For the best experience, open
https://m.newskannada.com
on your mobile browser.
Advertisement

ಉಚಿತ ಭಾಗ್ಯಗಳಿಂದ ಕರ್ನಾಟಕದ ಸ್ಥಿತಿ ಗಂಭೀರ: ಕೇಂದ್ರಕ್ಕೆ ಯತ್ನಾಳ್ ಪತ್ರ​

ಗ್ಯಾರಂಟಿ ಯೋಜನೆ ಬಗ್ಗೆ ಕೇಂದ್ರ ಹಣಕಾಸು ಸಚಿವರಿಗೆ ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಪತ್ರ ಬರೆದಿದ್ದಾರೆ.
08:17 PM Jul 11, 2024 IST | Ashitha S
ಉಚಿತ ಭಾಗ್ಯಗಳಿಂದ ಕರ್ನಾಟಕದ ಸ್ಥಿತಿ ಗಂಭೀರ  ಕೇಂದ್ರಕ್ಕೆ ಯತ್ನಾಳ್ ಪತ್ರ​

ವಿಜಯಪುರ: ಗ್ಯಾರಂಟಿ ಯೋಜನೆ ಬಗ್ಗೆ ಕೇಂದ್ರ ಹಣಕಾಸು ಸಚಿವರಿಗೆ ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಪತ್ರ ಬರೆದಿದ್ದಾರೆ.

Advertisement

‘ಬುಧವಾರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಪತ್ರ ನೀಡಿದ್ದಾರೆ. ‘ಗ್ಯಾರಂಟಿ ಯೋಜನೆಗಳಿಂದ ಆಗ್ತಿರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಮಾಹಿತಿ ಉಲ್ಲೇಖಿಸಿ, ಹಣಕಾಸಿನ ಜವಾಬ್ದಾರಿ ಹಾಗೂ ಬಜೆಟ್ ನಿರ್ವಹಣ ಕಾಯ್ದೆ ಉಲ್ಲಂಘನೆ ಆರೋಪ ಮಾಡಿದ್ದಾರೆ.

ಇನ್ನು ಕಾಂಗ್ರೆಸ್​ ಸರ್ಕಾರ ಕೊಟ್ಟಿರುವ ಉಚಿತ ಭಾಗ್ಯಗಳು, ರಾಜ್ಯದ ಹಣಕಾಸು ಪರಿಸ್ಥಿತಿ ಮೇಲೆ ಪರಿಣಾಮ ಬೀರಿದೆ. ಕೇಂದ್ರ ಸರ್ಕಾರ ತನ್ನ ಅಧಿಕಾರ ಬಳಸಿ ಕ್ರಮಕೈಗೊಳ್ಳುವಂತೆ ಕೇಂದ್ರ ಹಣಕಾಸು ಸಚಿವರಿಗೆ ನೀಡಿರುವ ಪತ್ರದಲ್ಲಿ ಯತ್ನಾಳ್ ವಿವರಿಸಿದ್ದಾರೆ.

Advertisement

ಈ ಹಿಂದೆಯೂ ವಾಲ್ಮೀಕಿ ನಿಗಮದ ಅಕ್ರಮದ ಬಗ್ಗೆಯೂ ಕೇಂದ್ರ ಗೃಹಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದರು. ಜೊತೆಗೆ ಶಾಸಕ ಯತ್ನಾಳ್ ಪತ್ರಕ್ಕೆ ಕೇಂದ್ರ ಗೃಹಸಚಿವ ಅಮಿತ್ ಶಾ ಉತ್ತರ ನೀಡಿದ್ದರು. ಇದೀಗ ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ಗಮನ ಹರಿಸುವುದಾಗಿ ಕೇಂದ್ರ ಹಣಕಾಸು ಸಚಿವರು ಭರವಸೆ ನೀಡಿದ್ದಾರೆ.

Advertisement
Tags :
Advertisement