ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹೊಸ ಇತಿಹಾಸ ಬರೆಯಲು ಸಿದ್ಧವಾದ 'ಕಾಟೇರ' ಸಿನಿಮಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿದ ‘ಕಾಟೇರ’ ಸಿನಿಮಾ ಇದೀಗ ಸ್ಯಾಂಡಲ್​ವುಡ್ ಬಾಕ್ಸ್ ಆಫೀಸ್​ನಲ್ಲಿ ಹೊಸ ಇತಿಹಾಸ ಬರೆಯಲು ಸಿದ್ಧವಾಗಿದೆ. ಈ ಚಿತ್ರ 100 ಕೋಟಿ ರೂಪಾಯಿ ಕಲೆಕ್ಷನ್​ನತ್ತ ದಾಪುಗಾಲು ಇಡುತ್ತಿದ್ದು, ಹಲವು ಕಡೆಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ.
10:07 AM Jan 03, 2024 IST | Gayathri SG

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿದ ‘ಕಾಟೇರ’ ಸಿನಿಮಾ ಇದೀಗ ಸ್ಯಾಂಡಲ್​ವುಡ್ ಬಾಕ್ಸ್ ಆಫೀಸ್​ನಲ್ಲಿ ಹೊಸ ಇತಿಹಾಸ ಬರೆಯಲು ಸಿದ್ಧವಾಗಿದೆ. ಈ ಚಿತ್ರ 100 ಕೋಟಿ ರೂಪಾಯಿ ಕಲೆಕ್ಷನ್​ನತ್ತ ದಾಪುಗಾಲು ಇಡುತ್ತಿದ್ದು, ಹಲವು ಕಡೆಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ.

Advertisement

‘ಕಾಟೇರ’ ಚಿತ್ರ ಡಿಸೆಂಬರ್ 29ರಂದು 19.79 ಕೋಟಿ ರೂಪಾಯಿ ಕಲೆ ಹಾಕಿತು. ಆ ಬಳಿಕ ಡಿಸೆಂಬರ್ 30ರಂದು 17.35 ಕೋಟಿ ರೂಪಾಯಿ, ಡಿಸೆಂಬರ್ 31ರಂದು 20.94 ಕೋಟಿ ರೂಪಾಯಿ ಹಾಗೂ ಜನವರಿ 1ರಂದು 18.26 ಕೋಟಿ ರೂಪಾಯಿ ಬಾಚಿಕೊಂಡಿತು. ಈಗ ಜನವರಿ 2ರಂದು ಚಿತ್ರಕ್ಕೆ 9.24 ಕೋಟಿ ರೂಪಾಯಿ ಹರಿದುಬಂದಿದೆ. ಈ ಮೂಲಕ ಸಿನಿಮಾದ ಗಳಿಕೆ 86.84 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಮಾಹಿತಿ ಲಭಿಸಿದೆ.

ಈ ಸಿನಿಮಾಕ್ಕೆ ತರುಣ್ ಸುಧೀರ್ ಅವರು ಆ್ಯಕ್ಷನ್ ಕಟ್ ಹೇಳಿದ್ದು, ರಾಕ್​ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ದರ್ಶನ್​ಗೆ ಜೊತೆಯಾಗಿ ಮಾಲಾಶ್ರೀ ಮಗಳು ಆರಾಧನಾ ರಾಮ್ ನಟಿಸಿದ್ದಾರೆ.

Advertisement

Advertisement
Tags :
'ಕಾಟೇರLatestNewsNewsKannada
Advertisement
Next Article