For the best experience, open
https://m.newskannada.com
on your mobile browser.
Advertisement

ಫೆಬ್ರವರಿ 9 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ‘ಜಸ್ಟ್ ಪಾಸ್’

ರಾಯ್ಸ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಕೆ.ವಿ.ಶಶಿಧರ್ ನಿರ್ಮಿಸಿರುವ, ಕೆ.ಎಂ.ರಘು ನಿರ್ದೇಶನದಲ್ಲಿ ಶ್ರೀ ಹಾಗೂ ಪ್ರಣತಿ ನಾಯಕ- ನಾಯಕಿಯಾಗಿ ನಟಿಸಿರುವ ‘ಜಸ್ಟ್ ಪಾಸ್’ ಚಿತ್ರ ಫೆಬ್ರವರಿ 9 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ತಯಾರಾಗುತ್ತಿದೆ.
07:32 AM Feb 08, 2024 IST | Ashika S
ಫೆಬ್ರವರಿ 9 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ‘ಜಸ್ಟ್ ಪಾಸ್’

ಬೆಂಗಳೂರು: ರಾಯ್ಸ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಕೆ.ವಿ.ಶಶಿಧರ್ ನಿರ್ಮಿಸಿರುವ, ಕೆ.ಎಂ.ರಘು ನಿರ್ದೇಶನದಲ್ಲಿ ಶ್ರೀ ಹಾಗೂ ಪ್ರಣತಿ ನಾಯಕ- ನಾಯಕಿಯಾಗಿ ನಟಿಸಿರುವ ‘ಜಸ್ಟ್ ಪಾಸ್’ ಚಿತ್ರ ಫೆಬ್ರವರಿ 9 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ತಯಾರಾಗುತ್ತಿದೆ.

Advertisement

ಚಿತ್ರದ ಟೀಸರ್, ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ಜನಪ್ರಿಯವಾಗಿದೆ. ಈ ಚಿತ್ರದಲ್ಲಿ “ಜಸ್ಟ್ ಪಾಸ್” ಆದವರಿಗೆ ಅಂತಲೇ ಒಂದು ಕಾಲೇಜು ಇದೆ. ಆ ಕಾಲೇಜಿನ ವಿದ್ಯಾರ್ಥಿಗಳ ತರಲೆ, ತಮಾಷೆಗಳನ್ನು ನಿರ್ದೇಶಕ ರಘು ಈ ಚಿತ್ರದಲ್ಲಿ ತೋರಿಸಿದ್ದಾರೆ. ವಿದ್ಯಾರ್ಥಿಗಳಿಗಂತೂ ಅಪ್ಪಟ್ಟ ಮನೋರಂಜನೆಯ ರಸದೌತಣ ಸಿಗುವುದಂತು ಖಚಿತ.

ಜಸ್ಟ್ ಪಾಸ್  ಆದವರಿಗೆಂದೇ ಒಂದು ಕಾಲೇಜು, ದೇವರಂಥಹಾ ಪ್ರಿನ್ಸಿಪಲ್, ಒಬ್ಬ ಸುಂದರಿ ಲೆಕ್ಚರರ್, ಒಬ್ಬ ಜೊಳ್ಳು ಮೇಷ್ಟ್ರು ಕೆಲವು ಶಿಸ್ತಿನ ಮೇಷ್ಟ್ರುಗಳು ಅಪ್ಪಟ ತರ್ಲೆ ವಿದ್ಯಾರ್ಥಿಗಳು ಹೇಗೋ ಎಲ್ಲವೂ ನಡೆದುಕೊಂಡು ಹೋಗುವಾಗ ನಡೆಯುವ ಒಂದು ದುರ್ಘಟನೆ. ಆ ದುರ್ಘಟನೆ ಆ ಕಾಲೇಜಿನಲ್ಲಿರುವ ಎಲ್ಲರ ಮೇಲೂ ಹೇಗೆ ಪರಿಣಾಮ ಬೀರುತ್ತದೆ. ತರ್ಲೆ ಹುಡುಗರನ್ನು ಹೇಗೆ ಸರಿ ದಾರಿಗೆ ತರುತ್ತದೆ ಎಂಬ ಕತೆಯನ್ನಿಟ್ಟುಕೊಂಡು ಬರುತ್ತಿದೆ ‘ಜಸ್ಟ್ ಪಾಸ್’ ಸಿನಿಮಾ.

Advertisement

ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ, ಸುಜಯ್ ಕುಮಾರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಕಲೈ, ಭೂಷಣ್ ನೃತ್ಯ ನಿರ್ದೇಶನ ಹಾಗೂ ಅರ್ಜುನ್ ಅವರ ಸಾಹಸ ನಿರ್ದೇಶನವಿರುವ “ಜಸ್ಟ್ ಪಾಸ್” ಚಿತ್ರಕ್ಕೆ ಕೆ.ಎಂ.ರಘು ಹಾಗೂ ರಘು ನಿಡವಳ್ಳಿ ಸಂಭಾಷಣೆ ಬರೆದಿದ್ದಾರೆ.

ಶ್ರೀ, ಪ್ರಣತಿ, ರಂಗಾಯಣರಘು ಸಾಧುಕೋಕಿಲ ಸುಚೇಂದ್ರ ಪ್ರಸಾದ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ, ಗೋವಿಂದೇಗೌಡ, ದಾನಪ್ಪ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

Advertisement
Tags :
Advertisement