For the best experience, open
https://m.newskannada.com
on your mobile browser.
Advertisement

ಮಂಗಳೂರು: ಶ್ರೀನಿವಾಸ ವಿವಿಯಲ್ಲಿ ಉದ್ಯೋಗ ಮೇಳ

ಶ್ರೀನಿವಾಸ ವಿಶ್ವವಿದ್ಯಾಲಯ - ಶ್ರೀನಿವಾಸ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ವತಿಯಿಂದ ಶ್ರೀನಿವಾಸ ಜಾಬ್ ಫೇರ್ 'ಉದ್ಯೋಗಮೇಳ - ೨೦೨೩' ೨೭ ನವೆಂಬರ್ ೨೦೨೩ ರಂದು ಬೆಳಿಗ್ಗೆ ೯:೩೦ ರಿಂದ ಸಂಜೆ ೫:೦೦ ರವರೆಗೆ ಪಾಂಡೇಶ್ವರ ಶ್ರೀನಿವಾಸ ವಿಶ್ವವಿದ್ಯಾಲಯ, ಸಿಟಿ ಕ್ಯಾಂಪಸ್ ನಲ್ಲಿ ನಡೆಯಿತು.
04:08 PM Nov 28, 2023 IST | Gayathri SG
ಮಂಗಳೂರು  ಶ್ರೀನಿವಾಸ ವಿವಿಯಲ್ಲಿ ಉದ್ಯೋಗ ಮೇಳ

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯ - ಶ್ರೀನಿವಾಸ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ವತಿಯಿಂದ ಶ್ರೀನಿವಾಸ ಜಾಬ್ ಫೇರ್ "ಉದ್ಯೋಗಮೇಳ - ೨೦೨೩" ೨೭ ನವೆಂಬರ್ ೨೦೨೩ ರಂದು ಬೆಳಿಗ್ಗೆ ೯:೩೦ ರಿಂದ ಸಂಜೆ ೫:೦೦ ರವರೆಗೆ ಪಾಂಡೇಶ್ವರ ಶ್ರೀನಿವಾಸ ವಿಶ್ವವಿದ್ಯಾಲಯ, ಸಿಟಿ ಕ್ಯಾಂಪಸ್ ನಲ್ಲಿ ನಡೆಯಿತು.

Advertisement

ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿ ಡಾ.ಸಿಎ ಎ. ರಾಘವೇಂದ್ರರಾವ್ ಆಶೀರ್ವಾದದೊಂದಿಗೆ ಉದ್ಯೋಗ ಮೇಳವನ್ನು ಆಯೋಜಿಸಲಾಯಿತು. ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಸಹ ಕುಲಾಧಿಪತಿ ಡಾ.ಎ. ಶ್ರೀನಿವಾಸ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು ಜ್ಞಾನ ಗಳಿಸಿ, ಪ್ರಾಮಾಣಿಕವಾಗಿ ಸಮಾಜಕ್ಕೆ ಕೈಲಾಗಿರುವುದನ್ನು ನೀಡಿ ಎಂದರು.

ಗ್ಲೋ ಟಚ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ, ಅಂ. ಎಂ.ಎನ್. ಪೈ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀನಿವಾಸ ವಿಶ್ವವಿದ್ಯಾಲಯವು ಈ ಉದ್ಯೋಗ ಮೇಳವನ್ನು ಆಯೋಜಿಸಿದ್ದಕ್ಕಾಗಿ ನಾನು ಪ್ರಶಂಸಿಸುತ್ತೇನೆ. ಇದು ಉದ್ಯಮಗಳಿಗೆ ತಾವು ಹುಡುಕುತ್ತಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ವೇದಿಕೆಯನ್ನು ಒದಗಿಸುತ್ತದೆ. ನಾವು ಅನುಭವದಿಂದ ಕಲಿಯಬೇಕು ಆಗ ಮಾತ್ರ ನಮ್ಮನ್ನು ನಾವು ಸುಧಾರಿಸಿಕೊಳ್ಳಬಹುದು ಎಂದರು.

Advertisement

ಕಾರ‍್ಯಕ್ರಮದ ಮುಖ್ಯ ಅತಿಥಿ ಕರ್ಣಾಟಕ ಬ್ಯಾಂಕ್ ಮಂಗಳೂರು ಆಂತರಿಕ ವಿಜಿಲೆನ್ಸ್ ಮುಖ್ಯಸ್ಥರು ಮತ್ತು ಮುಖ್ಯ ಅನುಸರಣೆ ಅಧಿಕಾರಿ ನಿರ್ಮಲ್‌ ಕುಮಾರ್ ಕೇಚಪ್ಪ ಹೆಗಡೆ ಮಾತನಾಡಿ, ನೀವು ಪ್ರಯತ್ನವನ್ನು ಮಾಡಬೇಕು. ಸವಾಲುಗಳನ್ನು ತೆಗೆದುಕೊಳ್ಳಲು ಸಿದ್ಧರಾಗಿರಬೇಕು. ನಿಮ್ಮ ಜೀವನದಲ್ಲಿ ನೀವು ಸಾಧಿಸಲು ಬಯಸಿದರೆ, ಸವಾಲುಗಳನ್ನು ಸ್ವೀಕರಿಸಲು ಸಿದ್ಧರಾಗಿರಿ ಎಂದು ಸಲಹೆ ನೀಡಿದರು.

ಶ್ರೀನಿವಾಸ ಉದ್ಯೋಗ ಮೇಳದಲ್ಲಿ ೪೯ ಕಂಪನಿಗಳು ಆಗಮಿಸಿದ್ದು, ೧೨೦೦ ಜನರು ಭಾಗವಹಿಸಿ ೬೭೮ ಜನರನ್ನು ಶಾರ್ಟ್‌ಲಿಸ್ಟ್‌ ಮಾಡಲಾಗಿದೆ. ಶ್ರೀನಿವಾಸ ವಿಶ್ವವಿದ್ಯಾಲಯದ ಪ್ರಭಾರ ಉಪಕುಲಪತಿ, ರಿಜಿಸ್ಟ್ರಾರ್ ಡಾ. ಅನಿಲ್ ಕುಮಾರ್, ಶ್ರೀನಿವಾಸ ವಿಶ್ವವಿದ್ಯಾಲಯದ ಅಭಿವೃದ್ಧಿ ರಿಜಿಸ್ಟರ್ ಡಾ. ಅಜಯ್ ಕುಮಾರ್, ಶ್ರೀನಿವಾಸ ವಿಶ್ವವಿದ್ಯಾಲಯದ ಮೌಲ್ಯಮಾಪನ ರಿಜಿಸ್ಟರ್ ಡಾ.ಶ್ರೀನಿವಾಸ್ ಮಯ್ಯ ಡಿ. ಉಪಸ್ಥಿತರಿದ್ದರು. ಶ್ರೀನಿವಾಸ ವಿಶ್ವವಿದ್ಯಾಲಯದ ತರಬೇತಿ ಮತ್ತು ನಿಯೋಜನೆ ಅಧಿಕಾರಿ ಪ್ರೊ.ಶ್ವೇತಾ ಪೈ ಸ್ವಾಗತಿಸಿ, ಪ್ರೊ.ಶ್ವೇತಾ ಭಟ್ ವಂದಿಸಿದರು. ಪ್ರೊ.ರಿಯಾ ಉಪ್ಪಳ ಮತ್ತು ಪ್ರೊ.ದಿವ್ಯಾ ನವೀನ್ ಕರ‍್ಯಕ್ರಮ ನಿರೂಪಿಸಿದರು.

Advertisement
Tags :
Advertisement