For the best experience, open
https://m.newskannada.com
on your mobile browser.
Advertisement

ಕರಾವಳಿಯಲ್ಲಿ "ಕ್ಲಾಂತ" ಚಿತ್ರಕ್ಕೆ ಫುಲ್‌ ಮಾರ್ಕ್ಸ್‌ ಕೊಟ್ಟ ಪ್ರೇಕ್ಷಕರು

ತುಳುನಾಡಿನವರೇ ಸೇರಿ ನಿರ್ಮಾಣ ಮಾಡಿರುವ ಕನ್ನಡದ ಹೊಸ ಚಿತ್ರ 'ಕ್ಲಾಂತ' ಕರಾವಳಿಯಲ್ಲಿ ಫೆಬ್ರವರಿ 2ರಂದು ಎಲ್ಲ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಪ್ರೇಕ್ಷಕರು ಕೂಡ ನಿನೆಮಾ ನೋಡಿ ಫುಲ್‌ ಮಾರ್ಕ್ಸ್‌ ಕೊಟ್ಟಿದ್ದಾರೆ.
12:05 PM Feb 03, 2024 IST | Ashitha S
ಕರಾವಳಿಯಲ್ಲಿ  ಕ್ಲಾಂತ  ಚಿತ್ರಕ್ಕೆ  ಫುಲ್‌ ಮಾರ್ಕ್ಸ್‌ ಕೊಟ್ಟ ಪ್ರೇಕ್ಷಕರು

ಮಂಗಳೂರು: ತುಳುನಾಡಿನವರೇ ಸೇರಿ ನಿರ್ಮಾಣ ಮಾಡಿರುವ ಕನ್ನಡದ ಹೊಸ ಚಿತ್ರ "ಕ್ಲಾಂತ" ಕರಾವಳಿಯಲ್ಲಿ ಫೆಬ್ರವರಿ 2ರಂದು ಎಲ್ಲ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಪ್ರೇಕ್ಷಕರು ಕೂಡ ನಿನೆಮಾ ನೋಡಿ ಫುಲ್‌ ಮಾರ್ಕ್ಸ್‌ ಕೊಟ್ಟಿದ್ದಾರೆ.

Advertisement

ಸಿನೆಮಾ ನೋಡಿದ ಬಳಿಕ ಪ್ರೇಕ್ಷಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಉತ್ತಮ ಸಿನೆಮಾ, ವಿಜಯ್‌ ಪ್ರಕಾಶ್‌ ಅವರ ಧ್ವನಿಯಲ್ಲಿ ಮೂಡಿ ಬಂದ ನಿನೆಮಾದ ಹಾಡು ಕೂಡ ಅದ್ಬುತವಾಗಿದೆ. ಈಗಿನ ಯುವಜನಾಂಗಕ್ಕೆ ಬೇಕಾಗಿರುವ ಉತ್ತಮವಾಗ ಒಂದು ಸಂದೇಶವನ್ನೇ ಈ ಚಿತ್ರದಲ್ಲಿ ನೀಡಿದ್ದಾರೆ. ಮುಖ್ಯವಾಗಿ ಕೊರಗಜ್ಜನ ಬಗೆಗಿನ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಪೋಷಕರು ಮಾತ್ರವಲ್ಲದೇ ಎಲ್ಲ ವರ್ಗದವರು ಬಂದು ನೋಡಬಹುದಾದ ಚಿತ್ರ ಇದು. ತುಳುನಾಡಿನ ಘನತೆಯನ್ನು ಈ ಚಿತ್ರ ಮತ್ತಷ್ಟು ಹೆಚ್ಚಿಸಿದೆ ಎಂದು ಈ ಚಿತ್ರಕ್ಕೆ ಫುಲ್‌ ಮಾರ್ಕ್‌ ಕೊಟ್ಟಿದ್ದಾರೆ.

