For the best experience, open
https://m.newskannada.com
on your mobile browser.
Advertisement

ಮದುಮಗ ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಮದುವೆ ಒಲ್ಲೆ ಎಂದ ವಧು

ಹಸೆಮಣೆ ಏರಿ ತಾಳಿ ಕಟ್ಟುವ ವೇಳೆ ಮದುವೆಗಳು ತಾಳಿ ಕಟ್ಟಿಸಿಕೊಳ್ಳುವುದನ್ನು ನಿರಾಕರಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
02:14 PM Dec 08, 2023 IST | Gayathri SG
ಮದುಮಗ ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಮದುವೆ ಒಲ್ಲೆ ಎಂದ ವಧು

ಚಿತ್ರದುರ್ಗ: ಹಸೆಮಣೆ ಏರಿ ತಾಳಿ ಕಟ್ಟುವ ವೇಳೆ ಮದುವೆಗಳು ತಾಳಿ ಕಟ್ಟಿಸಿಕೊಳ್ಳುವುದನ್ನು ನಿರಾಕರಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

Advertisement

ಜಿಲ್ಲೆಯ ಹೊಸದುರ್ಗ ತಾ| ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮದುಮಗ ಇನ್ನೇನು ತಾಳಿ ಕಟ್ಟಬೇಕು ಅಷ್ಟರಲ್ಲಿ ಮದುಮಗಳು ನನಗೆ ಮದುವೆ ಬೇಡ ಎಂದಿದ್ದಾಳೆ. ಆರತಕ್ಷತೆ ಸೇರಿದಂತೆ ಮದುವೆ ಎಲ್ಲಾ ಶಾಸ್ತ್ರಗಳು ಮುಗಿದು ತಾಳಿ ಕಟ್ಟುವ ಸಮಯದಲ್ಲಿ ಈ ಘಟನೆ ನಡೆದಿದೆ. ‌ಮದುಮಗ ತಾಳಿ ಕೈಯ್ಯಲ್ಲಿ ಹಿಡಿದುಕೊಂಡು ವಧು ಕುತ್ತಿಗೆಗೆ ಕಟ್ಟೋದಕ್ಕೆ ಮುಂದಾಗಿದ್ದಾನೆ. ವರ ಮುಂದೆ ತಂದಂತ ತಾಳಿಯನ್ನು ವಧು ಕೈ ಅಡ್ಡ ಹಿಡಿದು ಬೇಡ ಎಂಬುದಾಗಿ ತಿಳಿಸಿದ್ದಾಳೆ.

ಸಂಬಂಧಿಕರು ಯಾಕಮ್ಮ ಹೀಗೆ ಮಾಡ್ತಿದ್ದೀಯ ಅಂತಾ ಕೇಳಿದಾಗ ನನಗೆ ಮದುವೆ ಇಷ್ಟವಿಲ್ಲ. ಈ ಮದುವೆ ಬೇಡ ಎಂಬುದಾಗಿ ವಧು ನಿರಾಕರಿಸಿದ್ದಾಳೆ. ಆಕೆಯನ್ನು ಕುಟುಂಬಸ್ಥರು ಎಷ್ಟೇ ಮನವೊಲಿಕೆಗೆ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಕೊನೆಗೆ ಮದುವೆ ರದ್ದುಗೊಂಡಿದೆ. ಮದುವೆಗೆ ಬಂದಿದ್ದ ಸಂಬಂಧಿಕರು ದಿಕ್ಕು ತೋಚದಂತೆ ವಾಪಸ್ ತೆರಳಿದ್ದಾರೆ.

Advertisement

Advertisement
Tags :
Advertisement