For the best experience, open
https://m.newskannada.com
on your mobile browser.
Advertisement

ರಾಜ್ಯ ಬಜೆಟ್ 2024: ಕೆಲವೇ ಹೊತ್ತಿನಲ್ಲಿ ಬಜೆಟ್​ ಮಂಡಿಸಲಿರುವ ಸಿಎಂ ಸಿದ್ದು

ಇಂದು (ಫೆ.26) 2024-25ನೇ ಸಾಲಿನ ರಾಜ್ಯ ಬಜೆಟ್​ಗೆ ಕ್ಷಣಗಣನೆ ಆರಂಭಗೊಂಡಿದ್ದು, ಇಂದು ಬೆಳಗ್ಗೆ 10:15ಕ್ಕೆ​ ಸಿಎಂ ಸಿದ್ದರಾಮಯ್ಯ ಬಜೆಟ್​ ಮಂಡಿಸಲಿದ್ದಾರೆ. ಈ ಮೂಲಕ 15ನೇ ಬಾರಿಗೆ ಬಜೆಟ್​ ಮಂಡಿಸಿ, ಹೊಸ ದಾಖಲೆಗೆ ಸಜ್ಜಾಗಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುವ ಮುನ್ನ ಬಜೆಟ್​ ಘೋಷಿಸಲು ಮುಂದಾಗಿರುವ ಮುಖ್ಯಮಂತ್ರಿಗಳು, ಈ ಬಾರಿ ಜನರಿಗೆ ಹೊರಯಾಗದಂತೆ, ಲಾಭದಾಯಕವಾಗುವಂತೆ ನಡೆಸಿಕೊಡಬಹುದು ಎಂಬ ನಿರೀಕ್ಷೆ ಹೆಚ್ಚಿದೆ.
09:36 AM Feb 16, 2024 IST | Ashitha S
ರಾಜ್ಯ ಬಜೆಟ್ 2024  ಕೆಲವೇ ಹೊತ್ತಿನಲ್ಲಿ ಬಜೆಟ್​ ಮಂಡಿಸಲಿರುವ ಸಿಎಂ ಸಿದ್ದು

ಬೆಂಗಳೂರು: ಇಂದು (ಫೆ.26) 2024-25ನೇ ಸಾಲಿನ ರಾಜ್ಯ ಬಜೆಟ್​ಗೆ ಕ್ಷಣಗಣನೆ ಆರಂಭಗೊಂಡಿದ್ದು, ಇಂದು ಬೆಳಗ್ಗೆ 10:15ಕ್ಕೆ​ ಸಿಎಂ ಸಿದ್ದರಾಮಯ್ಯ ಬಜೆಟ್​ ಮಂಡಿಸಲಿದ್ದಾರೆ. ಈ ಮೂಲಕ 15ನೇ ಬಾರಿಗೆ ಬಜೆಟ್​ ಮಂಡಿಸಿ, ಹೊಸ ದಾಖಲೆಗೆ ಸಜ್ಜಾಗಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುವ ಮುನ್ನ ಬಜೆಟ್​ ಘೋಷಿಸಲು ಮುಂದಾಗಿರುವ ಮುಖ್ಯಮಂತ್ರಿಗಳು, ಈ ಬಾರಿ ಜನರಿಗೆ ಹೊರಯಾಗದಂತೆ, ಲಾಭದಾಯಕವಾಗುವಂತೆ ನಡೆಸಿಕೊಡಬಹುದು ಎಂಬ ನಿರೀಕ್ಷೆ ಹೆಚ್ಚಿದೆ.

Advertisement

ಇನ್ನು ಕೆಲವೇ ಹೊತ್ತಿನಲ್ಲಿ ಸಿಎಂ ಸಿದ್ದರಾಮಯ್ಯ ಬಜೆಟ್​ ಮಂಡಿಸಲಿದ್ದಾರೆ. ಕಾವೇರಿ ನಿವಾಸದಲ್ಲಿ ಅಧಿಕಾರಿಗಳು ಅವರಿಗೆ ಬಜೆಟ್ ಪ್ರತಿ ಹಸ್ತಾಂತರಿಸಿದರು. ಕಳೆದ ಬಾರಿ ಬಜೆಟ್ ಗಾತ್ರ 3.27 ಲಕ್ಷ ಕೋಟಿ ರೂಪಾಯಿ ಇತ್ತು. ಈ ಬಾರಿ 3.50 ಲಕ್ಷ ಕೋಟಿ ಅಥವಾ 3.80 ಲಕ್ಷ ಕೋಟಿ ತಲುಪುವ ಸಾಧ್ಯತೆ ಇದೆ. ಕಳೆದ ಬಜೆಟ್‌ನಲ್ಲಿ 85,815 ಕೋಟಿ ರೂ. ಸಾಲದ ಮೊರೆ ಹೋಗಿತ್ತು. ಈ ಬಾರಿ ಅಂದಾಜು 1 ಲಕ್ಷ ಕೋಟಿಗೆ ಸಾಲ ಹೆಚ್ಚಾಗುವ ಸಾಧ್ಯತೆ ಇದೆ.

Advertisement
Advertisement
Tags :
Advertisement