ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬೆಂಗಳೂರಿನ ರಸ್ತೆಬದಿಯಲ್ಲಿ ದೋಸೆ, ಫಿಲ್ಟರ್ ಕಾಫಿ ಸವಿದ ಬಾಲಿವುಡ್ ನಟ

ಮಹಿಳಾ ಪ್ರೀಮಿಯರ್ ಲೀಗ್‌ನ(WPL) ಉದ್ಘಾಟನಾ ಸಮಾರಂಭದಲ್ಲಿ ನಟ ಕಾರ್ತಿಕ್​​ ಆರ್ಯನ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ತಮ್ಮ ಹಿಟ್ ಚಿತ್ರ 'ಭೂಲ್ ಭುಲೈಯ್ಯಾ 2'ರ 'ಹರೇ ರಾಮ್' ಹಾಡು ಸೇರಿದಂತೆ ಅನೇಕ ಹಾಡುಗಳಿಗೆ ಪ್ರದರ್ಶನ ನೀಡಿದರು.
06:08 PM Feb 25, 2024 IST | Ashitha S

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್‌ನ(WPL) ಉದ್ಘಾಟನಾ ಸಮಾರಂಭದಲ್ಲಿ ನಟ ಕಾರ್ತಿಕ್​​ ಆರ್ಯನ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ತಮ್ಮ ಹಿಟ್ ಚಿತ್ರ 'ಭೂಲ್ ಭುಲೈಯ್ಯಾ 2'ರ 'ಹರೇ ರಾಮ್' ಹಾಡು ಸೇರಿದಂತೆ ಅನೇಕ ಹಾಡುಗಳಿಗೆ ಪ್ರದರ್ಶನ ನೀಡಿದರು.

Advertisement

ಬಾಲಿವುಡ್​ ನಟರಾದ​​ ಶಾರುಖ್ ಖಾನ್, ಶಾಹಿದ್ ಕಪೂರ್, ವರುಣ್ ಧವನ್ ಮತ್ತು ಟೈಗರ್ ಶ್ರಾಫ್ ಸೇರಿದಂತೆ ಹಲವು ತಾರೆಯರು ಕೂಡ ಭಾಗಿಯಾಗಿ ನೃತ್ಯ ಪ್ರದರ್ಶನ ನೀಡಿದರು.

ನಂತರ ನಗರದಲ್ಲಿ ನಡೆದ ಕಾರ್ತಿಕ್‌ ಆರ್ಯನ್ ಬೆಂಗಳೂರು ರೌಂಡ್ಸ್ ಹೊಡೆದಿದ್ದು, ಫೋಟೋಗಳನ್ನು ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಫೆಬ್ರವರಿ 24ರಂದು 'ಸತ್ಯಪ್ರೇಮ್​ ಕಿ ಕಥಾ' ಸಿನಿಮಾ ನಟರೂ ಆಗಿರುವ ಕಾರ್ತಿಕ್ ಆರ್ಯನ್ ಬೆಂಗಳೂರಿನ 'ದಿ ರಾಮೇಶ್ವರಂ ಕೆಫೆ'ಗೆ ಭೇಟಿ ಕೊಟ್ಟರು. ಈ ಸಂದರ್ಭದಲ್ಲಿ ಕಾಫಿ ಕುಡಿದು ದೋಸೆ ಸವಿದಿದ್ದಾರೆ. ಅಲ್ಲದೇ 'ಐದು ಫಿಲ್ಟರ್​ ಕಾಫಿ ಕೊಡಿ' ಎಂದು ಕನ್ನಡ ಮಾತನಾಡುವ ಪ್ರಯತ್ನವನ್ನೂ ಮಾಡಿದರು. ಈ ಒಂದು ಪೋಸ್ಟ್‌ನಲ್ಲಿ 9 ಫೋಟೋ, ವಿಡಿಯೋಗಳಿದ್ದು ಎರಡು ಹೋಟೆಲ್​ಗಳಗೆ ಭೇಟಿ ಕೊಟ್ಟಂತಿದೆ. ಇತರೆ ಫೋಟೋಗಳಲ್ಲಿ ವೆಜ್​ ಥಾಲಿ ಸೇರಿದಂತೆ ಇತರೆ ಖಾದ್ಯಗಳ ರುಚಿಯುಂಡು ಸಂಭ್ರಮಿಸಿದ್ದಾರೆ.

Advertisement

Advertisement
Tags :
indiaKartik AaryanLatestNewsNewsKannadaSANDALWOODWPLದಿ ರಾಮೇಶ್ವರಂ ಕೆಫೆ'ಬೆಂಗಳೂರು
Advertisement
Next Article