ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹಿಂದೂ ದೇಗುಲ ಕಲ್ಕಿ ಧಾಮ್‌ನ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಅವರು ಇಂದು (ಫೆ.19) ಉತ್ತರಪ್ರದೇಶದ ಸಂಭಾಲ್‌ನಲ್ಲಿ ಹಿಂದೂ ದೇಗುಲ ಕಲ್ಕಿ ಧಾಮ್‌ನ ಶಂಕುಸ್ಥಾಪನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಜತೆಗೆ ಉತ್ತರ ಪ್ರದೇಶದಸಿಎಂ ಯೋಗಿ ಆದಿತ್ಯನಾಥ್ ಹಾಗೂ ಶ್ರೀ ಕಲ್ಕಿ ಧಾಮ ನಿರ್ಮಾಣ ಟ್ರಸ್ಟ್‌ನ ಅಧ್ಯಕ್ಷ ಆಚಾರ್ಯ ಪ್ರಮೋದ್ ಕೃಷ್ಣಂ ಉಪಸ್ಥಿತರಿದ್ದರು.
12:26 PM Feb 19, 2024 IST | Ashitha S

ಲಕ್ನೋ: ಪ್ರಧಾನಿ ಮೋದಿ ಅವರು ಇಂದು (ಫೆ.19) ಉತ್ತರಪ್ರದೇಶದ ಸಂಭಾಲ್‌ನಲ್ಲಿ ಹಿಂದೂ ದೇಗುಲ ಕಲ್ಕಿ ಧಾಮ್‌ನ ಶಂಕುಸ್ಥಾಪನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಜತೆಗೆ ಉತ್ತರ ಪ್ರದೇಶದಸಿಎಂ ಯೋಗಿ ಆದಿತ್ಯನಾಥ್ ಹಾಗೂ ಶ್ರೀ ಕಲ್ಕಿ ಧಾಮ ನಿರ್ಮಾಣ ಟ್ರಸ್ಟ್‌ನ ಅಧ್ಯಕ್ಷ ಆಚಾರ್ಯ ಪ್ರಮೋದ್ ಕೃಷ್ಣಂ ಉಪಸ್ಥಿತರಿದ್ದರು.

Advertisement

ಇನ್ನು ಮೋದಿ ಅವರು ಭಕ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಸಭಾ ವೇದಿಕೆಯಲ್ಲಿ ಅನೇಕ ಸಂತರು ಕೂಡ ಭಾಗಿಯಾಗಿದ್ದಾರೆ. ಇಂದು, ಉತ್ತರ ಪ್ರದೇಶದ ನೆಲದಲ್ಲಿ ಭಕ್ತಿ, ಭಾವನೆ ಮತ್ತು ಆಧ್ಯಾತ್ಮಿಕತೆಯ ಮತ್ತೊಂದು ಹೊಳೆ ಹರಿಯಲು ಸಿದ್ಧವಾಗಿದೆ. ಸಂತರ ಭಕ್ತಿ ಮತ್ತು ಜನರ ಉತ್ಸಾಹದಿಂದ ಮತ್ತೊಂದು ಪವಿತ್ರ ಸ್ಥಳದ ಅಡಿಪಾಯ ಹಾಕಲಾಗುತ್ತಿದೆ.

ನಿಮ್ಮೆಲ್ಲರ ಸಮ್ಮುಖದಲ್ಲಿ ಭವ್ಯವಾದ ಕಲ್ಕಿ ಧಾಮದ ಶಿಲಾನ್ಯಾಸವನ್ನು ನೆರವೇರಿಸುವ ಮೂಲಕ ಕಲ್ಕಿಧಾಮವು ಮತ್ತೊಂದು ಶ್ರೇಷ್ಠ ನಂಬಿಕೆಯ ಕೇಂದ್ರವಾಗಿ ಹೊರಹೊಮ್ಮಲಿದೆ. ಹಾಗೂ ಇಂದು ಪುಣ್ಯ ದಿನ ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನವೂ ಆಗಿದೆ ಎಂದರು. ಇದು ಭಾರತ ಕಾಣುತ್ತಿರುವ ಸಾಂಸ್ಕೃತಿಕ ಪುನರುಜ್ಜೀವನ ಮತ್ತು ನಮ್ಮ ಅಸ್ಮಿತೆಯ ಬಗ್ಗೆ ಹೆಮ್ಮೆ ಪಡುವ ಕ್ಷಣ. ನಮ್ಮ ಸಾಂಸ್ಕೃತಿಯನ್ನು ನೆನಪಿಸಿಕೊಳ್ಳಬೇಕಿದೆ. ಇದನ್ನು ಛತ್ರಪತಿ ಶಿವಾಜಿ ಮಹಾರಾಜರ ದಿನದ ನೆನಪಿಸಿಕೊಳ್ಳುವುದು ಮತ್ತಷ್ಟು ಉತ್ತಮ ಎಂದರು.

Advertisement

ಇನ್ನು ಇದರ ಜತೆಗೆ ಪ್ರಧಾನಿ ಮೋದಿ ಅವರು ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಶೃಂಗಸಭೆ 2023ರಲ್ಲೂ ಭಾಗವಹಿಸಲಿದ್ದಾರೆ. ಅಲ್ಲಿ 10 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 14,000 ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

Advertisement
Tags :
GOVERNMENTindiaLatestNewsNewsKannadaಕಲ್ಕಿಧಾಮ್‌ನವದೆಹಲಿಪ್ರಧಾನಿ ನರೇಂದ್ರ ಮೋದಿಹಿಂದೂದೇಗುಲ
Advertisement
Next Article