For the best experience, open
https://m.newskannada.com
on your mobile browser.
Advertisement

ʻಜೋಗ 101ʼ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಮೂಲಕ ರಾಘು ಎಂಟ್ರಿ

ಚಿನ್ನಾರಿ ಮುತ್ತ ಎಂದೇ ಮನೆ ಮಗನಾಗಿರುವ ವಿಜಯ ರಾಘವೇಂದ್ರʻ ಸೆವೆನ್ ಸ್ಟಾರ್‌́ ಮೂಲಕ ನಿರ್ಮಾಣ ಮಾಡಿರುವ ʻಜೋಗ 101ʼ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಇದೇ ಮಾರ್ಚ್‌ 7ರಂದು ಬಿಡುಗಡೆಯಾಗುತ್ತಿದೆ.
10:42 AM Mar 04, 2024 IST | Nisarga K
ʻಜೋಗ 101ʼ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಮೂಲಕ ರಾಘು ಎಂಟ್ರಿ
ʻಜೋಗ 101ʼ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಮೂಲಕ ರಾಘು ಎಂಟ್ರಿ

ಚಿನ್ನಾರಿ ಮುತ್ತ ಎಂದೇ ಮನೆ ಮಗನಾಗಿರುವ ವಿಜಯ ರಾಘವೇಂದ್ರʻ ಸೆವೆನ್ ಸ್ಟಾರ್‌́ ಮೂಲಕ ನಿರ್ಮಾಣ ಮಾಡಿರುವ ʻಜೋಗ 101ʼ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಇದೇ ಮಾರ್ಚ್‌ 7ರಂದು ಬಿಡುಗಡೆಯಾಗುತ್ತಿದೆ.

Advertisement

ವಿಜಯ್ ರಾಘವೇಂದ್ರ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಈ ಪೈಕಿ ಹಲವು ಸಸ್ಪೆನ್ಸ್ ಸಿನಿಮಾಗಳನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ. ಹಾಗೇಯೆ ಜೋಗದ ರಹಸ್ಯಮಯ ನೈಜ ಘಟನೆ ಕುರಿತಾದ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ.

ಜೋಗ್‌ 101 ಚಿತ್ರ ಸೆವೆನ್‌ಸ್ಟಾರ್‌ ಮೂಲಕ ವಿಜಯ ರಾಘವೇಂದ್ರ ಅವರ ನಿರ್ಮಾಣದಲ್ಲಿ ಮೂಡಿ ಬಂದಿದೆ. ಹಾಗೂ ವಿಜಯ್ ಕನ್ನಡಿಗ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ವಿಜಯ್ ರಾಘವೇಂದ್ರ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.

Advertisement

‘ಜೋಗ್ 101’ ಟ್ರೇಲರ್ ನೋಡಿದವರಿಗೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಅನ್ನೋದು ಗೊತ್ತಾಗುತ್ತದೆ. ವಿಕ್ರಮ್ (ವಿಜಯ್ ರಾಘವೇಂದ್ರ) ಹವ್ಯಾಸಿ ಫೋಟೋಗ್ರಾಫರ್. ಅವರು ಜೋಗ್​ಗೆ ಬರುತ್ತಾರೆ. ‘ಈ ಪೋಲಿಸ್​ ಸ್ಟೇಷನ್​ ಲಿಮಿಟ್​ನಲ್ಲಿ 131 ಜನ ಮಿಸ್ಸಿಂಗ್. ಆತ್ಮಹತ್ಯೆ ಮಾಡಿಕೊಂಡ 31 ಜನರ ಬಾಡಿ ಸಿಕ್ಕಿದೆ. ಉಳಿದವರು ಇನ್ನೂ ಮಿಸ್ಸಿಂಗ್’ ಎಂದು ವಿಕ್ರಮ್ ಹೇಳುತ್ತಾರೆ. ಜೊತೆಗೆ ಅವರು ಜೋಗ್​ ಬೆಂದ ಉದ್ದೇಶವ್ನೂ ರಿವೀಲ್ ಮಾಡುತ್ತಾರೆ. ಇದಿಷ್ಟು ವಿಚಾರ ಟ್ರೇಲರ್​ನಲ್ಲಿದೆ.

Advertisement
Tags :
Advertisement