For the best experience, open
https://m.newskannada.com
on your mobile browser.
Advertisement

ಹಿರಿಯ ಪತ್ರಕರ್ತ, ನಿರೂಪಕ ಮನೋಹರ್ ಪ್ರಸಾದ್ ನಿಧನ

ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ (64ವರ್ಷ) ಇಂದು (ಮಾ. 1) ಮುಂಜಾನೆ ನಿಧನರಾಗಿದ್ದಾರೆ. ಮೂಲತಃ ಕಾರ್ಕಳ ಕರ್ವಾಲು ಗ್ರಾಮದವರಾದ ಮನೋಹರ್ ಪ್ರಸಾದ್ ಮಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆದಿದ್ದರು.
09:46 AM Mar 01, 2024 IST | Gayathri SG
ಹಿರಿಯ ಪತ್ರಕರ್ತ  ನಿರೂಪಕ ಮನೋಹರ್ ಪ್ರಸಾದ್ ನಿಧನ

ಉಡುಪಿ: ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ (64ವರ್ಷ) ಇಂದು (ಮಾ. 1) ಮುಂಜಾನೆ ನಿಧನರಾಗಿದ್ದಾರೆ. ಮೂಲತಃ ಕಾರ್ಕಳ ಕರ್ವಾಲು ಗ್ರಾಮದವರಾದ ಮನೋಹರ್ ಪ್ರಸಾದ್ ಮಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆದಿದ್ದರು.

Advertisement

ಇವರು ನವ ಭಾರತ ಪತ್ರಿಕೆ ಮೂಲಕ ಪತ್ರಿಕಾ ವೃತ್ತಿ ಜೀವನ ಆರಂಭಿಸಿದ್ದರು. ಉದಯವಾಣಿ ಪತ್ರಿಕೆಯಲ್ಲಿ ವರದಿಗಾರ, ಬ್ಯೂರೋ ಚೀಫ್ ಆಗಿದ್ದ ಅವರು ಸಹಾಯಕ ಸಂಪಾದಕರೂ ಆಗಿದ್ದರು. ಒಟ್ಟು 36 ವರ್ಷಗಳ ಉದಯವಾಣಿ ಪತ್ರಿಕೆಗೆ ಸೇವೆ ಸಲ್ಲಿಸಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ನಿವೃತ್ತರಾಗಿದ್ದರು. ಪತ್ರಕರ್ತ ಮಾತ್ರವಲ್ಲದೇ, ಕತೆಗಾರ, ನಿರೂಪಕರಾಗಿಯೂ ಮನೋಹರ್ ಪ್ರಸಾದ್ ಹೆಸರುಗಳಿಸಿದ್ದರು.

ಕರ್ನಾಟಕ ಕರಾವಳಿ ಇತಿಹಾಸದ ಕುರಿತು 608 ಸಂಶೋಧನ ಲೇಖನಗಳನ್ನು ಬರೆದಿದ್ದ ಅವರಿಗೆ ಕರ್ನಾಟಕ ರಾಜ್ಯೋ ತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ, ಸಂದೇಶ ಪ್ರತಿಷ್ಠಾನದ ರಾಜ್ಯ ಪ್ರಶಸ್ತಿ, ಕೆನರಾ ಬ್ಯಾಂಕ್ ಅಮೃತೋತ್ಸವ ಪುರಸ್ಕಾರ ಮೊದಲಾದ ಹಲವು ಗೌರವಗಳನ್ನು ಪಡೆದಿದ್ದರು.

Advertisement

Advertisement
Tags :
Advertisement