For the best experience, open
https://m.newskannada.com
on your mobile browser.
Advertisement

ಪೇಟಿಎಂ ವ್ಯಾಲಟ್ ಬಿಸಿನೆಸ್ ಖರೀದಿಸುವುದಿಲ್ಲ ಎಂದ ಜಿಯೋ

ಪೇಟಿಯಂ ವ್ಯಾಲೆಟ್ ಸೇವೆಯನ್ನು ತಾನು ಖರೀದಿ ಸಂಬಂಧ ಯಾವುದೇ ಮಾತುಕತೆ ನಡೆದಿಲ್ಲ ಎಂದು  ಜಿಯೋ ಫೈನಾನ್ಸ್‌ ಅಧಿಕೃತವಾಗಿ ತಿಳಿಸಿದೆ.
03:52 PM Feb 06, 2024 IST | Ashitha S
ಪೇಟಿಎಂ ವ್ಯಾಲಟ್ ಬಿಸಿನೆಸ್ ಖರೀದಿಸುವುದಿಲ್ಲ ಎಂದ ಜಿಯೋ
ನವದೆಹಲಿ: ಪೇಟಿಯಂ ವ್ಯಾಲೆಟ್ ಸೇವೆಯನ್ನು ತಾನು ಖರೀದಿ ಸಂಬಂಧ ಯಾವುದೇ ಮಾತುಕತೆ ನಡೆದಿಲ್ಲ ಎಂದು  ಜಿಯೋ ಫೈನಾನ್ಸ್‌ ಅಧಿಕೃತವಾಗಿ ತಿಳಿಸಿದೆ.

ಪೇಮೆಂಟ್ಸ್ ಬ್ಯಾಂಕ್‌ಗೆ ಆರ್‌ಬಿಐ ಹಲವು ನಿರ್ಬಂಧ ವಿಧಿಸಿದ ಬಳಿಕ ಪೇಟಿಎಂ ಸಾಕಷ್ಟು ನಷ್ಟಕ್ಕೆ ಸಿಲುಕಿಕೊಂಡಿದೆ. ಈ ಬೆನ್ನಲ್ಲೇ ಮುಕೇಶ್‌ ಅಂಬಾನಿ ನೇತೃತ್ವದ ಜಿಯೋ ಫೈನಾನ್ಸ್‌ ಪೇಟಿಯಂ ವ್ಯಾಲೆಟ್ ಸೇವೆಯನ್ನು ಖರೀದಿಸಲಿದೆ ಎಂದು ವರದಿಯಾಗಿತ್ತು.

Advertisement

ಈ ವರದಿಯ ಬೆನ್ನಲ್ಲೇ ಬಾಂಬೆ ಷೇರು ಮಾರುಕಟ್ಟೆಗೆ ಜಿಯೋ ಫೈನಾನ್ಸಿಯಲ್‌ ಸರ್ವಿಸ್‌ ಲಿಮಿಟೆಡ್‌ ತಾನು ಪೇಟಿಎಂ ವ್ಯಾಲೆಟ್‌ ಖರೀದಿಸುವುದಿಲ್ಲ ಎಂದು ತಿಳಿಸಿದೆ. ಖರೀದಿ ವಿಚಾರ ಕೇವಲ ಊಹಾತ್ಮಕ ಸುದ್ದಿಯಾಗಿದೆ. ಈ ವಿಷಯದಲ್ಲಿ ಯಾವುದೇ ಮಾತುಕತೆ ನಡೆಸಿಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸುತ್ತೇವೆ ಎಂದು ತಡರಾತ್ರಿ ಜಿಯೋ ಫೈನಾನ್ಸ್‌ ಫೈಲಿಂಗ್‌ನಲ್ಲಿ ತಿಳಿಸಿದೆ.

Advertisement
Advertisement
Tags :
Advertisement