"ಕ್ಲಾಂತ" ಎಂಬ ಪದಕ್ಕೆ ಸಂಸ್ಕೃತದಲ್ಲಿ ದಣಿವು ಎಂಬ ಅರ್ಥವಿದೆ. ಚಿತ್ರದಲ್ಲಿ ತುಳುನಾಡಿ ಕೊರಗಜ್ಜ ದೈವದ ಪವಾಡದ ಬಗ್ಗೆ ಹೇಳಲಾಗಿದೆ. ಆರಂಭದಲ್ಲಿ ಹಾಡು, ಇಂಟ್ರೊಡಕ್ಷನ್ ಮೂಲಕ ಮೂಲ ಕಥೆ ತೆರೆದುಕೊಳ್ಳುತ್ತದೆ. ಆದರೆ, ಒಮ್ಮೆ ಕಥೆ ತೆರೆದುಕೊಂಡ ನಂತರ ಕ್ಷಣ ಕ್ಷಣಕ್ಕೂ ರೋಚಕವಾಗಿ, ಟ್ವಿಸ್ಟ್‌ಗಳ ಮೂಲಕ ಸಾಗಿ ಪ್ರೇಕ್ಷಕರನ್ನು ಕಥೆ ಜೊತೆ ಹೆಜ್ಜೆ ಹಾಕಿಸುತ್ತದೆ. ಈ ಸಿನಿಮಾದಲ್ಲಿ ಇಂದಿನ ಯುವಜನಾಂಗಕ್ಕೆ ಒಂದು ಸಂದೇಶ ಹೇಳುವ ಪ್ರಯತ್ನ ಕೂಡಾ ತಂಡ ಮಾಡಿದೆ. ದಟ್ಟ ಕಾನನದ ನಡುವೆ ಪ್ರೇಮಿಗಳ ರೋಮಾನ್ಸ್‌, ಬಳಿಕ ನಡೆಯುವ ಹೊಡೆದಾಟಗಳು ಚಿತ್ರದ ಕುರಿತು ನಿರೀಕ್ಷೆ ಹೆಚ್ಚಿಸುತ್ತದೆ.

Advertisement

ಈ ಚಿತ್ರಕ್ಕೆ ವೈಭವ್ ಪ್ರಶಾಂತ್ ನಿರ್ದೇಶನ ಮಾಡಿದ್ದು ವಿಘ್ನೇಶ್‌ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಹಿಂದೆ ತೆರೆಕಂಡಿದ್ದ ದಗಲ್ ಬಾಜಿಲು ತುಳು ಚಿತ್ರದ ಜೋಡಿ ಆದ ನಿರ್ದೇಶಕ ವೈಭವ್ ಪ್ರಶಾಂತ್ ಹಾಗೂ ನಾಯಕ ವಿಘ್ನೇಶ್‌ ಈ ಮೂಲಕ ಮತ್ತೊಮ್ಮೆ ಜೊತೆಯಾಗುತ್ತಿದ್ದಾರೆ. ಅಲ್ಲದೇ ಕ್ಲಾಂತ ಸಿನಿಮಾ ಮೂಲಕ ನಟಿ ಸಂಗೀತಾ ಭಟ್ ಮತ್ತೆ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ.

ಗ್ಯಾಂಗ್ ಒಂದು ದಟ್ಟ ಅರಣ್ಯಕ್ಕೆ ತೆರಳುವ ಇಬ್ಬರು ಪ್ರೇಮಿಗಳನ್ನು ಅಟ್ಯಾಕ್ ಮಾಡುತ್ತದೆ. ಆ ಗ್ಯಾಂಗ್‌ನಿಂದ ಆ ಜೋಡಿ ಹೇಗೆ ತಪ್ಪಿಕೊಂಡು ಬರ್ತಾರೆ? ಆ ಗ್ಯಾಂಗ್ ವಿರುದ್ಧ ಹೇಗೆ ಹೋರಾಡುತ್ತಾರೆ ಅನ್ನೋದನ್ನು ಟೀಸರ್‌ನಲ್ಲಿ ತೋರಿಸಲಾಗಿದೆ.

