For the best experience, open
https://m.newskannada.com
on your mobile browser.
Advertisement

ಷರತ್ತುಗಳಿಲ್ಲದೇ ಬಿಜೆಪಿ ಪಕ್ಷ ಸೇರಿದ್ದೇನೆ: ಜನಾರ್ದನ ರೆಡ್ಡಿ

ಕೆಆರ್‌ಪಿಪಿ ಪಕ್ಷದ ಸ್ಥಾಪಕ ಶಾಸಕ ಜನಾರ್ದನ ರೆಡ್ಡಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಮಾಜಿ ಸಚಿವರಾದ ಶ್ರೀರಾಮುಲು, ಆನಂದ್ ಸಿಂಗ್, ಸಿಟಿ ರವಿ, ಅಶ್ವಥ್‌ನಾರಾಯಣ ಅವರ ಉಪಸ್ಥಿತಿಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
01:10 PM Mar 25, 2024 IST | Chaitra Kulal
ಷರತ್ತುಗಳಿಲ್ಲದೇ ಬಿಜೆಪಿ ಪಕ್ಷ ಸೇರಿದ್ದೇನೆ  ಜನಾರ್ದನ ರೆಡ್ಡಿ

ಬೆಂಗಳೂರು: ಕೆಆರ್‌ಪಿಪಿ ಪಕ್ಷದ ಸ್ಥಾಪಕ ಶಾಸಕ ಜನಾರ್ದನ ರೆಡ್ಡಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಮಾಜಿ ಸಚಿವರಾದ ಶ್ರೀರಾಮುಲು, ಆನಂದ್ ಸಿಂಗ್, ಸಿಟಿ ರವಿ, ಅಶ್ವಥ್‌ನಾರಾಯಣ ಅವರ ಉಪಸ್ಥಿತಿಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

Advertisement

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷ ಸೇರ್ಪಡೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕೆಆರ್‌ಪಿಪಿ ಪಕ್ಷವನ್ನು ಬಿಜೆಪಿ ಜೊತೆಗೆ ವಿಲೀನ ಮಾಡಿದ್ದೇನೆ. ನನ್ನ ಪತ್ನಿ ಹಾಗೂ ನನ್ನ ಕಷ್ಟದ ಕಾಲದಲ್ಲಿ ಜೊತೆಗೆ ನಿಂತ ಎಲ್ಲರೂ ಬಿಜೆಪಿ ಸೇರಿದ್ದೇವೆ. ನನ್ನ ಗೆಳೆಯ ಶ್ರೀರಾಮುಲು ಅವರಿಗೆ ವಿಶೇಷ ಧನ್ಯವಾದ ತಿಳಿಸುತ್ತೇನೆ ಎಂದು ಭಾವುಕರಾದರು.

ಮೋದಿಯವರ ಕೈ ಬಲಪಡಿಸುವ ದೃಷ್ಟಿಯಿಂದ ಅಮಿತ್ ಶಾ ಅವರು ದೆಹಲಿಗೆ ಆಹ್ವಾನಿಸಿದ್ದರು. ಬಾಹ್ಯ ಬೆಂಬಲ ಬೇಡ, ಪಕ್ಷಕ್ಕೆ ಸೇರುವಂತೆ ಪ್ರೀತಿಯಿಂದ ಆಹ್ವಾನ ನೀಡಿದರು. ಅದನ್ನು ಒಪ್ಪಿ ಬಿಜೆಪಿಗೆ ಮತ್ತೆ ಸೇರಿದ್ದೇನೆ ಎಂದಿದ್ದಾರೆ.

Advertisement

ಯಡಿಯೂರಪ್ಪ ಅವರ ಬಗ್ಗೆ ಎರಡು ಮಾತಲ್ಲಿ ಹೇಳಲಾಗಲ್ಲ. ರಾಜ್ಯದಲ್ಲಿ ಬಿಜೆಪಿ ನೆಲೆಯೂರಲು ದೇವರು ಕಳಿಸಿದ ಅದ್ಭುತ ಸೃಷ್ಟಿ ಯಡಿಯೂರಪ್ಪ. ಅವರ ಜೊತೆ ಚಿಕ್ಕ ವಯಸ್ಸಲ್ಲೇ ಸೇರಿಕೊಂಡು ಪಕ್ಷ ಕಟ್ಟಿದ್ದು ನನ್ನ ಪೂರ್ವ ಜನ್ಮದ ಪುಣ್ಯ. ತಂದೆ-ಮಗನ ಜೊತೆಗೂಡಿ ಈಗ ಮತ್ತೆ ಪಕ್ಷದ ಕೆಲಸ ಮಾಡುತ್ತೇನೆ. ಯಾವುದೇ ಷರತ್ತು ಹಾಕಿಲ್ಲ, ಫಲಾಫೇಕ್ಷೆ ಬಯಸದೇ ಸೇರಿದ್ದೇನೆ ಎಂದು ಹೇಳಿದ್ದಾರೆ.

Advertisement
Tags :
Advertisement