For the best experience, open
https://m.newskannada.com
on your mobile browser.
Advertisement

ಜಯಾನಂದ.ಕೆ. ಮನೆಗೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣ: 8 ಜನರ ಬಂಧನ

ಬಿಜೆಪಿ ಸಾಮಾಜಿಕ ಜಾಲತಾಣ ಪ್ರಮುಖ್ ಜಯಾನಂದ.ಕೆ. ಮನೆಗೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣಾ ಪೊಲೀಸರು 8 ಆರೋಪಿಗಳನ್ನ ಬಂಧಿಸಿದ್ದಾರೆ.
09:43 PM Mar 18, 2024 IST | Ashika S
ಜಯಾನಂದ ಕೆ  ಮನೆಗೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣ  8 ಜನರ ಬಂಧನ

ಪುತ್ತೂರು: ಬಿಜೆಪಿ ಸಾಮಾಜಿಕ ಜಾಲತಾಣ ಪ್ರಮುಖ್ ಜಯಾನಂದ.ಕೆ. ಮನೆಗೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣಾ ಪೊಲೀಸರು 8 ಆರೋಪಿಗಳನ್ನ ಬಂಧಿಸಿದ್ದಾರೆ.

Advertisement

ಬಂಧಿತರನ್ನು ಕಡಬ ತಾಲೂಕಿನ ಪಾತಾಜೆ ನಿವಾಸಿ ರೌಡಿಶೀಟರ್ ಪ್ರಜ್ವಲ್ ರೈ(34), ವಿಟ್ಲ ಕಂಬಳಬೆಟ್ಟು ನಿವಾಸಿ ಸುಶಾಂತ್ ಶೆಟ್ಟಿ(31), ಪುತ್ತೂರಿನ ಆರ್ಯಾಪು ನಿವಾಸಿ ಸನತ್ ರೈ(31), ಬಲ್ನಾಡು ನಿವಾಸಿ ರೋಹಿತ್ ನಾಯ್ಕ್(26), ಸಾಮೆತಡ್ಕ ನಿವಾಸಿ ಅಖಿಲ್(28), ಆರ್ಯಾಪು ನಿವಾಸಿ ಕೀರ್ತನ್ ರೈ(26), ಬನ್ನೂರು‌ ನಿವಾಸಿ ಸರ್ವೇಶ್ ರಾಜ್ ಅರಸ್(24), ವಿಟ್ಲ ಕಂಬಳಬೆಟ್ಟು ನಿವಾಸಿ ಸುಮಿತ್ ಶೆಟ್ಟಿ(29) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಕಾಂಗ್ರೆಸ್ ಬೆಂಬಲಿಗರು ಎಂದು ತಿಳಿದು ಬಂದಿದೆ.

ಘಟನೆ ಏನು? : ಅನುದಾನ ಹಂಚಿಕೆ ವಿಚಾರದಲ್ಲಿ ಶಾಸಕ ಅಶೋಕ್ ರೈ ಸಾವಿರ ಕೋಟಿ ರೂ ಅನುದಾನ ತಂದಿದ್ದಲ್ಲಿ ಬಹಿರಂಗ ಪಡಿಸಲಿ ಎಂದು  ಬಿಜೆಪಿಗರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಹಾಕಿದ್ದರು. ಈ ವಿಚಾರವಾಗಿ  ನಿನ್ನೆ ಶಾಸಕ ಅಶೋಕ್‌ ರೈ ಬೆಂಬಲಿಗರೆನ್ನಲಾದ ಯುವಕರು ಬಿಜೆಪಿ ಸಾಮಾಜಿಕ ಮಾಧ್ಯಮ ಪ್ರಕೋಷ್ಠದ ಜಿಲ್ಲಾ ಸದಸ್ಯ ತಾರಿಗುಡ್ಡೆಯಲ್ಲಿರುವ ಜಯಾನಂದ್ ಕೆ. ಅವರ ಮನೆಗೆ ನುಗ್ಗಿ ದಾಂಧಲೆ ಮಾಡಿ ಅವ್ಯಾಚ್ಯವಾಗಿ ನಿಂದಿಸಿ, ಜೀವಬೆದರಿಕೆಯೊಡ್ಡಿದ್ದರು.

Advertisement

ಪುತ್ತೂರು ನಗರ ಠಾಣಾ ಇನ್ಸ್ ಪೆಕ್ಟರ್ ಸತೀಶ್ ಜಿ.ಜೆ. ಹಾಗೂ ಎಸ್ಸೈ ನಂದಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ 8 ಜನರನ್ನು ಬಂಧಿಸಲಾಗಿದೆ.

Advertisement
Tags :
Advertisement