ಇನ್ನು ಚಿತ್ರದ ನಾಯಕನ ನಟನೆ ಹಾಗೂ ಪವರ್ ಫುಲ್ ಆಕ್ಷನ್ ನೋಡಿ ಸಿನಿರಸಿಕರು ಇವರಿಗೆ ಕನ್ನಡ ಚಿತ್ರರಂಗದಲ್ಲಿ ಮಾಸ್ ಹೀರೋ ಆಗೋ ಎಲ್ಲ ಲಕ್ಷಣ ಇದೆ ಎಂದು ಹೇಳುತ್ತಿದ್ದಾರೆ. “ಎರಡನೇ ಸಲ ಹಾಗೂ ದಯವಿಟ್ಟು ಗಮನಿಸಿ” ಚಿತ್ರಗಳ ಖ್ಯಾತಿಯ ಸಂಗೀತ ಭಟ್ ಈ ಚಿತ್ರಕ್ಕೆ ನಾಯಕಿಯಾಗಿದ್ದಾರೆ ಅವರ ನಟನೆ ಹಾಗೂ ಆಕ್ಷನ್ ಗೂ ಎಲ್ಲಾ ಕಡೆ ಅದ್ಭುತ ಪ್ರಶಂಸೆ ವ್ಯಕ್ತವಾಗಿದೆ.

ಅನುಗ್ರಹ ಪವರ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ಉದಯ್ ಅಮ್ಮನ್ಯ ಅವರ ಬೆಂಬಲ ಈ ಚಿತ್ರಕ್ಕಿದೆ. ಕ್ಲಾಂತಗೆ ಎಪಿ ಚಂದ್ರಕಾಂತ್ ಅವರ ಸಂಗೀತ, ಮೋಹನ್ ಲೋಕನಾಥನ್ ಅವರ ಛಾಯಾಗ್ರಹಣ ಮತ್ತು ಪಿಆರ್ ಸೌಂದರ್ ರಾಜ್ ಅವರ ಸಂಕಲನವಿದೆ.

ಸಿನಿಮಾದ ಮೂರು ಹಾಡುಗಳಿಗೆ ಎಸ್‌. ಪಿ ಚಂದ್ರಕಾಂತ್‌ ಸಂಗೀತ ಸಂಯೋಜಿಸಿದ್ದಾರೆ. ವಿಜಯ ಪ್ರಕಾಶ್‌, ನಯನಾ ನಾಗರಾಜ್‌, ರಾಜೇಶ್‌ ಕೃಷ್ಣನ್‌, ಚೇತನ್‌, ಐರಾ ಆಚಾರ್ಯ ಮೊದಲಾದವರು ಗೀತೆಗಳಿಗೆ ಧ್ವನಿಯಾಗಿದ್ದಾರೆ. ಇನ್ನು ಇತ್ತೀಚೆಗಷ್ಟೇ ರಾಜೇಶ್ ಕೃಷ್ಣನ್ ಹಾಡಿರುವ ಕೊರಗಜ್ಜ ಕುರಿತ ಹಾಡನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದು, ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

"ಕ್ಲಾಂತ" ಸಿನಿಮಾದಲ್ಲಿ ವಿಶ್ಲೇಶ್ ನಾಯಕರಾಗಿ ಹಾಗೂ ಸಂಗೀತಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಅವರೊಂದಿಗೆ ಶೋಭರಾಜ್‌, ವೀಣಾ ಸುಂದ‌ರ್, ಸಂಗೀತಾ, ದೀಪಿಕಾ, ಪ್ರವೀಣ್ ಜೈನ್, ಸ್ವಪ್ನಾ ಶೆಟ್ಟಿಗಾರ್ ನಟಿಸಿದ್ದಾರೆ. ನಾಯಕ ವಿಶ್ಲೇಶ್ ವಿಭಿನ್ನ ಶೇಡ್‌ಗಳಲ್ಲಿ ಗಮನ ಸೆಳೆಯುವ ಜೊತೆಗೆ ಪಾತ್ರದಲ್ಲಿ ಮಿಂಚಿದ್ದಾರೆ. ದ್ರಿಲ್ಲರ್ ಸಿನಿಮಾವನ್ನು ಇಷ್ಟಪಡುವವರಿಗೆ “ಕ್ಲಾಂತ ಖುಷಿ ನೀಡಬಹುದು.

Advertisement
Tags :
Advertisement