ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕಾರವಾರ: ಅಕ್ರಮ ಗೋಮಾಂಸ ಮಾರಾಟದ ವಿರುದ್ಧ ಫತ್ವಾ

ಕರಾವಳಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಅಕ್ರಮ ಗೋ, ಗೋಮಾಂಸ ಸಾಗಾಟಕ್ಕೆ ಸಂಬಂಧಿಸಿದಂತೆ ಹಲವು ಹತ್ಯೆ, ಹಲ್ಲೆ ಪ್ರಕರಣಗಳು ದಾಖಲಾಗಿವೆ.
10:30 AM Dec 02, 2023 IST | Ramya Bolantoor

ಕಾರವಾರ: ಕರಾವಳಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಅಕ್ರಮ ಗೋ, ಗೋಮಾಂಸ ಸಾಗಾಟಕ್ಕೆ ಸಂಬಂಧಿಸಿದಂತೆ ಹಲವು ಹತ್ಯೆ, ಹಲ್ಲೆ ಪ್ರಕರಣಗಳು ದಾಖಲಾಗಿವೆ. ಇದೀಗ ಈ ನಿಟ್ಟಿನಲ್ಲಿ ಅಕ್ರಮ ಗೋಮಾಂಸ ಸಾಗಾಟ ಮತ್ತು ಮಾರಾಟದ ವಿರುದ್ಧ ಭಟ್ಕಳದ ತಂಝೀಮ್ ಫತ್ವಾ ಹೊರಡಿಸಿದೆ. ಈ ವಾರದ ಆರಂಭದಲ್ಲಿ ಫತ್ವಾವನ್ನು ಹೊರಡಿಸಲಾಗಿತ್ತು. ಅಕ್ರಮ ಗೋಸಾಗಣೆ ಮತ್ತು ಮಾರಾಟ ಮಾಡುವವರ ಬಳಿ ಗೋಮಾಂಸವನ್ನು ಖರೀದಿಸದಂತೆ ಭಟ್ಕಳದ ಜನರಿಗೆ ತಿಳಿಸಲಾಗಿದೆ ಎಂದು ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದರ್ ಅವರು ಹೇಳಿದ್ದಾರೆ.

Advertisement

ಇಸ್ಲಾಂನಲ್ಲಿ ಇಂತಹ ಕಾನೂನುಬಾಹಿರ ಕೃತ್ಯಗಳಿಗೆ ಅವಕಾಶವಿಲ್ಲ, ಜಾನುವಾರುಗಳನ್ನು ಬೀದಿಯಿಂದ ಹೊತ್ತುಕೊಂಡು ಬಂದು ಮಾರಾಟ ಮಾಡಿದ ನಿದರ್ಶನಗಳಿವೆ. “ಜಾನುವಾರುಗಳನ್ನು ಮಾರುಕಟ್ಟೆಯಿಂದ ಖರೀದಿಸಿ ಸಾಗಿಸಿದರೆ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ರಾಜ್ಯದ ಹಾವೇರಿ, ಉಡುಪಿ ಮತ್ತಿತರ ಕಡೆ ಜಾನುವಾರು ಮಾರುಕಟ್ಟೆಗಳಿವೆ. ಈ ಮಾರುಕಟ್ಟೆಗಳಿಂದ ಜಾನುವಾರುಗಳನ್ನು ಖರೀದಿಸಬಹುದು ಎಂದು ತಿಳಿಸಿದರು. ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುವ ಮತ್ತು ಗೋಮಾಂಸ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾವು ಪೊಲೀಸರಿಗೆ ಮನವಿ ಮಾಡಿಕೊಂಡಿದ್ದೇವೆಂದು ಹೇಳಿಕೆ ನೀಡಿದ್ದಾರೆ.

Advertisement
Advertisement
Tags :
LatestNewsNewsKannadaಉಡುಪಿಕಾರವಾರಮಂಗಳೂರು
Advertisement
Next Article