೀರಾಮ್ ಘೋಷಣೆ ಕೂಗಿದರೆ ಕಾಂಗ್ರೆಸ್ ನಿಂದ ಜೈ ಭೀಮ್ ಘೋಷಣೆ ಕೂಗಿದೆ. ಕೇಸರಿ ಶಾಲು ಧರಿಸಿ ಬಿಜೆಪಿ ನಾಯಕರು ಸದನದಲ್ಲಿ ಜೈ ಶ್ರೀ ರಾಮ್ ಘೋಷಣೆ ಕೂಗಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು ಜೈ ಭೀಮ್ ಘೋಷಣೆ ಕೂಗಿದ್ದಾರೆ.

Advertisement

ಆದರೆ ಯಾವುದೇ ಘೋಷಣೆ ಕೂಗದೇ ಬಿಜೆಪಿ ತಟಸ್ಥವಾಗಿತ್ತು. ಬಿಜೆಪಿ ಸದಸ್ಯರ ಜೈಶ್ರೀರಾಂ ಘೋಷಣೆಗೆ ಪ್ರತಿಕ್ರಿಯೆಯಾಗಿ ಸಚಿವ ಬೈರತಿ ಸುರೇಶ್ ಅವರು ಜೈ ಸಂವಿಧಾನ ಎಂದು ಘೋಷಣೆ ಕೂಗಿದರೆ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಜೈ ಭೀಮ್ , ಜೈ ಬಸವಣ್ಣ ಘೋಷಣೆ ಕೂಗಿದರು. ಜೆಡಿಎಸ್ ಸದಸ್ಯರು ಯಾವುದೇ ಘೋಷಣೆ ಕೂಗದೆ ತಟಸ್ಥವಾಗಿ ಉಳಿದರು.

ರಾಜ್ಯಪಾಲರ ಭಾಷಣದ ಮೂಲಕ ವಿಧಾನಸೌಧದಲ್ಲಿ ಅಧಿವೇಶನ ಆರಂಭವಾಗಿದ್ದು, ಸದನಕ್ಕೆ ಕೇಸರಿ ಶಾಲು ಧರಿಸಿ ಬಿಜೆಪಿ ನಾಯಕರು ಗಮನ ಸೆಳೆದಿದ್ದಾರೆ.ಇಂದಿನಿಂದ ರಾಜ್ಯ ವಿಧಾನಮಂಡಲ ಬಜೆಟ್ ಅಧಿವೇಶನ ಆರಂಭವಾಗಿದೆ. ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಿದ್ದಾರೆ. ಇಂದಿನಿಂದ ಫೆ.23ವರೆಗೆ ಬಜೆಟ್ ಅಧಿವೇಶನ ನಡೆಯಲಿದೆ.

Advertisement

Advertisement
Tags :
Advertisement